ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಸ್ಕಿ : ಪಟ್ಟಣದ ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ  

ವಿದ್ಯಾರ್ಥಿಗಳು ಸರ್ವರು ಸಮಾನರು ಎಂಬ ಸಮಾನತೆಯ ಸಾರುವ ಚಿತ್ರ ಗಳನ್ನು ಹಿಡಿದು ವಂದೇ ಮಾತಂ ಘೋಷಣೆ ಕೂಗುತ್ತಾ ಸಾಗಿದರು.

ನಂತರ ಕಾಲೇಜ್‌ನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರುದ್ರಯ್ಯ ಸ್ವಾಮಿ ಬಳಗಾನೂರ ರವರು ಮಾತನಾಡಿ

ಕುಟುಂಬದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಮಹಿಳೆಯ ಪಾತ್ರ ಹೆಚ್ಚಿರುತ್ತದೆ. ಲಿಂಗ ತಾರತಮ್ಯವಿಲ್ಲದೆ ಮಹಿಳೆಯರನ್ನು ಗೌರವಿಸುವ ಮತ್ತು ಅವರ ಹಕ್ಕು ಪಾಲಿಸುವ ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ, ಕಾಲೇಜಿನ ಪ್ರಾಚಾರ್ಯರಾದ ಸಿದ್ದಪ್ಪ ಉದ್ಬಾಳ್, ಉಪನ್ಯಾಸಕರಾದ ನಾಗರಾಜ್ ಮಸ್ಕಿ ಅರ್ಜುನ್ ವೆಂಕಟಾಪುರ, ಸಿದ್ದಪ್ಪ ಗೋನಾಳ್, ಶ್ರೀಕಾಂತ್ ಹಿರೇಮಠ್ ಹಾಲಾಪುರ್, ಹುಸೇನ್ ಬಾಷಾ ಮಸ್ಕಿ ,ಹುಸೇನ್ ಬಾಷಾ ಬಳಗಾನೂರ, ಪರಶುರಾಮ್ ದೊಡ್ಡಮನಿ ,ಮಂಜುನಾಥ್ ಚಿಲ್ಕರಾಗಿ, ದೀಪಕ್, ಯಮನೂರು ಕನ್ನಾರಿ, ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ