ಕೌಶಲ್ಯ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ : ಸಿದ್ದಪ್ಪ ಉದ್ಬಾಳ
ಮಸ್ಕಿ : ಕೌಶಲ್ಯ ತರಬೇತಿಯನ್ನು ಯುವಕರು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿದ್ದಪ್ಪ ಉದ್ಬಾಳ ರವರು ಹೇಳಿದರು.
ಪಟ್ಟಣದಲ್ಲಿ ಸನ್ ರೈಸ್ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ರಾಯಚೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆ ಹಾಗೂ ಪರೀಕ್ಷೆ ಪೂರ್ವ ತರಬೇತಿ ಕೇಂದ್ರದ ವತಿಯಿಂದ ಜರುಗುವ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಯುವಕರು ಓದು ಬರಹ ಹಾಗೂ ಜ್ಞಾನದ ಬಗ್ಗೆ ತಿಳಿದುಕೊಳ್ಳದೆ ಕಲಹಾರಣ ಮಾಡುತ್ತ ಸಮಯವನ್ನು ವ್ಯರ್ಥ ಮಾಡುತ್ತಾ ಜೀವನ ನಡೆಸುತಿದ್ದೇವೆ.
ಯುವಕರು ಈ ರೀತಿಯ ತರಬೇತಿಗಳನ್ನು ಪಡೆದುಕೊಂಡು ಸರಕಾರದ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾ ಅಭಿವೃದ್ಧಿಯನ್ನು ಕಾಣಬೇಕು ಹಾಗೂ ಸರಕಾರದ ಪ್ರತಿಯೊಂದು ಯೋಜನೆಗಳ ಲಾಭ ಪಡೆದುಕೊಳ್ಳಲು ಮನವಿ ಮಾಡಿದರು.
ಅದೇ ರೀತಿ,SKES ಪ್ಯಾರಾಮೆಡಿಕಲ್ ಕಾಲೇಜ್ ಸಂಸ್ಥೆಯ ಅಧ್ಯಕ್ಷರಾದ ಡಾ. ಬಾಬುರಾವ್ ಎಂ
ರಾಯಚೂರು ರವರು ಮಾತನಾಡಿ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕರನ್ನು ಉದ್ದೇಶಿಸಿ ಮಾತನಾಡಿ ಸ್ಪರ್ಧೆ ಮಾಡೋದಕ್ಕೆ ಯಾವುದೇ ರೀತಿಯ ಭೇದಭಾವ ತಾರತಮ್ಯ ಇರುವುದಿಲ್ಲ. ಆದ್ದರಿಂದ ನಾವುಗಳು ಅಂತಹ ಮೇಲು ಕೀಳು ತಾರತಮ್ಯಗಳನ್ನು ಹಿಂದಕ್ಕೆ ತಳ್ಳಿ ಮುಂದೆ ಬಂದಾಗ ಮಾತ್ರ ನಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಗಳು ಸಿಗಲಿಕ್ಕೆ ಸಾಧ್ಯ ಎಂದು ತಿಳಿಸಿದರು.
ಅದೇ ರೀತಿ ಈ ಕೌಶಲ್ಯ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗದ ರವೀಂದ್ರ ಕುಮಾರ್ ಹಲವು ರೀತಿಯ ತರಬೇತಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ, ಉಪನ್ಯಾಸಕರಾದ ಹನುಮಂತಪ್ಪ ಚಿಕ್ಕ ಕಡಬೂರು, ಅರ್ಜುನ್ ವೆಂಕಟಾಪುರ, ಸಿದ್ದಪ್ಪ ಗೋನಾಳ,
ಮಂಜುನಾಥ್,ಸ್ವಾತಿ, ಅಶ್ವಿನಿ,ಸುನಿತಾ .ಎಂ, ಉಪನ್ಯಾಸಕರು,ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ