ಕಲ್ಯಾಣ ಕರ್ನಾಟಕ ಸಮೃದ್ಧಿ ನಾಡನ್ನಾಗಿ ಮಾಡಿ.ಪಿ ಡಿ ಓ ಮಂಜುಳ ಕರೆ.
ಮಸ್ಕಿ : ತಾಲೂಕಿನ ಮಾರಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ. ಕಾರಿಥಾಸ್ ಇಂಡಿಯನ್ ನವ ದೆಹಲಿ,ಬಿಡಿಡಿಎಸ್ ಸಂಸ್ಥೆ ಬಳ್ಳಾರಿ.ಹಾಗೂ ಗ್ರಾಮ ಪಂಚಾಯತ್ ಮಾರಲದಿನ್ನಿ ಇವರ ಸಹಯೋಗದಲ್ಲಿ. ಉಜ್ಜಿವನ ಯೋಜನೆಯ ಅಡಿಯಲ್ಲಿ ನೆಡು ತೋಪು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಮಾರಲದಿನ್ನಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದಂತ ಶ್ರೀಮತಿ ಮಂಜುಳಾ ಇವರು ಈ ನಮ್ಮ ಕಲ್ಯಾಣ ಕರ್ನಾಟಕವನ್ನು ಸಮೃದ್ಧಿ ನಾಡನ್ನಾಗಿ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಕಾರಿತಾಸ್ ಇಂಡಿಯ ನವದೆಹಲಿಯ ಹೈಡ್ರಾಜಿಸ್ಟ್ ಡಾಕ್ಟರ್ ಹರಿದಾಸ.ಇವರು ಹೊಂಗೆ ಗಿಡದ ಎಲೆಯನ್ನು ಕುರಿತು ಉಸಿರಾಟಕ್ಕೆ,ಮಣ್ಣಿಗೂ ಅವಮಾನಕ್ಕೂ ಇರುವ ಸಂಬಂಧದ ಕುರಿತು ಮಾತನಾಡಿದರು.
ನಂತರ ಬಿಡಿಡಿಎಸ್ ಸಂಸ್ಥೆಯ ನಿರ್ದೇಶಕರಾದ ಸ್ವಾಮಿ ಯಾಗಪ್ಪ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡವರನ್ನುಸಮಾಜಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಿದರು. ಪ್ರಾಸ್ತಾವಿಕವಾಗಿ ಈ ಕಾರ್ಯಕ್ರಮದ ಕುರಿತು ಉಜ್ಜೀವನ ಯೋಜನೆಯ ಸಂಯೋಜಕರಾದ ಶಾಂತಪ್ಪ ಸೋಮನಮರಡಿವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಂಚಾಯತಿ ಅಧ್ಯಕ್ಷರಾದ ಶ್ರೀ ಬೀರಪ್ಪ, ಮೌನೇಶ, ಶರಣಬಸವ,ರಾಬರ್ಟ್ ಡಿಸೋಜ.,ನಾಗಪ್ಪ, ರಮೇಶ್, ಪರಶುರಾಮ ಉಪಸ್ಥಿತರಿದ್ದರು.ಹಾಗೂ ಹನುಮಂತ,ವಿಜಯ್ ಕುಮಾರ್, ಮುದುಕಪ್ಪ ಡಬ್ಬರ್ ಮಾಡು. ಉಸ್ಕಿಹಾಳ,ಮಾರಲದಿನ್ನಿ ಗ್ರಾಮಗಳ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ರೈತರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ