15 ದಿನದಿಂದ ಕುಡಿಯಲು ನೀರಿಲ್ಲದೇ ಶಾಲಾ ವಿದ್ಯಾರ್ಥಿಗಳ ಪರದಾಟ

ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೇಗುಡ್ಡ ಶಾಲಾ ಮಕ್ಕಳು ಕುಡಿಯಲು ಮತ್ತು ತಟ್ಟೆ ತೊಳೆಯಲು 15 ದಿನಗಳಿಂದ ನೀರಿಲ್ಲದೇ ಪರದಾಟ ಪಿಡಿಒ ಗಮನಕ್ಕೆ ತಂದರೂ ಕ್ಯಾರೇ ಎನ್ನದೆ ನಿರ್ಲಕ್ಷ್ಯ ತೋರಿದ್ದರಿಂದ ಶಾಲಾ ವಿದ್ಯಾರ್ಥಿಗಳು ತಟ್ಟೆ ಹಿಡಿದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದರು.

ಸತತ ಹದಿನೈದು ದಿನಗಳಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ಕರೇಗುಡ್ಡ) ಮೆದಿಕಿನಾಳ ಶಾಲಾ ಮಕ್ಕಳು ನೀರು ಇಲ್ಲದೇ ಪರದಾಟ ನಡೆಸಿದ್ದು,ಶಾಲೆಯ ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಯಾರೇ ಕರೆ ಮಾಡಿದರೂ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸುವ ಮೂಲಕ ಕರ್ತವ್ಯ ಲೋಪ ಎಸಗಿದ ಮೆದಿಕಿನಾಳ ಗ್ರಾಮ ಪಂಚಾಯತಿ ಪಿಡಿಒ ತಿಮ್ಮಣ್ಣ ಭೋವಿ. ಯಾರೋ ಮಾಡಿದ ಕರ್ತವ್ಯ ಲೋಪಕ್ಕೆ ಸಮಜಾಯಿಷಿ ಉತ್ತರ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಶಾಲೆಯಲ್ಲಿ ನೀರಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶೇಖರಪ್ಪ ಭಜಂತ್ರಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ತೆರಳಿ 15 ದಿನದಿಂದ ನೀರು ಬಂದಿಲ್ಲ ಎಂದು ಕೇಳಲು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ಕೇಳಿದರೇ ಕಛೇರಿಯಲ್ಲಿ ಇರುವುದಿಲ್ಲ. ನಂತರ ಸಿಬ್ಬಂದಿಯಾದ ಕಾರ್ಯದರ್ಶಿ ಅಮರೇಶ್ ಆಗಮಿಸಿ ಇಂದು ಪಿಡಿಒ ತಿಮ್ಮಣ್ಣ ಭೋವಿ ರವರು ರಾಯಚೂರಿಗೆ ತೆರಳಿದ್ದಾರೆ ನೀರಿನ ಸಮಸ್ಯೆಯನ್ನು ನಾಳೆಯೇ ಬಗೆಹರಿಸಲಾಗುವುದು ಎಂದು ಪಿಡಿಒ ಸಾಹೇಬ್ರು ಫೋನ್ ಕರೆಯ ಮೂಲಕ ಹೇಳಿದ್ದಾರೆ ಎಂದು ಸಮಜಾಯಿಷಿ ಉತ್ತರ ನೀಡಿದ್ದಾರೆ. ನಾಳೆಯಾದರೂ ನೀರು ಬರುವುದೇ ಕಾದು ನೋಡಬೇಕಿದೆ ...?

ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಸೇರಿದಂತೆ ಸಾರ್ವಜನಿಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ