ವಿವಿಧ ಯೋಜನೆಯಡಿ 31.73 ಕೋಟಿ.ರೂಗಳ ಕಾಮಗಾರಿ ಚಾಲನೆ

ಕೊಟ್ಟೂರು: ಪಟ್ಟಣ ಹಾಗೂ ತಾಲೂಕಿನ ಅನೇಕ ಹಳ್ಳಿಗಳಲ್ಲಿ ನಾನಾ ಯೋಜನೆಗಳಡಿಯಲ್ಲಿ ಮಂಜೂರಾದ ವಿವಿಧ ಕಾವಗಾರಿಗಳಿಗೆ ಕೆ.ನೇಮಿರಾಜ ನಾಯ್ಕ ಭೂಮಿಪೂಜೆ ನೆರವೇರಿಸಿದರು. 

ಹ.ಬೊ.ಹಳ್ಳಿ ಕ್ಷೇತ್ರಕ್ಕೆ ವಿವಿಧ ಯೋಜನೆಯಡಿ 31.73 ಕೋಟಿ.ರೂಗಳ ಕಾಮಗಾರಿಗಳಿಗೆ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಸಿಸಿ ರಸ್ತೆಗೆ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರಗಳಿಗೆ ಚಾಲನೆ ನೀಡಿದೆ. ಕೊಟ್ಟೂರು ತಾಲೂಕಿನಲ್ಲಿಯೂ ಸಿಸಿ ರಸ್ತೆ, ಚರಂಡಿ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ. ಕ್ಷೇತ್ರದ ಇನ್ನಿತರ ಅಭಿವೃದ್ಧಿ ಕಾವ್ಯಗಳಿಗೆ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮಾಡಲಾದ ಮನವಿಗೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಘೋಷಣೆಗೂ ಮೊದಲು ಅನುದಾನ ಮಂಜೂರಾದಲ್ಲಿ ಕೆಲಸಗಳನ್ನು ಆರಂಭಿಸಲಾಗುವುದು. ಕೊಟ್ಟೂರಿನ ಶ್ರೀ ಕರಿಬಸವೇಶ್ವರ ಸರ್ಕಾರಿ ಹಿ.ಪ್ರಾ.ಶಾಲೆಗೆ ಕಂಪ್ಯೂಟರ್ ಲ್ಯಾಬ್ ಮಂಜೂರು ಮಾಡಲಾಗಿದೆ ಎಂದ ಅವರು, ಶಾಲೆಯ ಕಟ್ಟಡಗಳಿಗೆ ಮತ್ತಷ್ಟು ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಮುಖಂಡರಾದ ಬಿ.ನಾಗರಾಜ, ಬಾದಾಮಿ ಮುತ್ತಣ್ಣ ಕಂದಗಲ್ಲು ನೀಲಕಂಠಪ್ಪ ಬಣಕಾರ ಕೊಟ್ರೇಶ, ಗಂಗನಹಳ್ಳಿ ಬಸವರಾಜ, ಎಲ್‌ ಐಸಿ ಗುರು, ಡಿಶ್ ಮಂಜುನಾಥ, ಎ.ಕೊಟ್ರೇಶ, ಮುಖ್ಯಾಧಿಕಾರಿ ಎ.ನಸರುಲ್ಲಾ ಇದ್ದರು.

ತಾಲೂಕಿನ ದೂಪದಹಳ್ಳಿ, ಹ್ಯಾಳ್ಯಾ, ಕಂದಗಲ್ಲು, ಚಿರಿಬಿ, ಜಾಗಟಗೇರಿ, ಕೆ.ಅಯ್ಯನಹಳ್ಳಿ ಹರಾಳು, ಅಂಬಳಿ, ಅಲಬೂರು ಗ್ರಾಮಗಳಲ್ಲಿ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಕೊಟ್ಟೂರು: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ನೇಮಿರಾಜ ನಾಯ್ ಚಾಲನೆ ನೀಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ