"ಕೊಟ್ಟೂರು ತಾಲ್ಲೂಕಿನಾದ್ಯಂತ ಇಸ್ಪೀಟ್ ಹಾವಳಿ"

*ಹೊರವಲಯ ಅಡ್ಡಗಳು *

ಕೊಟ್ಟೂರು ತಾಲ್ಲೂಕಿನಾದ್ಯಂತ ಇಸ್ಪೀಟ್ ಹಾವಳಿ ವಿಪರೀತ ಹೆಚ್ಚಾಗಿದ್ದು, ಹದಿಹರೆಯದ ಯುವಕರೇ ಈ ಚಟಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದಲ್ಲದೆ, ತಮ್ಮ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ೧೦ ರಿಂದ ೧೫ ಗ್ರೂಪ್‌ಗಳನ್ನು ಮಾಡಿಕೊಂಡು, ಹೊರವಲಯವಾಗಿರುವ  ಕೂಡ್ಲಿಗಿ ರಸ್ತೆ,ಬಣವಿಕಲ್ಲು ಅರಣ್ಯ, ಚಿರಿಬಿ ಅರಣ್ಯ, ಜೋಳದ ಕೂಡ್ಲಿಗಿ, ಚೀರನಹಳ್ಳಿ ಅರಣ್ಯಗಳ ಸ್ಥಳಗಳನ್ನು ಅಡ್ಡಾ ಮಾಡಿಕೊಂಡು ಇಸ್ಪೀಟು ಆಡುತ್ತಿದ್ದಾರೆ. ಪೋಲಿಸ್ ಠಾಣಾ ಸರಹದ್ದು ಮುಕ್ತಾಯವಾಗಿ ನಂತರ ವ್ಯಾಪ್ತಿಯಲ್ಲಿ ಆಡುವುದನ್ನು ಕೆಲ ಪೊಲೀಸ್ ಪೇದೆಗಳೇ ಇಸ್ಪೀಟ್ ಆಡಲು ಸಹಕಾರ ನೀಡಿ ತಮ್ಮ ಭಕ್ಷೀಸನ್ನು ಪಡೆಯುತ್ತಿದ್ದಾರೆ. ಎಂದು  ವ್ಯಕ್ತವಾಗಿವೆ.

"ಪೊಲೀಸರಿಗೆ ಭಕ್ಷೀಸು ನೀಡುವ ಗುಂಡ..?"

ಇತ್ತೀಚಿನ ದಿನಗಳಲ್ಲಿ ಚಪ್ಪರದಹಳ್ಳಿ ಹೊರವಲಯ, ಹಗರಿ ಗಜಪುರ ಹೊರವಲಯ , ಅಯ್ಯನಹಳ್ಳಿ ಹಗರಿ ಹಳ್ಳ, ಸಂಗಮೇಶ್ವರ ಹಗರಿ ಹಳ್ಳ ಇಲ್ಲಿ ಇಸ್ಪೀಟ್ ಆಟಗಳನ್ನು ಆಡಿಸುತ್ತಿರುವವರಲ್ಲಿ ಚಪ್ಪರದಹಳ್ಳಿಯ ಕೊಟ್ರೇಶ್ ಅಲಿಯಾಸ್ ಗುಂಡಾ ಹಾಗೂ ಕಡ್ಲಿ ಎಂಬುವವರು ಪ್ರಮುಖರಾಗಿದ್ದಾರೆ. ? ಇವರು ಹಲವಾರು ವರ್ಷಗಳಿಂದಲೂ ಇಸ್ಪೀಟ್ ಆಡುತ್ತಿದ್ದರೂ ಪೊಲೀಸ್ ಇಲಾಖೆ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಸ್ಪೀಟ್ ಆಡಿಸುವ ಅಡ್ಡಾಗಳು ಗೊತ್ತಿದ್ದರೂ ಕಣ್ಮುಚ್ಚಿಕೊಂಡು ಕುಳಿತಿದೆ. 

ಇಸ್ಪೀಟ್ ಆಡುವ ವಿಷಯ ಪೊಲೀಸರಿಗೆ ತಿಳಿದ ತಕ್ಷಣವೇ ಇಸ್ಪೀಟ್ ಆಡಿಸುವವರಿಂದ ಹಣ ಪಡೆಯುವ ಪೇದೆಗಳು ತಕ್ಷಣವೇ ಅವರಿಗೆ ಮಾಹಿತಿ ರವಾನಿಸಿ ಅವರನ್ನು ಅಲ್ಲಿಂದ ಪರಾರಿ ಮಾಡಿಸಿ, ಇತ್ತ ಕೂಸನ್ನೂ ತೂಗಿ, ಅತ್ತ  ಚಿವುಟುವಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ಇಸ್ಪೀಟ್ ಆಡುವ ಸ್ಥಳಗಳ ಬಗ್ಗೆ ಸಾರ್ವಜನಿಕರು ಪೊಲೀಸರಿರಗೆ ಮಾಹಿತಿ ನೀಡಿದರೆ ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹವರನ್ನು ಬೇರೆಡೆಗೆ ವರ್ಗಾಯಿಸದೆ ಹೊರತು ಇದಕ್ಕೆ ಮುಕ್ತಿಯಿಲ್ಲ ಎಂದು ಸ್ಥಳೀಯ ಪ್ರಜ್ಞಾವಂತ ನಾಗರೀಕರು.ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಜಯಪ್ರಕಾಶ್ , ಶಿರಿಬಿ ಪ್ರಕಾಶ್, ಪ್ರಭು,ಪಿ ಚಂದ್ರಶೇಖರ್ , ವಿನಯ್,ಮೇಲಾಧಿಕಾರಿಗಳು ಆಗ್ರಹಿಸಿದರು. 

ಕೋಟ್-೧

ಸುಮಾರು  ವರ್ಷಗಳಿಂದ ಚಪ್ಪರದಹಳ್ಳಿಯ ಕೊಟ್ರೇಶ್ ಅಲಿಯಾಸ್ ಗುಂಡ, ಕಡ್ಲಿ ಎಂಬುವರು ಇಸ್ಪೀಟ್ ದಂಧೆಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು ಅಕ್ರಮ ವ್ಯವಹಾರಗಳಿಗೆ ನೀರು ಹಾಕಿ ಬೆಳಸುತ್ತಿದ್ದಾರೆ. ಮೇಲಾಧಿಕಾರಿಗಳು ಇವರನ್ನು ಗಡಿಪಾರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.ಪ್ರವೀಣ್ ಕುಮಾರ್ ಮಾನವ ಹಕ್ಕುಗಳ ಕಾರ್ಯಕರ್ತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ