ಮಟ್ಕಾ ದಂಧೆ: ಕೂಲಿ ಕಾರ್ಮಿಕರೇ ಟಾರ್ಗೆಟ್‌! ಸಾಲದ ಶೂಲಕ್ಕೆ ಸಿಲುಕಿದ ಶ್ರಮಿಕ ವರ್ಗ ಬಲಿ

ಒಸಿ - ಮಟ್ಕಾ ದಂಧೆ ನಡೆಸುವರು ಗಡಿಪಾರು ಯಾವಗ..!

ಕೊಟ್ಟೂರು: ಪಟ್ಟಣ ಹಾಗೂ ಸುತ್ತಮುತ್ತನ ಹಳ್ಳಿಗಳಲ್ಲಿ ಮಟ್ಕಾದಿಂದ ಸಾಲ ಬಾಧೆ ತಾಳಲಾಗದೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ತೀರಿಸಲಾಗದೆ ಗ್ರಾಮವನ್ನೇ ತೊರೆದಿರುವ ನಿದರ್ಶನಗಳು ಇವೆ. ಸಮಾಜದಲ್ಲಿನ ಗೌರವ ಹಾಳಾಗುತ್ತದೆ ಎಂಬ ಕಾರಣ, ಮುಜುಗರ ಸೇರಿದಂತೆ ನಾನಾ ಕಾರಣಗಳಿಂದ ಆತ್ಮಹತ್ಯೆ ನಡೆದಿರುವ ಘಟನೆಗಳು ಈ ಹಿಂದೆ ನಡೆದಿವೆ.

ರಾಜ್ಯಕ್ಕೆ ಆನ್‌ಲೈನ್‌ ಮಟ್ಕಾ ಗಳು ವ್ಯಾಪಿಸಿದೆ. ಕೂಲಿ ಕಾರ್ಮಿಕ ವರ್ಗವನ್ನು ಗುರಿಯಾಗಿಸಿಕೊಂಡು ದಂಧೆಕೋರರು ಚಟುವಟಿಕೆ ನಡೆಸುತ್ತಿದ್ದಾರೆ. ಚಟಕ್ಕೆ ದಾಸರಾಗಿರುವ ಶ್ರಮಿಕ ವರ್ಗ ಸಾಲದ ಶೂಲಕ್ಕೆ ಸಿಲುಕಿ ಗ್ರಾಮ ತೊರೆಯುವ ಪರಿಸ್ಥಿತಿ ಎದುರಾಗಿದೆ. ಜತೆಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳ  ಪ್ರಕರಣಗಳು ದಾಖಲಾಗಿ ಇರುವುದಿಲ್ಲ. ಮತ್ತು ಮಟ್ಕಾ ಗಳು ಕಾರಣವಾಗುತ್ತಿದೆ.

ಮುಂಬಯಿಯಿಂದ ಮಟ್ಕಾ ದಂಧೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಗುತ್ತಿದ್ದು, ನಾನಾ ಆ್ಯಪ್‌ಗಳು ಗೂಗಲ್‌ನಲ್ಲಿ ಲಭ್ಯವಿದೆ. ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುವ ಕಿಂಗ್ ಪಿನ್ ಕ್ಯಾಷನಕ್ಕೇರಿ ಸಿದ್ದೇಶ್, ಮತ್ತು ಹತ್ತಿರದ ಸಂಬಂಧಿ ಚಪ್ಪರದಹಳ್ಳಿ ಕೋಟೆಪ್ಪ , ಹಾಗೂ ರಿಯಾ, ಮತ್ತು ಕೊಟ್ಟೂರಿನಲ್ಲಿ ಅನೇಕರು ಸಹಭಾಗಿತ್ವದಲ್ಲಿ ಪ್ರಮುಖ ಪಟ್ಟಿ ಹಿಡಿಯುವ ಮಟ್ಕಾ ದಂಧೆ ಕಂಪನಿ ಮಾಲೀಕರು. ವಿಪರೀತವಾಗಿದ್ದಾರೆ. ಇಂತಹವರಿಗೆ ಕೆಲವೊಂದು ಪೊಲೀಸ್ ಪೇದೆಗಳು ಸಹಕಾರಿ ನೀಡುತ್ತಿದ್ದಾರೆ.

ಈ ಹಿಂದೆ ಇರುವ ಡಿಸಿ ಎಲ್ಲಾ ತಯಾರಿ  ನಡೆಸಿದರು ಅದರೆ ಕಾರಣತರಿಂದ ನಿಲುಗಡೆಯಿತು.ಅದರೆ ಇಂತಹ ದೋ ನಂಬರ್  ದಂಧೆ ನಡೆಸುವವರನ್ನು ಗಡಿಪಾರು ಮಾಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ.ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಆಗುತ್ತಿದೆ.

ಕೊಟ್ಟೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಪಟ್ಟಣದ ಅಂಬೇಡ್ಕರ್ ನಗರ, ಜೆಪಿ ನಗರ, ನೇಕರ್ ಓಣಿ , ಪಿ ಎಲ್ ಡಿ ಬ್ಯಾಂಕ್ ಹತ್ತಿರ ಶೆಡ್ಡುಗಳಲ್ಲಿ  ಮತ್ತೆ ಗರಿಗೆದರಿದೆ ಮಟ್ಕಾ ದಂಧೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಹೊಸದಾಗಿ ಮಟ್ಕಾ ಪಟ್ಟಿ ತೆಗೆದುಕೊಳ್ಳುವ ಕನ್ಯಕಟ್ಟೆ , ಹರಾಳು, ಅಲಬೂರು, ಅಂಬಳಿ ಸುಟ್ಟ ಕೋಡಿಹಳ್ಳಿ, ಚಿರಬಿ,,ಯುವಕರು ಹುಟ್ಟಿಕೊಂಡಿದ್ದಾರೆ.ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಪತ್ರಿಕೆ ತಿಳಿಸಿದರು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ