ಶಿವರಾತ್ರಿಯಲ್ಲಿ ಉಪವಾಸ ಮತ್ತು ಜಾಗರಣೆಯನ್ನು ಏಕೆ ಮಾಡುತ್ತಾರೆ?
ಉಪವಾಸ ಎಂದರೆ : ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು ಎಂದರ್ಥವಾಗಿದೆ.
ಪ್ರತಿಯೊಬ್ಬರೂ ಜೀವನಪೂರ್ತಿ ಬಿಡುವಿಲ್ಲದ ಜೀವನ ಪದ್ಧತಿಯಲ್ಲಿ ಕೆಲವು ಬಾರಿ ಪತ್ನಿಯ ಜೊತೆ ಮಕ್ಕಳ ಜೊತೆ ಉದ್ಯೋಗ ವ್ಯಾಪಾರಗಳ ಜೊತೆ ಲಾಭ ನಷ್ಟಗಳ ಜೊತೆ ಜವಾಬ್ದಾರಿಗಳ ಜೊತೆ ಅನೇಕ ವ್ಯಸನಗಳ ಜೊತೆ ಬದುಕುವುದು ಸಹಜ ಮತ್ತು ಸಾಮಾನ್ಯವಾಗಿದೆ ಆದರೆ ಶಿವರಾತ್ರಿಯಲ್ಲಿ ಉಪವಾಸವನ್ನು ಕಟ್ಟು ನಿಟ್ಟಾಗಿ ಪಾಲಿಸುವುದರ ಉದ್ದೇಶ ಇದೇ ಆಗಿದೆ ಈಗಲಾದರೂ ಒಂದಷ್ಟು ಸಮಯವನ್ನು ಪರಮಾತ್ಮ ಶಿವನಿಗೆ ಮೀಸಲಿಟ್ಟು ಆತ್ಮಕಲ್ಯಾಣವನ್ನು ಮಾಡಿಕೊಳ್ಳಲಿ ಆತ್ಮ ಪರಮಾತ್ಮರ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲಿ ಎನ್ನುವ ಉದ್ದೇಶವೇ ಉಪವಾಸದ ಉದ್ದೇಶವಾಗಿದೆ ಆದರೆ ಇದು ಒಂದು ದಿನದ ಒಂದು ಆಚರಣೆಯಾಗದೆ ಉಸಿರು ಉಸಿರಿರಲಿ ಪರಮಾತ್ಮ ಶಿವನ ನೆನಪು ಮಾಡುವ ನಿತ್ಯೋತ್ಸವದ ಉಪವಾಸವಾಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ ಮತ್ತು ಜಾಗರಣೆಯ ಉದ್ದೇಶ ಜಾಗರಣೆ ಎಂದರೆ ಜಾಗೃತಿ ಎಂದು ಅರ್ಥ ಮನುಷ್ಯನು ತಿಳಿದು ತಿಳಿಯದೆ ತಾನೆ ಹೆಣೆದಿರು ಬಲೆಯಲ್ಲಿ ತನ್ನನ್ನು ತಾನು ಬಂಧಿಸಿಕೊಂಡು ಮೂಲ ಆತ್ಮದ ಸ್ಮೃತಿಯನ್ನು ಮರೆತು ದೆಹಬಿಮಾನದಲ್ಲಿ ಬಂದು ವಿಕಾರಕ್ಕೆ ವಶೀಭೂತನಾಗಿ ಜಾಗೃತಿ ತಪ್ಪಿ ಮೂರ್ಚಿತನಾಗಿದ್ದಾನೆ ಹಾಗಾಗಿ ಇಷ್ಟೆಲ್ಲಾ ವೈಜ್ಞಾನಿಕವಾಗಿ ಮುಂದುವರಿದರು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದರು ವಿದ್ಯಾವಂತಿಕೆ ಬುದ್ಧಿವಂತಿಕೆ ಇದ್ದರು ಸಿರಿವಂತಿಕೆ ಸಂಪಾದನೆಗೆ ಅವಕಾಶಗಳು ದೊರಕಿದ್ದರು ಎಂದೆಂದಿಗಿಂತಲೂ ಈಗ ಅಪಾರ ದುಃಖ ಅಶಾಂತಿಯ ಕೋಪದಲ್ಲಿ ಮುಳುಗಿದ್ದಾನೆ ಹಾಗಾಗಿ ಇನ್ನಾದರೂ ದೇಹ ಅಭಿಮಾನವನ್ನು ಬಿಟ್ಟು ಸಂಬಂಧಗಳ ಮೋಹವನ್ನು ಬಿಟ್ಟು ಅಧಿಕಾರ ಅಂತಸ್ತಿನ ಅಹಂಕಾರವನ್ನು ತ್ಯಜಿಸಿ ಬಹಿರು ಮುಖದ ಓಟವನ್ನು ನಿಲ್ಲಿಸಿ ಅಂತರ್ಮುಖಿಯಾಗಿ ಬ್ರೂ ಮಧ್ಯದಲ್ಲಿರುವ ಆತ್ಮವನ್ನು ಜಾಗೃತಿ ಮಾಡಿಕೊಂಡು ಪರಮಾತ್ಮನ ನೆನಪಿನಲ್ಲಿ ಮುಳುಗಿ ಪಾವನರಾಗಲಿ ಎನ್ನುವ ಉದ್ದೇಶದಿಂದ ಆಚರಿಸುವ ಸಂಪ್ರದಾಯವೇ ಈ ಜಾಗರಣೆಯಾಗಿದೆ
ಇದು ಕೇವಲ ಒಂದು ದಿನದ ಉಪವಾಸ ಜಾಗರಣೆ ಯಾಗದೆ ಪ್ರತಿಯೊಬ್ಬ ಆತ್ಮನಿಗೂ ಆ ಪರಮಾತ್ಮನನ್ನು ನೆನಪಿಸುವುದು ಆದ್ಯ ಕರ್ತವ್ಯವಾಗಿದೆ ಮತ್ತು ಸುಖ ಶಾಂತಿಯ ಸೂತ್ರವೂ ಆಗಿದೆ ನಾವೆಲ್ಲರೂ ಈ ಮಹಾಶಿವರಾತ್ರಿಯಲ್ಲಿ ಪ್ರತಿಜ್ಞೆ ಮಾಡಿ ಆತ್ಮಕಲ್ಯಾಣ ಮಾಡಿಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ಎಲ್ಲರಿಗೂ ಹಂಚೋಣ ಪ್ರತಿಯೊಬ್ಬರು ಪರಮಾತ್ಮನ ಸತ್ಯವನ್ನು ಅರಿಯಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ತೆರಳಿ ಆತ್ಮಜ್ಞಾನ ಪರಮಾತ್ಮ ಜ್ಞಾನ ಮೂರು ಲೋಕದ ಜ್ಞಾನ ತ್ರಿಕಾಲ ಜ್ಞಾನ ತಿಳಿದು ಸತ್ಯ ಸಂಪನ್ನರಾಗಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಈ ಮೂಲಕ ಶಿವರಾತ್ರಿ ಸಂದೇಶವನ್ನು ತಿಳಿಸುತ್ತಿದ್ದೇವೆ ಓಂ ಶಾಂತಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ