ಪತ್ರಕರ್ತರನ್ನು ಟಾರ್ಗೆಟ್ ಮಾಡಿದ ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆ ಅಮಾನತ್ತು ಯಾವಾಗ ಗೃಹ ಸಚಿವರೆ ಎಲ್ಲಿದ್ದೀರಿ ಏನಿದು ಸಂವಿಧಾನದ ಬಿಕ್ಕಟ್ಟು ಎದರಾಗಿದೆ..!!












ಕೊಟ್ಟೂರು: ಪಟ್ಟಣದ ಹರಪನಹಳ್ಳಿ ರಸ್ತೆಯಲ್ಲಿ ನಿಂಗಪ್ಪ ಎಂಬುವವರು ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸುಮಾರು 5 ವರ್ಷಗಳಿಂದಲೂ ಡಿ.ಶಿವಚರಣ ರವರಿಗೆ ಅಂಗಡಿ ಇಟ್ಟುಕೊಂಡ ಜಾಗಕ್ಕೆ ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಲೇ ಬಂದಿದ್ದಾರೆ ಈಗ್ಗೆ ಮೂರ್‍ನಾಲ್ಕು ತಿಂಗಳಿನಿಂದ ಸದರಿ ಜಾಗವು ಅವರ ಪಾಲಿಗೆ ಬಂದಿಲ್ಲವೆಂದು ತಿಳಿದು ಬಾಡಿಗೆ ಕಟ್ಟಿರುವುದಿಲ್ಲ ಈ ಕಾರಣಕ್ಕೆ ನನ್ನ ಜಾಗದ ಮುಂದೆ ಅಂಗಡಿ ಇಟ್ಟುಕೊಂಡಿದ್ದೀರಿ ಎಂದು ಏಕಾಏಕಿ ಬಂದು, ಹಣ್ಣುಗಳನ್ನು ಇಟ್ಟ ಟೇಬಲ್‌ಅನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದಾರೆ. ಅಲ್ಲದೇ ನನ್ನ ಜಾಗದ ಮುಂದೆ ಇಡಕೂಡದು ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ಅದನ್ನೇ ಕರೆದು ಮಾತಿನಲ್ಲಿ ಹೇಳಬಹುದಿತ್ತು. ಕಾನೂನಿನ ಮೂಲಕ ಹೇಳಿಸಬಹುದಾಗಿತ್ತು. ಆದರೆ ಕಾನೂನನ್ನೇ ಕೈಗೆ ತೆಗೆದುಕೊಂಡು ಮಾರಲು ಇಟ್ಟ ಹಣ್ಣುಗಳನ್ನೇ ಕಾಲಿನಿಂದ ಒದ್ದು ಬೆದರಿಕೆ ಹಾಕಿರುವುದು ಎಷ್ಟು ಸರಿ? ಅಂದರೆ ಈ ಜಾಗ ಇವರದ್ದು ಅಲ್ಲವೇ ಅಲ್ಲ.!

ಅಂದರೆ ಹಣವಿದ್ದವರು, ಅಧಿಕಾರವಿದ್ದವರು ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದೆ...? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.


ಈ ಸಂದರ್ಭದಲ್ಲಿ  ಸಾರ್ವಜನಿಕರು ಜಮಾಯಿಸಿದರು ಪತ್ರಕರ್ತರು ಪೊಲೀಸ್ ಇಲಾಖೆಗೆ ದೂರವಾಣಿ ಮೂಲಕ ತಿಳಿಸಿದ 45 ನಿಮಿಷಗಳ ಕಾಲ ತಡವಾಗಿ ಸ್ಥಳಕ್ಕೆ ಬಂದು ಅಸ್ತಿ ಮಾಲಿಕರನ್ನು ಠಾಣೆಗೆ ದಾಖಲೆ ತೆಗೆದುಕೊಂಡು ಬನ್ನಿ ಎಂದು ತಿಳಿಸಿ ಹೊರಟರು

ನಂತರ ಅನ್ಯಾಯ ಆಗಿರುವವರ ಪರ ಪತ್ರಕರ್ತರು ಧ್ವನಿಯೆತ್ತಿದರೆ ಅವರ ವಿರುದ್ಧ ಕೊಟ್ಟೂರಿನ ಪಿಎಸ್ಐ ಗೀತಾಂಜಲಿ ಸಿಂಧೆ ಅವರು ಮೊಬೈಲ್ ಕಸಿದುಕೊಳ್ಳುವುದು ಪತ್ರಕರ್ತರ ಮೇಲೆ ದಬ್ಬಾಳಿಕೆ ಮಾಡುವುದು ಮಾಡುತ್ತಿದ್ದಾರೆ.

ಅವರ ಚೇಂಬರಿನಲ್ಲಿ ಅನ್ಯಾಯದ ಪರ ಧ್ವನಿಯೆತ್ತಿ ಮಾತನಾಡುವಂತಿಲ್ಲ..!! ಬಡಪಾಯಿ ಕಲ್ಲಂಗಡಿ  ಮಾರಾಟಗಾರನಿಗೆ ತಪ್ಪಿದಸ್ಥನ ರೀತಿಯಾಗಿ ನಿಲ್ಲಿಸಿರುತ್ತಾರೆ.

ದರ್ಪ ತೋರಿಸಿರುವ ಶಿವಚರಣ ಅವರನ್ನು ಕುರ್ಚಿ ಮೇಲೆ ಕುಂದರಿಸಿ ರಾಜ ಮರ್ಯಾದೆ ಮಾಡುತ್ತಿದ್ದಾರೆ. ಅನ್ಯಾಯದ ಪರ ದ್ವನಿ ಎತ್ತುವ ಪತ್ರಕರ್ತರನ್ನು ಅತ್ತಿಕುವ ಕೆಲಸ ಮಾಡುತ್ತಿದ್ದಾರೆ .ಇನ್ನು ಸಾಮಾನ್ಯ ಜನಗಳ ಗತಿ ಏನು ಎಂಬುದು ಎಂದು  ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್, ಸಿರಿಬಿ. ಪ್ರಕಾಶ್ ಪತ್ರಿಕೆಗೆ ತಿಳಿಸಿದರು. ಪೊಲೀಸ್  V/S ಪತ್ರಕರ್ತರು ಸಾರ್ವಜನಿಕರೇ ಕಾದುನೋಡಿ ಮುಂದೇನಾಗುತ್ತೆ...

ಕೊಟ್ -1

ಪತ್ರಕರ್ತರನ್ನು ಟಾರ್ಗೆಟ್ ಹೊದ ಕಡೆಯಲ್ಲಿ  ಪತ್ರಕರ್ತರ ಮೇಲೆ ಕೇಸ್ ದಾಖಲು ಮಾಡುವುದು  ಇವರಿಗೆ ಒಂದು ಅಭ್ಯಾಸವಾಗಿದೆ.ಎಂದು ಸಾಮಾಜಿಕ ಕಾರ್ಯಕರ್ತ ಗುಂಡಪ್ಪ ಅವರು ಪತ್ರಿಕೆಗೆ ತಿಳಿಸಿದರು .


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ