ಪುರುಷರಂತೆಯೇ ಕೈ ಯಲ್ಲಿ ಕಬ್ಬಿಣ ಹಿಡಿದು ನಿತ್ಯ ಪಂಚರ ಹಾಕುವ ದಿಟ್ಟ ದಲಿತ ಮಹಿಳೆ ಲಕ್ಷ್ಮಿ ಮಟ್ಟೂರು
ವಿಶೇಷ ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ಸಾಮಾನ್ಯವಾಗಿ ಮಹಿಳೆಯರು ಮನೆಗೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆಯನ್ನು ನಿಭಾಯಿಸುವುದು ಲೋಕ ರೂಢಿ. ಆದರೆ ಇದೀಗ ಮಹಿಳೆ ಬರೀ ಮನೆಯ ನಾಲ್ಕು ಗೋಡೆಯ ಒಳಗೆ ಸೀಮಿತವಾಗಿಲ್ಲ.ಅಂಥದರಲ್ಲಿ ಓರ್ವ ದಿಟ್ಟ ದಲಿತ ಮಹಿಳೆ ತನ್ನ ಮಕ್ಕಳ ಭವಿಷ್ಯ, ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗೆ ಎಲ್ಲಾ ರೀತಿಯ ವಾಹನ ಗಳಿಗೆ ಪಂಚರ ಹಾಕುವ ವೃತ್ತಿಯನ್ನು ಮಾಡುವ
ಮೂಲಕ ಪತಿಯೊಂದಿಗೆ ಸುಖ ಸಂಸಾರದ ನೌಕೆಯನ್ನು ಸಾಗಿಸುತ್ತ ಬದುಕನ್ನು ಕಟ್ಟಿಕೊಂಡಿದ್ದಾರೆ.
ಹೌದು, ಹೀಗೆ ಕೈಯಲ್ಲಿ ಕಬ್ಬಿಣ ಹಿಡಿದುಕೊಂಡು ಗಾಡಿಗಳಿಗೆ ಪಂಚರ ಹಾಕುವ ಮಹಿಳೆಯ ಹೆಸರು ಲಕ್ಷ್ಮೀ ತಾಲ್ಲೂಕಿನ ಮಟ್ಟೂರು ಗ್ರಾಮದ ನಿವಾಸಿ. ಲಕ್ಷ್ಮಿ ಕಳೆದ ಹತ್ತು-ಹದಿನೈದು ವರ್ಷಗಳಿಂದ ಮಟ್ಟೂರು ಗ್ರಾಮದಲ್ಲಿ ಪಂಚರು ಹಾಕುತ್ತಾ ಜೀವನ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯತಿ ವಾಟರ್ ಕೆಲಸವನ್ನು ಮಾಡುತ್ತಿದ್ದ ಕೆಂಚಪ್ಪ ಅವರಿಗೂ ಕೊರೊನಾ ಸಂಕಷ್ಟದಿಂದ ವೃತ್ತಿಗೂ ಕಂಟಕ ಎದುರಾಗಿ ಕೆಲಸವಿಲ್ಲದಂತಾಗಿತ್ತು. ಲಕ್ಷ್ಮಿ ಯವರು ಆಸಮಯದಲ್ಲಿ ಪತಿ ಕೆಂಚಪ್ಪ ಅವರಿಗೆ ಧೈರ್ಯ ತುಂಬಿ, ಪಂಚ್ ರ ಹಾಕುವುದು ಪತಿಯಿಂದಲೇ ಕಲಿತು
ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದು, ಕುಟುಂಬ ನಿರ್ವಹಣೆಗೆ ಸಾಥ್ ನೀಡುತ್ತಿದ್ದಾರೆ.
ಇನ್ನು ವಿಶೇಷ ಅಂದರೆ ಲಕ್ಷ್ಮಿ ಪುರುಷರಂತೆಯೇ ಕೈ ಯಲ್ಲಿ ಕಬ್ಬಿಣ ಹಿಡಿದು ನಿತ್ಯ ಪಂಚರ ಹಾಕುತ್ತಾರೆ ಈ ಕುರಿತು ಅವರನ್ನು ಕೇಳಿದ್ರೆ ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಈಗಿನ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ನಾನು ಪುರುಷರಂತೆ ಗಾಡಿಗಳಿಗೆ
ಪಂಚರ್ ಹಾಕುವೆ ನಾನು ಶಾಲೆ ಕಲಿತ ಇಲ್ಲ ನಮ್ಮ ಯಾಜಮಾನ ಕೆಂಚಪ್ಪ ಪಂಚರ್ ಹಾಕುವ ಕೆಲಸ ಮಾಡುತ್ತಿದ್ದರು.ಅದನ್ನು ನೋಡಿ ನಾನು ಕಲಿತಿನಿ ಎಂದರು.
ಒಟ್ಟಿನಲ್ಲಿ ಬಡತನ ಮತ್ತು ಇಡೀ ಕುಟುಂಬದ ಹೊಣೆಗಾರಿಕೆಯನ್ನು ಮಹಿಳೆಯೂ ಸಹ ಸಮರ್ಥವಾಗಿ ಎದುರಿಸಬಲ್ಲಳು ಎಂಬುದಕ್ಕೆ ಲಕ್ಷ್ಮಿ ಯವರು ಉದಾಹರಣೆಯಾಗಿದ್ದಾರೆ.
ಹಳ್ಳಿ ಗಳಲ್ಲಿ ಕೆಲಸ ಇಲ್ಲ ಎಂದು ದುಡಿಯಲು ಬೆಂಗಳೂರು ನಂತಹ ನಗರಕ್ಕೆ ದುಡಿಯಲು ಹೋಗುವ ಜನರು ಮಟ್ಟೂರು ಗ್ರಾಮದ ಲಕ್ಷ್ಮಿ ಎಂಬ ದಿಟ್ಟ ಮಹಿಳೆ ಕೆಲಸ ನೆನಪಿಗೆ ಬಂದರೆ ಸಾಕು.
ನಮ್ಮ ಅವ್ವ ❤️🙏🏻🙏🏻
ಪ್ರತ್ಯುತ್ತರಅಳಿಸಿ