ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರವಾಗಿದೆ
ಕೊಟ್ಟೂರು : ಎರಡು ಸಾವಿರ ವರ್ಷಗಳ ಇತಿಹಾಸವನ್ನ ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಕಾರರ ಕೊಡುಗೆಯೂ ಅಪಾರವಾಗಿದೆ ಎಂದು ನಿಂಬಳಗೇರೆ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಕೆ.ವೀರಭದ್ರಪ್ಪ ಹೇಳಿದರು.
ಪಟ್ಟಣದ ತುಂಗಭದ್ರ ಶಿಕ್ಷಣ ಕಾಲೇಜಿನಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು. ಸಾಹಿತ್ಯದಲ್ಲಿ ವಚನ ಸಾಹಿತ್ಯ ವಿಶೇಷವಾಗಿದೆ. ಬಸವ ಪೂರ್ವ, ಬಸವಯುಗ ಮತ್ತು ಬಸವೋತ್ತರ ವಚನ ಸಾಹಿತ್ಯ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸಮಾಜದಲ್ಲಿ ಕೈಗೊಂಡಿದ್ದ ಕಾಯಕಕ್ಕೆ ಆದ್ಯತೆ ನೀಡಿದ್ದ ವಚನಕಾರರು, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು. ೧೨ನೇ ಶತಮಾನದ ಬಸವಾದಿ ಎಲ್ಲ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ ಮಾತನಾಡಿ, ದತ್ತಿ ಉಪನ್ಯಾಸಗಳ ಮೂಲಕ ಶರಣರ, ವಚನಕಾರರ, ಸಾಹಿತಿಗಳ ಪರಿಚಯ ಹಾಗೂ ಅವರ ಕಾರ್ಯಕ್ಷೇತ್ರದ ಸಾಧನೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಯತ್ನ ಕಸಾಪದ್ದಾಗಿದೆ. ತಾಲೂಕಿನ ಕಾಲೇಜು, ಪ್ರೌಢ ಶಾಲೆಗಳಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿಮಾನ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಗೌರವ ಕಾರ್ಯದರ್ಶಿ ಎಸ್.ರಾಜಣ್ಣ, ಅತಿಥಿಗಳಾದ ಪ್ರಾಚಾರ್ಯ ಎಸ್.ಎಂ.ರವಿಕುಮಾರ, ಕಸಾಪ ಸದಸ್ಯರಾದ ಈಶ್ವರಪ್ಪ ತುರಕಾಣಿ, ರಾಜೇಂದ್ರಗೌಡ ಇತರರು ಇದ್ದರು. ಕಸಾಪ ಕಾಂiÀiðದರ್ಶಿ ಅರವಿಂದ ಬಸಾಪುರ, ವಿದ್ಯಾರ್ಥಿ ಎಚ್.ಸಂಜಯ ನಿರ್ವಹಿದರು.
೨೦ಕೆಒಟಿ೨: ಕೊಟ್ಟೂರಿನ ತುಂಗಭದ್ರ ಶಿಕ್ಷಣ ಕಾಲೇಜಿನಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗೌರವ ಕಾರ್ಯದರ್ಶಿ ಎಸ್.ರಾಜಣ್ಣ ಉದ್ಘಾಟಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ