ಪರೀಕ್ಷೆ ಬರೆಯುವ ಹಲಗೆ ಡಿಎಸ್‌ಎಸ್‌ಕೆ ಜಿಲ್ಲಾ ಉಪಾಧ್ಯಕ್ಷ ಬಿ.ಮೌನೇಶ ವಿತರಣೆ
ಮಸ್ಕಿ : ಮಾರ್ಚ೨೫ ರಿಂದ ಎಪ್ರೇಲ್ ೮ ರವರೆಗೆ ನಡೆಯುವ ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನಲೆಯಲ್ಲಿ ತಾಲೂಕಿನ ಶ್ರೀಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯ ಸುಮಾರು ೭೦ ವಿದ್ಯಾರ್ಥಿಗಳಿಗೆ ಸಂಸ್ಕೃತಿಕ ನಾಯಕ ಶ್ರೀಬಸವೇಶ್ವರರ ಭಾವಚಿತ್ರ ಇರುವ ಪರೀಕ್ಷೆ ಬರೆಯುವ ಹಲಗೆ [ಕ್ಲೀಪ್‌ಬೋರ್ಡ] ಅನ್ನು ಉಚಿತವಾಗಿ ಡಿಎಸ್‌ಎಸ್‌ಕೆ ಜಿಲ್ಲಾ ಉಪಾಧ್ಯಕ್ಷ ಬಿ.ಮೌನೇಶ ಬಳಗಾನೂರು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸಿದ್ಧನಗೌಡ ಮಾಲಿಪಾಟೀಲ್ ಮಾತನಾಡಿ ನಿರಾತಂಕವಾಗಿ ಪರೀಕ್ಷೆಯನ್ನು ಬರೆದು, ಉತ್ತಮ ಅಂಕಗಳನ್ನು ಗಳಿಸಿ, ಸಂಸ್ಥೆ ಮತ್ತು ಶಾಲೆ ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮ ಕುರಿತು ಡಿಎಸ್‌ಎಸ್‌ಕೆ ಉಪಾಧ್ಯಕ್ಷ ಬಿ.ಮೌನೇಶ, ಶಾಲೆಯ ಮುಖ್ಯಗುರು ಅಮರನಾಥಹಳ್ಳೂರು, ಶ್ರೀಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪರಶುರಾಮ, ಶ್ರೀಬಸವೇಶ್ವರ ಪಧವಿಕಾಲೇಜಿನ ಪ್ರಾಚಾರ್ಯ ಎಂ.ಡಿಯೂಸೂಫ್, ಶಿಕ್ಷಕರಾದ ಮಹಾಂತೇಶ, ಬಸವರಾಜ ಎಕ್ಕಿ, ಶಿಕ್ಷಕಿ ಬೋರಮ್ಮ, ಯುವ ಮುಖಂಡ ಆಶೀಫ್ ಚೌದರಿ, ಹನುಮಂತ ಜಾನೇಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ೮೦ ಕ್ಕೆ ೭೦ ಕ್ಕೂ ಹೆಚ್ಚು ಅಂಕ ಪಡೆದ ಸುಮಾರು ೨೦ ವಿದ್ಯಾರ್ಥಿಗಳಿಗೆ ಗಣಿತ ವೀಷಯ ಶಿಕ್ಷಕ ಬಸವರಾಜ ಎಕ್ಕಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಹಲಗೆ [ಕೀಪ್‌ಬೋರ್ಡ] ವಿತರಿಸಿದರು. ಶ್ರೀಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪರಶುರಾಮ ಪರಿಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೆನ್ ವಿತರಿಸಿ ಶುಭಹಾರೈಸಿದರು.
ಸನ್ಮಾನ: ಸಮಾಜ ಮುಖಿಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಡಿಎಸ್‌ಎಸ್‌ಕೆ ಜಿಲ್ಲಾ ಉಪಾಧ್ಯಕ್ಷ ಬಿ.ಮೌನೇಶ ಬಳಗಾನೂರು ಅವರನ್ನು ಸಂಸ್ಥೆಯ ಕಾರ್ಯದರ್ಶಿಸಿದ್ಧನಗೌಡ ಮಾಲಿಪಾಟೀಲ್ ಸೇರಿ ಸಂಸ್ಥೆಯ ಮತ್ತು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು, ಶಿಕ್ಷಕರು ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ