ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ ಸಚಿವ ತಂಗಡಗಿ ಹೇಳಿಕೆಯ ವಿರುದ್ಧ ಬಿಜೆಪಿಗರಿಂದ ಪ್ರತಿಭಟನೆ
ವರದಿ- ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ : - ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರ ಹೇಳಿಕೆಯನ್ನು ಖಂಡಿಸಿ, ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಹಾಗೂ ಕಾರಟಗಿ-ಕನಕಗಿರಿ ಮಂಡಲ ಯುವ ಮೋರ್ಚಾ ಸಹಯೋಗದೊಂದಿಗೆ ಕಾರಟಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಕನಕದಾಸ ವೃತ್ತದವರೆಗೂ ತೆರಳಿ ಪ್ರತಿಭಟನೆ ಮಾಡಿದರು.
ಕನಕಗಿರಿ ವಿಧಾನಸಭಾ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ಎಸ್ ತಂಗಡಗಿ ಅವರು ವಿದ್ಯಾರ್ಥಿಗಳು ಯುವಕರು ಮೋದಿ ಅಂತ ಕೂಗಿದರೆ ಕಪಾಳಕ್ಕೆ ಒಡೆಯಿರಿ ಎಂದು ಹೇಳಿಕೆ ನೀಡುವ ಮೂಲಕ ದೇಶದ ಪ್ರಧಾನಿಗೆ ಅವಮಾನ ಮಾಡುವುದು ಸೂಕ್ತವಲ್ಲ ಇವರು ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಜಿಲ್ಲಾ ಯುವ ಮೋರ್ಚಾವತಿಯಿಂದ ಬೃಹತ್ ಪ್ರತಿಭಟನೆ ಮಾಡಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಬಿಲ್ಗಾರ್, ಜಡೆಯಪ್ಪ ಮುಕ್ಕುಂದಿ, ಶಿವಶರಣೆಗೌಡ, ಅಮರೇಶ ರೈತನಗರ, ಮೌನೇಶ ದಢೇಸುಗೂರು, ಮಂಜುನಾಥ ಮಸ್ಕಿ, ಹೊಸಕೇರಾ ಮಂಜುನಾಥ, ರವಿಸಿಂಗ್ ವಕೀಲರು ಯರಡೋಣಾ, ಪಂಪನಗೌಡ ಶರಣಬಸವರಡ್ಡಿ, ವೆಂಕಟೇಶ ಕನಕಗಿರಿ, ದೇವರಾಜ್ ಜುರಟಗಿ, ಸುರೇಶ್ ರಾಥೋಡ್, ಚಂದ್ರಶೇಖರಗೌಡ, ಬಸವರಾಜ ಎತ್ತಿನಮನಿ, ವಿರುಪಾಕ್ಷಿ ಗುಂಡೂರು, ಅಮರೇಶ್ ಕಟಾಬ್ಲಿ, ಮಹಿಳಾ ಘಟಕದ ಮುಖಂಡರಾದ ರತ್ನಕುಮಾರಿ, ಅಕ್ಕಮ್ಮ, ಹುಲಿಗೆಮ್ಮ ನಾಯಕ್, ಪ್ರಿಯ ಪವರ್ ಸೇರಿದಂತೆ ಅನೇಕರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ