ಮಸ್ಕಿ ಹಿರೇ ಹಳ್ಳದಲ್ಲಿ ಜಂಗಲ್ ಕಟ್ಟಿಂಗ್ ಮಾಡುವಂತೆ ಮನವಿ
ಮಸ್ಕಿ : ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತಾಲೂಕು ಘಟಕ ಮಸ್ಕಿ ವತಿಯಿಂದ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ವೇಳೆ ದುರ್ಗಪ್ಪ ಮಡಿವಾಳ ಮಾತನಾಡಿ ,ವಾರ್ಡ್ ನಂ 20,21,22,ವಾರ್ಡ್ ಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಬೇಸಿಗೆ ಇರುವ ಕಾರಣ ಗಾಂಧಿನಗರದ ಎಲ್ಲಾ ವಾರ್ಡಿನ ನಿವಾಸಿ ಮಹಿಳೆಯರೆಲ್ಲರೂ ಪ್ರಸ್ತುತ ಮಸ್ಕಿಯ ಮುದಗಲ್ ಕ್ರಾಸ್‌ನಿಂದ ಮೌನೇಶ್ವರ ಗುಡಿಯ ಎದುರು ಇರುವ ಹಳ್ಳದಲ್ಲಿ ದಿನಾಲೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಬಟ್ಟೆ ಒಗೆಯಲು ಬರುತ್ತಾರೆ. ಆದರೆ ಮುಖ್ಯ ವಿಷಯ ಏನೆಂದೆರೆ, ಹಳ್ಳದಲ್ಲಿ ಜಾಲಿಮರ, ಆಫು, ಜೀಕು ಇನ್ನಿತರ ಗಿಡಗಳು ಬೆಳೆದು ಹಳ್ಳದಲ್ಲಿ ಕಾಲಿಡಲು ಆಗದೇ ಮಹಿಳೆಯರು ತಾಪತ್ರಯ ಪಡುತ್ತಿದ್ದಾರೆ. ಮತ್ತು ಹಳ್ಳದಲ್ಲಿ ಏಳು.ಎಂಟು ಫೀಟ್ ಜಂಗಲ್ ಬೆಳೆದಿದ್ದು, ಮಹಿಳೆಯರಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು ಹಾಗೂ ಹಳ್ಳದ ಸುತ್ತಲಿನ ಪ್ರದೇಶಗಳ ಜನರಿಗೆ ವಿಷ ಜಂತುಗಳಿಂದ ಜೀವ ಭಯ ಕಾಡುತ್ತಿದೆ ಹಾಗೂ ಕೂಡಲೇ ಹಳ್ಳದಲ್ಲಿ ಜಂಗಲ್ ಕಟಿಂಗ್ ಮಾಡಿಸಿ ಮಹಿಳೆಯರಿಗೆ ಬಟ್ಟೆ ಒಗೆಯಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ತಮ್ಮ ಕಾರ್ಯಾಲಯದ ಮುಂದೆ ಅನಿಧಿಷ್ಟ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಈ ಹೋರಾಟದ ಮುಖಾಂತರಎಚ್ಚರಿಸುತ್ತಿದ್ದೇವೆ.
ಒಂದು ವೇಳೆ ವಾರದ ಒಳಗಡೆ ಸರಿಪಡಿಸದೇ ಹೋದಲ್ಲಿ ಪುರಸಭೆಯ ಮುಂಭಾಗದಲ್ಲಿ ಧರಣಿ ಕೂಡಲಾಗುವುದು ಎಂದು ಎಚ್ಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಉಪಾಧ್ಯಕ್ಷ ಗಣೇಶ,ಗ್ರಾಮೀಣ ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ್, ಶ್ರೀಕಾಂತ ಅರಕೇರಿ ಸಂಘಟನೆಯ ಕಾರ್ಯದರ್ಶಿ, ರಮೇಶ ನಗರ ಘಟಕ ಅಧ್ಯಕ್ಷ, ದೇವರಾಜ್ ಮಡಿವಾಳ ಉಪಾಧ್ಯಕ್ಷ ನಗರ ಘಟಕ, ಶರಣ ಬಸವ ಗೌರವ ಅಧ್ಯಕ್ಷ ಸೇರಿದಂತೆ ಸಂಘಟನೆಯ ಸದಸ್ಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ