ಸೋಮನಾಥ ಜೆಇ ಮೇಲೆ ಕ್ರಮ ಜರುಗಿಸಲು ಮನವಿ

ವರದಿ : ಗ್ಯಾನಪ್ಪ ದೊಡ್ಡಮನಿ

ಮಸ್ಕಿ : ತಾಲೂಕಿನ ಹಿರೇದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ ಕ್ಯಾಂಪಿನಲ್ಲಿ ಶಾಸಕರ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದು ಸದರಿ ಕಾಮಗಾರಿಯ ಬಗ್ಗೆ ಸಾರ್ವಜನಿಕರು ಸೋಮನಾಥ ಜೆಇ ಎನ್ನುವವರ ಬಳಿ ಮಾಹಿತಿ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಗ್ರಾಮದ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಯಚೂರು ಇವರಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.

ಹಿರೇದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆಹಬೂಬ್ ನಗರ ಕ್ಯಾಂಪಿನಲ್ಲಿ ಶಾಸಕರ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿರುತ್ತದೆ ಸದರಿ ಸಿಸಿ ರಸ್ತೆ ಕಾಮಗಾರಿಯು ಸಂಪೂರ್ಣವಾಗಿ ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿರುವುದು ಗ್ರಾಮಸ್ಥರಾದ ನಮಗೆ ತಿಳಿದು ಬಂದಿರುವುದರಿಂದ ಸದರಿ ಕಾಮಗಾರಿಯೂ ಸರಕಾರ ಹೊರಡಿಸಿರುವ ಅಂದಾಜು ಪಟ್ಟಿಯಲ್ಲಿ ಇರುವ (ಎಸ್ಟಿಮೇಟ್ ಕಾಫಿ) ಪ್ರಕಾರ ಕಾಮಗಾರಿಯನ್ನು ಮಾಡುತ್ತಿಲ್ಲವೆಂಬುವುದು ಧೃಡಪಟ್ಟಿದ್ದು,ಸೋಮನಾಥ ಜೆಇ ಇವರನ್ನು ಸಾರ್ವಜನಿಕರು ಕಾಮಗಾರಿಯ ವಿವರ ನೀಡಿ ಎಂದು ಕೇಳಿದರೇ ಜಿಲ್ಲಾ ಪಂಚಾಯತ್ ರಾಯಚೂರು ಇವರನ್ನು ಭೇಟಿಯಾಗಿ ಸದರಿ ಕಾಮಗಾರಿ ಕಳಪೆ ಮಟ್ಟದ್ದಾಗಿರುತ್ತದೆ.

 ಎಂದು ವಿನಂತಿಸಿ ಕೊಂಡಾಗ ನೀವು ನನ್ನನ್ನು ಏನು ಕೇಳಬಾರದು? ನಾನು ಯಾವುದನ್ನು ಕೊಡುವುದಿಲ್ಲ.. ಯಾವ ಬಜೆಟ್ ನಲ್ಲಿ ಆಗಿರುವುದನ್ನು ತಿಳಿದುಕೊಂಡು ನೀವು ಏನೂ ಮಾಡುತ್ತೀರಿ ? ಇನ್ನು ಮೇಲೆ ನನಗೆ ಯಾವುದೇ ರೀತಿ ಮಾಹಿತಿಯನ್ನು ಕೇಳಬೇಡಿ. ನಿಮ್ಮ ಶಾಸಕರ ಬಳಿ ಹೋಗಿ ಸದರಿ ರಸ್ತೆ ಮಾರ್ಗಸೂಚಿಯ ಪ್ರತಿಯನ್ನು ಪಡೆದುಕೊಳ್ಳಿ ಇಲ್ಲವೇ ಸಿಇಓ ಜಿಲ್ಲಾ ಪಂಚಾಯತ್ ರಾಯಚೂರು ಕಚೇರಿಗೆ ಹೋಗಿ ಸದರಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಿರಿ. ಸದರಿ ಕಾಮಗಾರಿಯ ಮಾಹಿತಿಯನ್ನು ನಾನು ನೀಡುವುದಿಲ್ಲ ನನ್ನ ಮೇಲೆ ಯಾರಿಗಾದರೂ ದೂರು ಕೊಡಿ ಎಂದು ನಿರ್ಭಯವಾಗಿ ಹೇಳಿರುತ್ತಾರೆ. ಸದರಿ ಕಾಮಗಾರಿಯನ್ನು ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ಮಾಡಿ ನಂಬಿಕೊಂಡ ಗ್ರಾಮಸ್ಥರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿ ಫ್ರಾಡ್ ಬಿಲ್ಲನ್ನ ಎತ್ತಿಕೊಂಡು ಸ್ವಾಹಾ ಮಾಡುವ ಮೂಲಕ ಅಕ್ರಮ ಎಸಗಿದ ಸೋಮನಾಥ ಜೆಇ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸದರಿ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಮಾಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಜಿ.ಪಂ ಸಿಇಒ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಭಾಷಾ ತಂದೆ ಬಂದೆ ಸಾಬ್, ಸದಾ ಮುಸ್ಲಿಂ ತಂದೆ ರಾಜಾ ಸಾಬ್, ಬಂದೇ ನವಾಜ್ ತಂದೆ ಹುಸೇನ್ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*