ಸೈಬರ್ ಹಣಕಾಸಿನ ವಂಚನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ

೦೯ ಕೊಟ್ಟೂರು ೦೧ ಕೊಟ್ಟೂರಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಲ್ಲಿ ಸೈಬರ್ ಹಣಕಾಸಿನ ವಂಚನೆಯ ಬಗ್ಗೆ ಪೊಲೀಸ್ ಸಿಬ್ಬಂಧಿ ಚಂದ್ರು ಮೌಲಿ ಜೆ ಜಾಗೃತಿ ಮೂಡಿಸಿದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಬಹಳ ವೇಗದಿಂದ ಸಾಗುತಿದ್ದು ಅದೇ ತರಹ ಅಂತರ್ಜಾಲವು ಬಹಳ ವೇಗದಿಂದ ಸಾಗುತ್ತಿದೆ, ಇದರಿಂದ ದೇಶಾದ್ಯಾಂತ ಅಂತರ್ಜಾಲದ ಸದುಪಯೋಗದ ಜೊತೆ ದುರುಪಯೋಗವು ಜಾಸ್ತಿಯಾಗುತ್ತಿದೆ, ಅದರಲ್ಲಿ ಸೈಬರ್ ಹಣಕಾಸಿನ ವಂಚನೆಯ ಬಹುತೇಕ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು 

ಹೀಗಾಗಿ ಸಾರ್ವಜನಿಕರು ಮುಂಜಾಗೃತೆ ವಹಿಸಿ ಸೈಬರ್ ವಂಚಿತರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ ವಾಗಿದೆ, ವಂಚಿತರು ಅನಧಿಕೃತ ವೆಬ್ಸೈಟ್ ಗಳಿಂದ ಆಪ್ ಇನ್ಸ್ಟಾಲ್ ಮಾಡುವುದರಿಂದ,ಓವರ್ ಲ್ಯಾಪ್ ಮಾಸುಕಾದ ಕ್ಯೂ ಆರ್ ಕೋಡ್ ಬಳಸುವುದರಿಂದ,ಅನಿರೀಕ್ಷಿತ ಜಾಹೀರಾತಿನಿಂದ,ಮನೆಯಿAದ ಹಣ ಗಳಿಸಿ ತಪ್ಪು ದಾರಿಯಿಂದ,ಸಾರ್ವಜನಿಕ ತಿi ಜಿi ಬಳಸುವಿದರಿಂದ,ಮೊಬೈಲ್ ಒ ಟಿ ಪಿ ಹಾಗೂ ಸಿ ವಿ ವಿ ಶೇರ್ ಮಾಡುವುದರಿಂದ,ಕೆಲಸ ನೀಡುತ್ತೇವೆಂದು ನೋಂದಣಿ ಶುಲ್ಕ ಪಾವತಿಸಬೇಕೆಂದಾಗ,ವಾಟ್ಸಪ್, ಫೇಸ್ಬುಕ್ ಇತರೆ ಸಾಮಾಜಿಕ ಜಾಲತಾಣಗಳಿಂದ,ಲಾಟರಿ ವಿಜೇತರೆಂದು ಮುಂಗಡ ಹಣ ಪಾವತಿಸಬೇಕೆಂದಾಗ ಇನ್ನು ಹಲವಾರು ವಿಧಾನಗಲ್ಲಿ ವಂಚನೆ ಎಸೆಗುವ ಸಾಧ್ಯತೆ ಇದೆ ಎಂದರು 

ಈ ವಿಷಯವು ಎಲ್ಲಾ ಸಾರ್ವಜನಿಕರು ತಿಳಿದು ಕೊಳ್ಳುವುದು ಅತ್ಯಗತ್ಯ ವಾಗಿದೆ. ಈ ತರಹದ ಪ್ರಕರಣಗಳು ಕಂಡು ಬಂದಲ್ಲಿ ಇಲ್ಲ ಮೋಸಹೋದಲ್ಲಿ ತಕ್ಷಣವೇ ೧೯೩೦ ಗೆ ಕರೆ ಮಾಡಿ ಆರಕ್ಷಕ ಸಿಬ್ಬಂದಿಗಳಿಗೆ ತಿಳಿಸುವುದರಿಂದ ಈ ತರಹದ ವಂಚನೆಯನ್ನು ತಡೆಯಬಹಿದೆಂದು ಕೊಟ್ಟೂರಿನ ಆರಕ್ಷಕ ಸಿಬ್ಬಂಧಿಗಳಾದ ಚದ್ರುಮೌಳಿ ಜೆ ಹಾಗೂ ನಾಗರಾಜ್ ರವರು ಸಾರ್ವಜನಿಕ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತೆಯನ್ನು ಮೂಡಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ