"ಕೊಟ್ಟೂರಿನ ಎಲ್ಲಾ ವಾರ್ಡ್ಗಳಲ್ಲಿ ನೀರಿನ ಅಭಾವ "
ಕೊಟ್ಟೂರಿನ:ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯ ಪರದಾಟ
ಕೊಟ್ಟೂರು : ನಿರ್ವಹಣೆಯಿಲ್ಲದೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಸ್ಥಗಿತಗೊಂಡಿವೆ. ಈ ಕುರಿತು ಪಟ್ಟಣ ಪಂಚಾಯತಿ ದಿವ್ಯ ನಿರ್ಲಕ್ಷೆ ಧೋರಣೆ ತಾಳಿರುವ ಪರಿಣಾಮ, ಬಿರು ಬಿಸಿಲಿಗೆ ಹಾಗೂ ಕಾಲೋನಿಯ ಜನರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಪಟ್ಟಣದ ಹ್ಯಾಳ್ಯಾ ಡಾ. ಬಿ ಆರ್ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು ಕುಡಿಯುವ ನೀರಿಗಾಗಿ ದಿನನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕಾಲೋನಿಯಲ್ಲಿ ಶುದ್ಧ ಕುಡಿಯುವಿನ ಘಟಕ ಸ್ಥಾಪನೆಯಾಗಿ ಮೂರ್ನಾಲ್ಕು ವರ್ಷ ಕಳೆದರೂ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕದ ತುಕ್ಕು ಹಿಡಿದಿದ್ದಾವೆ. ಸಾರ್ವಜನಿಕ ಮೂಲಭೂತ ಸೌಕರ್ಯಗಳಲ್ಲಿ ಮೊದಲ ಆದ್ಯತೆಗೆ ಅರ್ಹವಾಗಿರುವ ಕುಡಿಯುವ ನೀರಿನ ಕುರಿತು ಪಟ್ಟಣ ಪಂಚಾಯಿತಿ ನಿರ್ಲಕ್ಷ ದೋರಣೆ ತಾಳಿರುವುದು ಇದರ ಬಗ್ಗೆ ಕಾಲೋನಿಯ ನಿವಾಸಿಗಳು ಸಂಬಂಧಪಟ್ಟ ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಹಾಗೂ ಜನಪ್ರತಿನಿಧಿಗಳ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಿಲ್ಲ ಬೇಸಿಗೆ ಮುನ್ನವೇ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳಾದ ವೀರಭದ್ರಪ್ಪ ಜಿ ತಿಪ್ಪೇಸ್ವಾಮಿ, ಟಿ.ಮೈಲಾಪ್ಪ, ಅಮರೇಶ್ ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂ. ಅಧಿಕಾರಿಗಳಿಗೆ ಹಾಗೂ ಶಾಸಕರಾದಿಯಾಗಿ ಎಲ್ಲ ಜನಪ್ರತಿನಿಧಿಗಳು ಮನವಿ ಮಾಡಿಕೊಂಡಿರುವುದು ಬೇಸಿಗೆಯ ಪ್ರಖರತೆಗೆ ಆವಿಯಾದ ನೀರಿನಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ಕಾಲೋನಿಯ ನಿವಾಸಿಗಳು ಕೂಡಲೇ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತವು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಕಾಲೋನಿಯ ಜನತೆಗೆ ಕುಡಿಯುವ ನೀರು ಒದಗಿಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಕೋಟ್-1
ಶುದ್ಧ ಕುಡಿಯುವ ನೀರಿನ ಘಟಕ ಸುಮಾರು ಕಳೆದ ವರ್ಷಗಳಿಂದ ಸ್ಥಗಿತಗೊಂಡಿರುವುದು ಇದರ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರು ಯಾವುದೇ ಪ್ರಯೋಜನವಿಲ್ಲ ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ.
ರಾಂಪುರ ಅಂಬರೀಶ್. ಕಾಲೋನಿಯ ನಿವಾಸಿ
ಡಿಎಸ್ಎಸ್ ಮುಖಂಡ ಕೊಟ್ಟೂರು.
ಕೋಟ್ -2
ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ಇದ್ದು ಇಲ್ಲದಂಗ ಆಗಿವೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿವೆ. ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.
ದ್ರಾಕ್ಷಣಮ್ಮ ಕಾಲೋನಿಯ ನಿವಾಸಿ.
ಕೊಟ್-3
ಕೊಟ್ಟೂರು ಪಟ್ಟಣಕ್ಕೆ ಸರಬರಾಜು ಆಗುವಂತ ಕೆ ಅಯ್ಯನಹಳ್ಳಿ ಮತ್ತು ರಾಜೀವ್ ನಗರ, ನೀರಿನ ಪಂಪೋಸಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ನೀರಿನ ಸಮಸ್ಯೆಯನ್ನು ಅತಿ ಜರೂರಾಗಿ ಬಗೆಹರಿಸಲು ಪಟ್ಟಣ ಪಂಚಾಯಿತಿ ಸಂಬಂಧಿಸಿದ ವಾಟರ್ ಮ್ಯಾನ್ ಗಳಿಗೆ ಮುಖ್ಯ ಅಧಿಕಾರಿಗಳು ತುಕಾರಾಂ ಯಮನಪ್ಪ ತಿಳಿಸಿದರು
ಬಾಕ್ಸ್ ಸುದ್ದಿ :
ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕ ಮೊರೆ :
ಕೊಟ್ಟೂರು : ಈಗ ಖಾಸಗಿ ಶುದ್ಧ ನೀರಿನ ಘಟಕವೇ ನಮಗೆ ಗತಿ ಬಂದಿದೆ ಒಂದು ಕೊಡಪಾನಕ್ಕೆ ಹತ್ತು ರೂಪಯಿ ನೀಡಿ ಕುಡಿಯವ ನೀರು ತರುವ ಸ್ಥಿತಿ ಬಂದಿದೆ. ಈ ವರ್ಷ ಮಳೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಕುಡಿಯುವ ನೀರು ಕೂಡ ಹಣ ಕೊಟ್ಟು ತರುವ ಪರಿಸ್ಥಿತಿ ಬಂದಿದೆ. ನಮ್ಮ ಕಾಲೋನಿಯಲ್ಲಿ ನೀರು ಬಿಟ್ಟು 15 ದಿನವಾದರೂ ನೀರು ಬಂದಿಲ್ಲ. ಇನ್ನಾದರೂ ಜಿಲ್ಲಾ ಆಡಳಿತ ಮತ್ತು ಸ್ಥಳೀಯ ಆಡಳಿತೂ ನಮ್ಮ ಕಾಲೋನಿಗೆ ನೀರು ಬಿಡಬೇಕೆಂದು ಕಾಲೋನಿ ನಿವಾಸಿ ಮಹಿಳೆಯರು ಒತ್ತಾಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ