ಮತ್ತೊಮ್ಮೆ ಮೋದಿ ಪ್ರಧಾನಿಗಾಗಿ ದೇವರಾಜ್ ಯುವಕನಿಂದ ಕ್ಷೌರ ಸೇವೆ

ಮಸ್ಕಿ: ನರೇಂದ್ರ ಮೋದಿ ಅವರು ಮಗದೊಮ್ಮೆ ದೇಶದ ಪ್ರಧಾನಿ ಆಗಬೇಕೆಂದು ಮಸ್ಕಿಯ ಯುವಕ ಉಚಿತ ಕ್ಷೌರಿಕ ಸೇವೆಯನ್ನು ಬುಧುವಾರ ಸಲ್ಲಿಸಿದರು. ಪಟ್ಟಣದ ಅಭಿನಂದನ ಸ್ಫೂರ್ತಿ ಧಾಮದಲ್ಲಿ 30 ಕ್ಕೂ ಹೆಚ್ಚು ಅನಾಥ, ಅಂಗವಿಕಲ ಮತ್ತು ಬಡ ಮಕ್ಕಳು ಇದ್ದು, ಈ ಮಕ್ಕಳಿಗೆ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಮಕ್ಕಳ ಪೋಷಣೆಗೆ ಹಲವಾರು ಜನರು ತಮ್ಮ ತನು ಮನದಿಂದ ಸೇವೆಯನ್ನು ಸಲ್ಲಿಸುತ್ತಿದ್ದು ಕಂಡು ಬಂದಿದ್ದು, ಅಂತೆಯೇ ಯುವ ಬ್ರಿಗೇಡನ ದೇವರಾಜ ಎಂಬ ಯುವಕ, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಲೆಂದು ಉಚಿತ ಕ್ಷೌರಿಕ ಸೇವೆ ಸಲ್ಲಿಸಿದರು. ಅವರಿಗೆ ಸ್ನೇಹಿತ ಕಾರ್ತಿಕ್, ಮಲ್ಲಿಕಾರ್ಜುನ , ಅಭಿನಂದನ ಸ್ಫೂರ್ತಿ ಧಾಮದ ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವ ಮೂಲಕ ಯುವ ಬ್ರಿಗೇಡ್ ಯುವಕರಿಗೆ ಸಾಥ್ ನೀಡುವುದರ ಮೂಲಕ ಇತರ ಯುವಕರಿಗೆ ಮಾದರಿ ಆಗಿ, ಸಮಾಜಮುಖಿ ಕಾರ್ಯಗಳಲ್ಲಿ ಸಹ ಸೈ ಎನಿಸಿಕೊಂಡಿದ್ದಾರೆ. 

ಈ ವೇಳೆ ,ತಾಲ್ಲೂಕು ಯುವ ಬ್ರಿಗೇಡ್ ಸಂಚಾಲಕ ಅಶೋಕ ಬೆಳಗಲ್,ಮಲ್ಲಿಕಾರ್ಜುನ ಕಟ್ಟಿಮನಿ,ಕಾರ್ತಿಕ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ