ಬಿಜೆಪಿಗರ ಹೋರಾಟ ಜನರಿಗೆ ಹಾಸ್ಯಾಸ್ಪದವಾಗಿದೆ ಅಭಿವೃದ್ಧಿಗಾಗಿ ಹೋರಾಟ ಮಾಡಿ, ಸಣ್ಣ ವಿಚಾರಕಲ್ಲ; ಶರಣೆಗೌಡ ಮಾ.ಪಾ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಕಾರಟಗಿ : -ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿಲ್ಲ, ಹೇಳಿಕೊಳ್ಳುವಂತಹ ನಾಯಕರು ಇಲ್ಲ, ಕಳೆದ ಹತ್ತು ವರ್ಷದಲ್ಲಿ ಬಿಜೆಪಿಯ ಅಭಿವೃದ್ಧಿ ಕೆಲಸ ಶೂನ್ಯವಾಗಿದೆ. ಕ್ಷೇತ್ರದಲ್ಲಿ ಯಾವುದಾದರೂ ಅಭಿವೃದ್ಧಿ ಕೆಲಸ ಮಾಡುವಂತೆ ಹೋರಾಟ ಮಾಡಿ ಅದನ್ನು ಬಿಟ್ಟು ಸಣ್ಣಪುಟ್ಟ ವಿಚಾರಕ್ಕೆ ಹೋರಾಟ ಮಾಡಬೇಡಿ, ನಿಮ್ಮ ಹೋರಾಟ ಜನರಿಗೆ ಹಾಸ್ಯಾಸ್ಪದವಾಗುತ್ತದೆ ಎಂದು ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೆಗೌಡ ಮಾಲಿಪಾಟೀಲ್ ಹೇಳಿದರು.
ಕಾರಟಗಿ ಪಟ್ಟಣದ ಸಚಿವ ಶಿವರಾಜ ಎಸ್ ತಂಗಡಗಿಯವರ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಟಗಿ ಮಂಡಳದ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರಿಗೆ ತಿಳಿ ಹೇಳುತ್ತೆನೆ, ಕಳೆದ ಹತ್ತು ವರ್ಷಗಳಿಂದ ಜನಸಾಮಾನ್ಯನಿಗೆ ತಲುಪುವ ಒಂದೇ ಒಂದು ಅಭಿವೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿಲ್ಲ, ಆದ್ದರಿಂದ ಜನಸಾಮಾನ್ಯರಿಗೆ ಅನುಕೂಲಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿ ಆಡಳಿತಕ್ಕೆ ಬಂದ ಮೋದಿ ಸರ್ಕಾರ ಕೆಲಸ ಮಾಡಲ್ಲ, ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳ ಮೋಕ್ಷ ಮಾಡಬೇಕು ಎಂದಿದ್ದಾರೆ. ಇದರ ಅರ್ಥ ತಿಳಿ ಹೇಳುವ ಕೆಲಸ ಮಾಡಬೇಕು. ಬಿಜೆಪಿ ವೈಫಲ್ಯಕ್ಕೆ ಛೀಮಾರಿ ಹಾಕುವ ಉದ್ದೇಶ ಮಾತಿನಲ್ಲಿದೆ.
ಅಲ್ಲದೆ ಕಳೆದ ಚುನಾವಣೆಯಲ್ಲಿ ಕ್ಷೇತ್ರದ ವಿವಿಧಡೆ ಮತ ಕೇಳಲು ಹೋಗಿದ್ದ ಬಿಜೆಪಿಗೆ ಜನರೇ ಛೀಮಾರಿ ಹಾಕಿದ್ದಾರೆ. ಮತಗಟ್ಟೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡುವ ಮೂಲಕ ಕಪಾಳ ಮೋಕ್ಷ ಮಾಡಿದ್ದಾರೆ. ಪ್ರತಿಯೊಂದರಲ್ಲೂ ನಿರಾಶಿತರಾಗಿದ್ದಾರೆ. ವಿಷಯ ಆಧರಿತ ಪ್ರತಿಭಟನೆ ಮಾಡದೆ ಕೆಲಸಕ್ಕೆ ಬಾರದ ವಿಷಯವನ್ನು ಇಟ್ಟುಕೊಂಡು ಪ್ರತಿಭಟನೆಗೆ ಇಳಿದಿದ್ದಾರೆ. ಪಕ್ಷದಿಂದ ತಪ್ಪಾಗಿದ್ದರೆ ಇಲ್ಲವೇ ಅಭಿವೃದ್ಧಿ ಕೆಲಸ ಮಾಡದ ವಿಷಯಕ್ಕೆ ಪ್ರತಿಭಟನೆ ಮಾಡಲಿ ಅದನ್ನು ಬಿಟ್ಟು ಕ್ಷುಲ್ಲಕ ಸಣ್ಣ ಹೇಳಿಕೆಯನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುವುದು ಸರಿಯಲ್ಲ. ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಬಿಜೆಪಿಗರ ಮನೆಗೆ ತೆರಳಿ ಮತಯಾಚನೆ ಮಾಡಿ ಅವರು ಸಹ ನಿಮಗೆ ಕಪಾಳಮೋಕ್ಷ ಮಾಡಿ ಮತ್ತೆ ಸೋಲು ಅನುಭವಿಸುವಂತೆ ಮಾಡುತ್ತಾರೆ.
ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಬಲಿಷ್ಠ ನಾಯಕರಿಲ್ಲ, ಆದರೆ ನಾವು ಹೆಮ್ಮೆಯಿಂದ ಜೈ ತಂಗಡಗಿ ಎಂದು ಹೇಳುತ್ತೇವೆ. ಅವರ ಅಭಿವೃದ್ಧಿ ಕೆಲಸಗಳು ಹಾಗೂ ಪ್ರತಿಯೊಬ್ಬರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣ ಇದೆ. ನಮ್ಮ ನಾಯಕರು ನಮ್ಮ ಹೆಮ್ಮೆ ಆದರೆ ಬಸವರಾಜ ದಡೇಸುಗೂರು ವಿರುದ್ಧ 80% ಜನ ಅವರ ಪಕ್ಷದಲ್ಲೇ ವಿರುದ್ಧವಾಗಿದ್ದಾರೆ. ಇಲ್ಲದಿದ್ದರೆ ನಾಯಕರನ್ನು ಮುಂದೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಕಳೆದ ಹತ್ತು ವರ್ಷಗಳಿಂದ ಮೋದಿ ಅವರ ಅಭಿವೃದ್ಧಿ ಕೆಲಸಗಳೇನು.? ಯಾವ ವಿಷಯವನ್ನು ಇಟ್ಟುಕೊಂಡು ಮತಯಾಚನೆ ಮಾಡಲು ಹೋಗುತ್ತಿದ್ದೀರಿ.? ಈ ವಿಚಾರವಾಗಿ ಪ್ರತಿಭಟನೆ ಮಾಡಿ ಇಲ್ಲವೇ ಅಭಿವೃದ್ಧಿ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಾರ್ಯಕರ್ತರ ಅಥವಾ ಮತದಾರರ ವಿಚಾರದಲ್ಲಿ ನಿರ್ಲಕ್ಷ ವಹಿಸಿದರೆ ನಮ್ಮ ತಂಗಡಗಿಯವರ ವಿರುದ್ಧ ಪ್ರತಿಭಟನೆ ಮಾಡಿ ಅದೆಲ್ಲವನ್ನು ಬಿಟ್ಟು ಚಿಕ್ಕ ವಿಚಾರಕ್ಕೆ ಮಾಡುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಬಸವರಾಜ ನೀರಗಂಟಿ, ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ನಗರ ಬ್ಲಾಕ್ ಘಟಕ ಅಧ್ಯಕ್ಷ
ಅಯ್ಯಪ್ಪ ಉಪ್ಪಾರ, ಶಿವರಡ್ಡಿ ನಾಯಕ್, ದೇವಪ್ಪ ಬಾವಿಕಟ್ಟಿ, ಸಿ.ಎಚ್ ರವಿನಂದನ್, ಸೋಮನಾಥ ದೊಡ್ಡಮನಿ, ನಾಗರಾಜ ಅರಳಿ, ದೀಪ ರಾಥೋಡ್, ಶಕುಂತಲಾ ಪಾಟೀಲ್, ರೇಣುಕಾ ಸೇರಿದಂತೆ ಇನ್ನಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ