ತಮ್ಮದಲ್ಲದ ಜಾಗದಲ್ಲಿ ಬೀದಿಬದಿ ವ್ಯಾಪಾರಸ್ತರ ಹಣ್ಣಿನ ಅಂಗಡಿ ಮೇಲೆ ದೇವರಮನಿ ಶಿವಚರಣ ದರ್ಪ

ಕೊಟ್ಟೂರು : ಪಟ್ಟಣದ ಸರ್ವೆ ನಂ. ೭೬೪/೧ ರಲ್ಲಿ ೦.೩೩ ಎಕರೆ ಜಮೀನಿನಲ್ಲಿ ೦.೧೦ ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೂಡ್ಲಿಗಿ ನ್ಯಾಯಾಲಯದಲ್ಲಿ ೨೦೦೧ ರಲ್ಲಿ ದಾವೆ ದಾಖಲಾಗಿದ್ದು ೨೦೨೩ರ ಏಪ್ರಿಲ್ ತಿಂಗಳಲ್ಲಿ ಎಫ್.ಡಿ.ಪಿ. ಡಿಕ್ರಿ ಆಗಿ ಗಂಗಾಧರ, ರುದ್ರೇಶ್ ಮತ್ತು ಇತರರಿಗೆ ನ್ಯಾಯಾಲಯದಿಂದ ಸ್ವಾಧೀನ ಆದೇಶ ನೀಡಿರುತ್ತದೆ. 

ನ್ಯಾಯಾಲಯದ ಆದೇಶದ ಮೇರೆಗೆ ಅಮೀನ್ದಾರ್ ಪರಮೇಶ್ ರವರು ಸ್ಥಳಕ್ಕೆ ಆಗಮಿಸಿ, ೦.೧೦ ಎಕರೆ ಜಮೀನನ್ನು ಮಾಲೀಕರಿಗೆ ಹಸ್ತಾಂತರಿಸಿದರು. ಹಾಗೂ ಪಟ್ಟಣದಲ್ಲಿ ತಮಟೆ ಮೂಲಕ ಸಾರಿದರು. ಯಾರೂ ಸಹ ಇದರಲ್ಲಿ ಒತ್ತುವರಿ ಮಾಡಬಾರದೆಂದು ಸಾರು ಹಾಕಿದರು.

ಕೊಟ್ -1

ಇತ್ತೀಚಿನ ದಿನಗಳಲ್ಲಿ ಹಣ್ಣಿನ ಅಂಗಡಿ ಮೇಲೆ ದರ್ಪ ಮಾಡಿರುವ ದೇವರಮನಿ ಶಿವಚರಣ ಇವರು ಈ ಜಾಗ ಕೋರ್ಟ್‌ನಿಂದ ಎಫ್.ಡಿ.ಪಿ. ಆಗಿದ್ದು ನ್ಯಾಯಾಲಯದವರು ಬುಧವಾರ ರಂದು ಈ ಜಾಗವನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಇದೆಲ್ಲ ತಿಳಿದಿದ್ದೂ, ಬೀದಿಬದಿಯ ವ್ಯಾಪಾರದ ಹಣ್ಣಿನ ಅಂಗಡಿಯ ಮೇಲೆ ದರ್ಪ ತೋರಿಸಿರುವ ಇವರಿಗೆ ಸರಿಯಾದ ಮಾಹಿತಿ ಇದ್ದೂ, ಬೇಕೆಂದೇ ಇಂತಹ ದರ್ಪ ತೋರಿಸಿದ್ದಾರೆ. ಇಲ್ಲಿಯವರೆಗೂ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಿರುವುದಿಲ್ಲ ಎಂದು ಪ್ರವೀಣ್ ಕುಮಾರ್ ತಿಳಿಸಿ, ಇಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ