ದಲಿತ ಸಂಘಟನೆಯ ನೂತನ ಪದಾಧಿಕಾರಿಗಳ ನೇಮಕ
ಮಸ್ಕಿ : ತಾಲೂಕ ದಲಿತ ಸಂರಕ್ಷ ಸಮಿತಿ ಪಧಾದಿಕಾರಿಗಳ ಸಭೆ ಪಟ್ಟಣ ದ ಅಶೋಕ ಶಿಲಾಶಾಸನದ ಹತ್ತಿರ ದಲಿತ ಸಂರಕ್ಷ ಸಮಿತಿಯ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರು ಅಧ್ಯಕ್ಷತೆ ಯಲ್ಲಿ ಶನಿವಾರ ಜರುಗಿತು.
ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರು ಮಾತ ನಾಡಿ ಸಂಘಟನೆಯ ಬೆಳವಣಿಗೆಗೆ ರಾಜ್ಯ ಮುಖಂಡ ಮಲ್ಲೇಶ ಬಳಗಾ ನೂರ, ರಾಜ್ಯ ಕಾನೂನು ಸಲಹೆಗಾರ ಮಲ್ಲಪ್ಪ ನಾಗರಬೆಂಚಿ, ಜಿಲ್ಲಾಕಾ ರ್ಯಾದ್ಯಕ್ಷ ಸಿದ್ದಪ್ಪ ಹೂವಿನಭಾವಿ, ಜಿಲ್ಲಾ ಉಪಾಧ್ಯಕ್ಷ ಮೌನೇಶ ಬಳಗಾನೂರ, ಅಮರಪ್ಪ ಡಬ್ಬೇರಮ ಡುಗು, ತಾಲ್ಲೂಕ ಅಧ್ಯಕ್ಷ ಮರಿ
ಸ್ವಾಮಿ ಬೆನಕನಾಳ, ಕರಿಯಪ್ಪ ತೋರಣದಿನ್ನಿ, ಶ್ರೀಕಾಂತ ಮುರಾರಿ ಸೇರಿದಂತೆ ಸಮಾಜದ ಹಲವಾರು ಮುಖಂಡರು ಸಂಘಟನೆಯ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಮಸ್ಕಿ ನಗರ ಘಟಕ ರಚನೆ: ಮಸ್ಕಿ ನಗರ ಘಟಕ ಅಧ್ಯಕ್ಷರನ್ನಾಗಿ ವೆಂಕ ಟೇಶ ಮುರಾರಿ, ಉಪಾಧ್ಯಕ್ಷರನ್ನಾಗಿ ಸಿದ್ದು ಮುರಾರಿ, ಸಂಘಟನೆ ಕಾರ್ಯದರ್ಶಿಯಾಗಿ ಹುಲಗೇಶ ಮುರಾರಿ ಯನ್ನು ರಾಜ್ಯ ಮತ್ತು ಜಿಲ್ಲಾ ಸಮಿತಿಯ ಮುಖಂಡರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡ ಪುರಸಭೆ ಸದಸ್ಯ ಮೌನೇಶ ಮುರಾರಿ ಮಾತನಾಡಿ ಸಮಾಜದಲ್ಲಿ ದಲಿತರ ಮೇಲೆ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯವನ್ನು ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು. ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕು ಹಾಗೂ ನ್ಯಾಯದ ಪರ ಕೆಲಸಮಾಡಬೇಕು ಅಂದಾಗ ಮಾತ್ರ ಸಂಘಟನೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ದಲಿತ ಸಂರಕ್ಷಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರ ಮಸ್ಕಿ ತಾಲ್ಲೂಕ ಗೌರವಾಧ್ಯಕ್ಷ ಶಿವಪ್ಪ ಸಂತೆಕೆಲ್ಲೂರ, ಕಾರ್ಯಾಧ್ಯಕ್ಷ ವಿಜಯಕುಮಾರ ಹರ್ವಾಪೂರ, ಉಪಾಧ್ಯಕ್ಷ ಲಕ್ಷ್ಮಣ ಕಡುಬೂರ, ಭೀಮೇಶ ಜಿನ್ನಾಪೂರ, ರವಿ ತೋರಣದಿನ್ನಿ, ಹುಲಗಪ್ಪ
ನಂಜಲದಿನ್ನಿ, ಪ್ರಧಾನ ಕಾರ್ಯದರ್ಶಿ ಹನುಮಂತ ಡಬ್ಬರಮಡುಗು, ಸಂಘಟನಾ ಕಾರ್ಯದರ್ಶಿ ಅಮೃತ ಯದ್ಧಲದಿನ್ನಿ. ಆನಂದ ತೋರ ಣದಿನ್ನಿ, ಜೋಕೆಪ್ಪ ಕಡುಬೂರ, ಖಜಾಂಚಿ ರಾಘವೇಂದ್ರ ಕೊಡ್ಲಿ.
ಅ ಲ್ಪಸಂಖ್ಯಾತ ಘಟಕ ಮಸ್ಕಿ ತಾಲೂಕು ಅಧ್ಯಕ್ಷ ಯೂಸೂಪ್ ಖಾನ್ ಮಸ್ಕಿ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ