ಕೊಟ್ಟೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡ್ಸೋರು ಏಳು ಜನ.! ,ಪ್ರಮುಖ ವ್ಯಕ್ತಿ ಹಗರಿಬೊಮ್ಮನಹಳ್ಳಿಯಲ್ಲಿ ಸುತ್ತಮುತ್ತ ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಲು ಜೋರು...!
ರಾಜಾರೋಷವಾಗಿ ನಡೆಯುತ್ತಿದೆ ಕ್ರಿಕೆಟ್ ಬೆಟ್ಟಿಂಗ್ ದಂಧೆ,ಬೆಟ್ಟಿಂಗ್ ಗೆ ಕಡಿವಾಣ ಯಾವಾಗ..!
ಕೊಟ್ಟೂರು ತಾಲೂಕಿನಾದ್ಯಂತ ಬಹುತೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ, ಸಾರ್ವಜನಿಕ ಸ್ಥಳಗಳಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ಕಾಲೇಜ್ ವಿದ್ಯಾರ್ಥಿಗಳು, ಯುವಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಬೆಟ್ಟಿಂಗ್ ದಂಧೆಗೆ ದಾಸರಾಗಿದ್ದಾರೆ. ಮೊಬೈಲ್ ಶಾಪ್, ಪಾನ್ ಶಾಪ್, ಹೋಟೆಲ್‌ಗಳಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತಿದೆ.
ಕ್ರಿಕೆಟ್ ಪಂದ್ಯಾವಳಿ ಆರಂಭವಾಗುತ್ತಿದ್ದಂತೆಯೇ, ಎಲ್ಲೆಡೆ ಬೆಟ್ಟಿಂಗ್ ದಂಧೆ ಮತ್ತು ಆನ್ಲೈನ್ ದಂಧೆ ಚುರುಕಾಗಿದೆ. ಯುವಕರು ಬೆಟ್ಟಿಂಗ್‌ನಲ್ಲಿ ತೊಡಗುತ್ತಿದ್ದಾರೆ. ಯುವ ಜನತೆ ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ.
ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದ ಆಧಾರದ ಮೇಲೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ದುರ್ಬಲ ತಂಡದ ಪರವಾಗಿ 1,000 ರೂ. ಕಟ್ಟಿ ಗೆದ್ದರೆ, ಪ್ರತಿಯಾಗಿ 800 ರೂ. ಕೊಡುತ್ತಾರೆ. ಅದೇ ಬಲಿಷ್ಠ ತಂಡದ ಪರವಾಗಿ ಕಟ್ಟಿ ಗೆಲುವು ಸಾಧಿಸಿದರೆ, ಸರಿ ಸಮಾನ ಮೊತ್ತ ನೀಡುತ್ತಾರೆ.
ಪ್ರತಿ ಬಾಲ್‌ಗೆ, ಓವರ್ ಮತ್ತು ಬ್ಯಾಟ್ಸ್‌ಮನ್ ಎಷ್ಟು ರನ್ ಹೊಡೆಯುತ್ತಾನೆ, ಬೌಲರ್ ಎಷ್ಟು ವಿಕೆಟ್ ಗಳಿಸುತ್ತಾನೆ ಎಂಬಿತ್ಯಾದಿ ಪ್ರತಿ ಹಂತದಲ್ಲೂ ಬೆಟ್ಟಿಂಗ್ ಪ್ರಕ್ರಿಯೆ ನಡೆಯುತ್ತಿದೆ. ನಾಳೆ ಯಾವ ಪಂದ್ಯದ ಪರವಾಗಿ ಬೆಟ್ಟಿಂಗ್ ಕಟ್ಟಬೇಕು ಎನ್ನುವ ಬಗ್ಗೆ ಹಿಂದಿನ ದಿನವೇ ಚರ್ಚಿಸಿ ನಿರ್ಧರಿಸುತ್ತಾರೆ.
ಬೆಟ್ಟಿಂಗ್ ದಂಧೆಗೆ ಸಿಲುಕಿ ಯುವಕರು ಗುಟ್ಕಾ, ಪಾನ್ ಮಸಾಲ, ಮದ್ಯದ ಅಮಲಲ್ಲಿ ತೇಲುತ್ತಿದ್ದಾರೆ. ಬೆಟ್ಟಿಂಗ್‌ನಲ್ಲಿ ಗೆದ್ದರೆ ಖುಷಿಗೆ, ಸೋತರೆ ದುಃಖಕ್ಕೆ ಮದ್ಯದ ನಶೆಯಲ್ಲಿ ಮುಳುಗೇಳುತ್ತಿದ್ದಾರೆ.
ಸೋತು ಸುಣ್ಣವಾದಾಗ ನೋವು ಮರೆಯಲು, ಕಾಸು ಇಲ್ಲವಾದಾಗ ಚಿನ್ನ, ಬೆಳ್ಳಿ ಆಭರಣ, ವಾಚು, ಮೊಬೈಲ್ ಅಡಮಾನಕ್ಕಿಟ್ಟು ಹಣ ಪಡೆದು ಮತ್ತೊಮ್ಮೆ ಗೆಲುವಿನ ಭರವಸೆಯಲ್ಲಿ ಬೆಟ್ಟಿಂಗ್ ವ್ಯವಹಾರಕ್ಕೆ ಮುಂದಾಗುತ್ತಾರೆ
ಇತ್ತೀಚೆಗೆ ಕೆಲವು ಗ್ರಾಮಗಳ ಯುವಕರು ಕೈಸಾಲ ಮಾಡಿ ಬೆಟ್ಟಿಂಗ್‌ನಲ್ಲಿ ತೊಡಗಿಸಿ ಸೋತು ಪಡೆದ ಸಾಲ ತೀರಿಸಲಾಗದೆ ಊರು ಬಿಟ್ಟು ಹೋಗುತ್ತಿರುವುದು ಸೇರಿದಂತೆ ಕೆಲ ಯುವಕರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದರೂ, ಪ್ರಕರಣಗಳು ಬೆಳಕಿಗೆ ಬಾರದೆ ಸತ್ಯಾಂಶ ಮರೆ ಮಾಚುವ ಘಟನೆಗಳು ನಡೆಯುತ್ತಿವೆ.
ಈಗಾಗಲೇ ಕೊಟ್ಟೂರು ತಾಲೂಕಿನಲ್ಲಿ ಬೆಟ್ಟಿಂಗ್ ಭೂತಕ್ಕೆ . ಹಲವಾರು ಕುಟುಂಬಗಳು ಬೀದಿ ಪಾಲಾಗುತ್ತವೋ ಎಂಬ ಆತಂಕ ಜನರಲ್ಲಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ನಾಗರೀಕರ ಆಗ್ರಹವಾಗಿದೆ.
ಬೆಟ್ಟಿಂಗ್ ಆಡುವ ಸ್ಥಳಗಳು : ಐಐಎಫ್ಎಲ್ ಬ್ಯಾಂಕ್ ಎದುರುಗಡೆ, ಜುಮ್ಮಾ ಮಸೀದಿ ಎದುರುಗಡೆ ಟೈಲರ್ ಅಂಗಡಿ ಹತ್ತಿರ, ಎಸ್ ಬಿ ಐ ಬ್ಯಾಂಕ್ ಎದುರುಗಡೆ, ಪಶು ಆಸ್ಪತ್ರೆಯ ಎದುರುಗಡೆ, ಇನ್ನು ಕೊಟ್ಟೂರಿನ ಅನೇಕ ಪಾನ್ ಶಾಪ್ ಗಳ ಹತ್ತಿರ ನಡೆಯುತ್ತಿರುವುದನ್ನು ಮಾತನಾಡಿಕೊಳ್ಳುತ್ತಿದ್ದಾರೆ.? ಎಂದು ಹೆಸರು ಹೇಳಲು ಇಚ್ಚಿಸುವ ಪ್ರಜ್ಞಾವಂತ ನಾಗರಿಕ
ಕೊಟ್ -1
ಕ್ರಿಕೆಟ್ ಬೆಟ್ಟಿಂಗ್ ದಂಧೆ ಸಾರ್ವಜನಿಕ ಸ್ಥಳಗಳಲ್ಲಿ ಯುವಕರು ಮೊಬೈಲ್‌ನಲ್ಲಿ ಕ್ರಿಕೆಟ್ ವೀಕ್ಷಿಸುತ್ತಿರುತ್ತಾರೆ. ನಿರ್ದಿಷ್ಟ ವ್ಯಕ್ತಿಗಳು ಆನ್ಲೈನ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೆ.ಎಂದರು ಮಾನವ ಹಕ್ಕುಗಳ ಕಾರ್ಯಕರ್ತ ಪ್ರವೀಣ್ ಕುಮಾರ್
ಕೊಟ್ -2
ಪ್ರತಿ ವರ್ಷ ಐಪಿಎಲ್ ಕ್ರಿಕೆಟ್ ಬಂತಂದರೆ ಪಾಲಕರಿಗೆ ಆತಂಕ ಶುರುವಾಗುತ್ತಿದ್ದು, ಮಕ್ಕಳು ಸಾಲಗಾರರಾಗಿ ಆಸ್ತಿಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಹಲವು ಸಂಸಾರಗಳು ಬೀದಿಪಾಲಾಗಿವೆ. ಈ ಹಿಂದೆ ಎಷ್ಟೋ ಬಾರಿ ಐಪಿಎಲ್ ಕ್ರಿಕೆಟ್ ದಂದಿಗೆ ಊರು ಬಿಟ್ಟು ಹೋಗಿದ್ದಾರೆ. ಈ ಬೆಟ್ಟಿಂಗ್ ಆಟಕ್ಕೆ ಮಧ್ಯಮ ವರ್ಗದ ಕುಟುಂಬಗಳೇ ಬೀದಿಗೆ ಬರುವ ಪರಿಸ್ಥಿತಿ ಒದಗಿದೆ.ಎಂದು ಡಿಎಸ್ಎಸ್ ಕೊಟ್ಟೂರು ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ