ವಾಸವಿ ಯುವಜನ ಸಂಘದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

 

ಬೆಂಗಳೂರು, ಆ, 5; ವಾಸವಿ ಯುವಜನ ಸಂಘದಿಂದ 8 ನೇ ಬಾರಿ ವಿಶಿಷ್ಟ ರೀತಿಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಮಾಡಲಾಗುತ್ತಿದೆ.

ಸಂಘದ ಸುಮಾರು 50ಕ್ಕೂ ಹೆಚ್ಚು ಯುವಕರು ರಾಜಾ ಅಂಜನ್, ಮುರಳಿ ಕೃಷ್ಣ ನೇತೃತ್ವದಲ್ಲಿ ಸ್ನೇಹಿ ಮಣ್ಣಿನಿಂದ ಮಾಡಿದ, ಬಣ್ಣವಿಲ್ಲದ ಗೌರಿ - ಗಣೇಶ ಮೂರ್ತಿಗಳನ್ನು ಲಾಲ್‌ ಭಾಗ್‌ ಗೇಟ್‌ ಮುಂಭಾಗ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಿದರು. ಅವೆನ್ಯೂ ರಸ್ತೆಯ ಸಂಘದ ಕಚೇರಿಯಲ್ಲಿ ಎರಡು ದಿನಗಳ ಕಾಲ ಮೂರ್ತಿಗಳನ್ನು ವಿತರಿಸಲಾಗುತ್ತಿದೆ.

ಗಣೇಶ ಮೂರ್ತಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಆಚಾರ್ಯ ಪಾಠ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ, ಪ್ರಕೃತಿ ಮಾತೆಯನ್ನು ಉಳಿಸಲು ಯುವ ಸಮೂಹ ವಿಭಿನ್ನ ಆಲೋಚನೆಗಳೊಂದಿಗೆ ವಿಭಿನ್ನವಾಗಿ ಆಯೋಜನೆ ಮಾಡಬೇಕು. ಎಲ್ಲ ಹಬ್ಬಗಳನ್ನು ಪ್ರಕೃತಿ ಮಾತೆಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಗಣೇಶನ ರೀತಿಯಲ್ಲಿ ತಾಳ್ಮೆ, ಆಲೋಚನೆ ಮಾಡಬೇಕು. ಗಣೇಶನ ಕಿವಿಗಳಂತೆ ಕೇಳುಗರಾಗಬೇಕು. ಏಕಗ್ರತೆಗಾಗಿ ಗಣೇಶನ ಕಣ್ಣುಗಳು ಅತ್ಯಂತ ಅಗತ್ಯ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ