ಪೌರ ಕಾರ್ಮಿಕರು ಸರಕಾರಿ ಸೌಲಭ್ಯಗಳನ್ನು ಪಡೆಯಿರಿ: ಮುಖ್ಯಾಧಿಕಾರಿ ಎ ನಸ್ರುಲ್ಲಾ
ಕೊಟ್ಟೂರು : ರಾಜ್ಯದ ಪೌರಕಾರ್ಮಿಕರಿಗೆ ಸರಕಾರ ವಿಷೇಶ ಸೌಲಭ್ಯಗಳನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕೊಟ್ಟೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎ ನಸ್ರುಲ್ಲಾ ಹೇಳಿದರು.
ಅವರು ಪಟ್ಟಣ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರ ಸೇವಾ ಸಂಘದಿಂದ ಸೋಮವಾರ ಹಮ್ಮಿಕೊಂಡ ಪೌರ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೌರ ಕಾರ್ಮಿಕರ ನಿವೇಶನ ಸೌಲಭ್ಯಕ್ಕಾಗಿ ಸರಕಾರದಿಂದ 7.50 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ಒದಗಿಸಲಾಗುವುದು ಹಾಗೂ ಪ್ರತಿ ವರ್ಷ ಪೌರ ಕಾರ್ಮಕರ ಕಲ್ಯಾಣ ನಿಧಿಗೆ ಶೇ.20 ಹಣ ಮೀಸಲಿರಿಸಲಾಗಿರುತ್ತದೆ. ಪೌರ ಮಕ್ಕಳ ಶಿಕ್ಷಣಕ್ಕೆ ನೇರ ಸೌಲಭ್ಯಗಳು ಹಾಗೂ ಇನ್ನೂ ಹತ್ತು ಹಲವಾರು ಸೌಲಭ್ಯಗಳಿದ್ದು ಅದರ ಸದುಪಯೋಗ ಪಡಿಸಿಕೊಳ್ಳಿ ಎಂದರು
ಎಲ್ಲಾ ಪೌರಕಾರ್ಮಿಕ ಅಂಗವಾಗಿ ಆರೋಗ್ಯ ತಪಾಸಣೆ ಪೌರಕಾರ್ಮಿಕರಿಗೆ ಮಾಡಿಸಲಾಯಿತು, ವಿಶೇಷ ಭತ್ಯೆರೂ:7000.00 ಗಳನ್ನು ನೀಡಲಾಯಿತು,ಎಂದು ಹೇಳಿದರು.
ನಂತರ ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಿ ರೇಖಾ ಮಾತನಾಡಿ ನಮ್ಮ ಪಟ್ಟಣ ಇಷ್ಟೊಂದು ಆರೋಗ್ಯ ಪೂರ್ಣವಾಗಿರಲು ಪೌರ ಕಾರ್ಮಿಕರ ಪರಿಶ್ರಮದಿಂದ ಸಾಧ್ಯವಾಗಿದೆ.
ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಪೌರ ಕಾರ್ಮಿಕರು ಗ್ರಾಮದ ಸ್ವಚ್ಚತೆ ಕೈಗೊಂಡು ಗ್ರಾಮವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಇಂದಿನ ದಿನಗಳಲ್ಲಿ ಏಷ್ಟೇ ಹಣ ನೀಡಿದರು ಕೆಲಸ ಮಾಡುವವರ ಸಂಖ್ಯೆ ವಿರಳ, ಅಂತಹ ಕಾಲ ಘಟ್ಟದಲ್ಲಿ ಪಾರಂಪರೆಯಿಂದ ಇದೇ ವೃತ್ತಿ ಅವಲಂಭಿಸಿದ ಇವರಿಗೆ ಸರಕಾರ ಹೆಚ್ಚು ಪ್ರೋತ್ಸಾಹ ನೀಡಲಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಮನೋರಂಜನೆ ಸ್ಪರ್ಧೆಗಳನ್ನು ಏರ್ಪಡಿಸಿದ್ದರು ಮತ್ತು ನಿವೃತ್ತ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು,
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಸಿದ್ದಯ್ಯ ,ಹಾಗೂ ಸರ್ವ ಸದಸ್ಯರುಗಳು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಅನುಷಾ, ಆರ್ ಐ ಕೊಟ್ರೇಶ್, ಸಿಬ್ಬಂದಿಗಳು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ