ಜಾನಪದ ಸೇನೆಗೆ ಜಿಲ್ಲಾಧ್ಯಕ್ಷರಾಗಿ ಶಿವರಾಜ್ ಮೋತಿ ಆಯ್ಕೆ...!

 

ರಾಯಚೂರು: ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷರನ್ನಾಗಿ ಹಟ್ಟಿ ಪಟ್ಟಣದ ಯುವ ಬರಹಗಾರ, ಕಲಾ ಸಂಘಟಕ ಶಿವರಾಜ್ ಮೋತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಾಮಾಣಿಕವಾಗಿ ಜಾನಪದ ಕಲಾವಿದರ ನೋವು, ದುಃಖಕ್ಕೆ ಸ್ಪಂದಿಸಲೆಂದೆ ಸಂಘಟಿತವಾಗಿರುವ ನೂತನ ನಮ್ಮ ಎಲ್ಲಾ ಜಾನಪದ ಸೇನೆಗೆ ಆಯ್ಕೆಯಾದವರಿಗೆ ಅಭಿನಂದನೆಗಳು ಎಂದು ಜನಪದ ಸಿರಿಯ ಜರಗನಹಳ್ಳಿ ಕಾಂತರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ಮೂಲ ಜನಪದ ಕಲಾವಿದರು ಸಂಘಟಿತರಾಗಬೇಕಿದೆ ಆ ಉದ್ದೇಶದಿಂದ ಜನಪದ ಸಿರಿ ಕನ್ನಡ ಎಂಬ ನಮ್ಮ ಪ್ರಖ್ಯಾತ ದೇಸಿ ವಾಹಿನಿಯ ಮೂಲಕ ಈಗಾಗಲೇ ರಾಜ್ಯಾದ್ಯಾಂತ ಕಲಾವಿದರನ್ನು ಹುಡುಕಿಕೊಂಡು ಪರ್ಯಟನೆ ಮಾಡುತ್ತಾ, ಅವರ ಜೀವನದ ಕುರಿತು ನಾಡಿನ ಮುಂದೆ ತೆರೆದಿಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯ ಮೂಲಕ ಕೆಲಸ ಮಾಡಲು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ.

ಜನಪದಗೋಸ್ಕರ ಮಾತನಾಡುವುದು, ಕೆಲಸ ಮಾಡುವುದು ಅಂದರೆ ನಮಗೆ ಇನ್ನೆಲ್ಲೂ ಇಲ್ಲದ ಆನಂದ. ಕಲೆಗಾರರನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಅವರು ಸಹ ಈ ದೇಶದ ಹೆಮ್ಮೆ, ಆಸ್ತಿ ಅನ್ನುವಂತಹ ಅಭಿಪ್ರಾಯ ರೂಪಿಸಬೇಕಿದೆ ಎಂದರು. 


ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಜಾನಪದ ದಿನಾಚರಣೆ ದಿನದಂದು ನಾಡಿನ ಸಮಸ್ತ ಜಾನಪದ ಕಲಾವಿದರ ಏಳಿಗೆಗಾಗಿ ಇರುವಂತಹ ನಮ್ಮ ಸಂಸ್ಥೆಯ ಲಾಂಛನ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಜನರ ಬಳಿಗೆ ಜಾನಪದ ಒಯ್ಯಲು ಜನಪದ ಸಿರಿ ಕಂಕಣಬದ್ಧವಾಗಿ ನಿಂತಿದೆ. ಉದ್ದೇಶಗಳು ಹೇಳುವುದಾದರೆ ಉಚಿತವಾಗಿ ಸದಸ್ಯತ್ವವನ್ನು ಪಡೆದುಕೊಂಡು ವೈದ್ಯಕೀಯ ವೆಚ್ಚವನ್ನು ನಮ್ಮ ಟ್ರಸ್ಟ್ ವತಿಯಿಂದ ಪ್ರತಿ ಜನಪದ ಕಲಾವಿದರಿಗೆ ಅಥವಾ ಕಲಾವಿದರ ಮುಖ್ಯಸ್ಥರಿಗೆ ವಾರ್ಷಿಕ ಒಂದು ಕೋಟಿಯ ವಿಮೆ ಒಂದು ಅವಧಿಗೆ, ಜಾನಪದ ಕಲಾವಿದರ ಮನೆಯ ಒಬ್ಬ ವಿದ್ಯಾರ್ಥಿಗೆ ವಾರ್ಷಿಕ ಹತ್ತು ಸಾವಿರ ರೂ. ಗಳ ವಿದ್ಯಾಭ್ಯಾಸದ ಸೌಲಭ್ಯ, ಕಲಾವಿದರು ಸನ್ಮಾರ್ಗದಲ್ಲಿ ನಡೆಯಲು ನಾಡಿ ಶುದ್ಧಿ, ಆತ್ಮಶುದ್ಧಿ, ಭಾವಶುದ್ಧಿಗಳ ಕುರಿತು ನಾಡಿನಾದ್ಯಂತ ಶಿಬಿರಗಳನ್ನು ಏರ್ಪಾಡು, ಸರ್ಕಾರ ಜಾರಿ ತರುವಂತಹ ಯೋಜನೆಗಳನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಅಕಾಡೆಮಿಯ ಯೋಜನೆಗಳು ಕಟ್ಟಕಡೆಯ ಜನಪದ ಕಲಾವಿದರಿಗೆ ತಲುಪುವಂತೆ ಹಾಗೂ ಸಾಮಾಜಿಕ ಜಾಲತಾಣಗಳಿಂದ ಗಮನಕ್ಕೆ ತರುವಂತೆ ಕಲಾವಿದರೊಟ್ಟಿಗೆ ನೇರ ಸಂಪರ್ಕ ಸಾಧಿಸಿಕೊಂಡು ಮಾಹಿತಿ ಒದಗಿಸುವ ಕೆಲಸ ಮಾಡುವುದು, ಮೈಸೂರು ನಗರದ ಮಾರಶೆಟ್ಟಿ ಹಳ್ಳಿಯಲ್ಲಿ ಮೂರುವರೆ ಎಕರೆ ಭೂಮಿಯನ್ನು ಖರೀದಿ ಮಾಡಿ, ಅಲ್ಲಿ ಜಾನಪದ ಲೋಕಕ್ಕೆ ಹೋಲುವಂತಹ 24 ಗಂಟೆಗಳಲ್ಲೂ ಜಾನಪದ ಕಲಾವಿದರಿಗೆ ತೆರೆದಿರುವಂತಹ ಒಂದು ಸುಂದರ ಜಾನಪದ ಜಗತ್ತು ಕಟ್ಟಲಿಕ್ಕೆ ಅಡಿಗಲ್ಲು ಹಾಕಲು ಯೋಜನೆ ರೂಪಿಸಿದ್ದೇವೆ. ಈ ಎಲ್ಲಾ ಪಂಚರತ್ನ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಲು ನಾವು ಈಗಾಗಲೇ ತಯಾರಿಯಲ್ಲಿದ್ದೇವೆ ಎಂದು ರಾಜ್ಯಾಧ್ಯಕ್ಷರಾದ ಜರಗನಹಳ್ಳಿ ಕಾಂತರಾಜು ಹೇಳಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ