ವೀರಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ.ಹಾಗೂ ಕಲೋತ್ಸವ. ಹಿರೇನಗನೂರು

ಲಿಂಗಸಗೂರು ತಾಲೂಕಿನ ಹಿರೇನಗನೂರು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಪಂಚಾಯಿತಿ ರಾಯಚೂರು ತಾಲೂಕ ಪಂಚಾಯಿತಿ ಲಿಂಗಸಗೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಲಿಂಗಸಗೂರು ಹಾಗೂ ಸರಕಾರಿ ಪ್ರೌಢಶಾಲೆ ಹಿರೇನಗನೂರು. ಇವರ ಸಹಯೋಗದೊಂದಿಗೆ 2024-25 ನೆಯ ಸಾಲಿನ ವೀರಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರದ ಅಧ್ಯಕ್ಷತೆ ಚಿನ್ನಪ್ಪ ಕೋಟ್ರಿಕಿ.ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ

ಶ್ರೀ ಮಾರ್ಟಿನ್. ಸಿಆರ್ ಪಿ ಚಂದ್ರಶೇಖರ್ ಶಂಕ್ರಪ್ಪ ಸಕ್ರಿ ಮುಖ್ಯ ಗುರುಗಳು ಆನ್ವರಿ. ಊರಿನ ಹಿರಿಯರಾದ ಬಸವರಾಜಪ್ಪ ಕುರುಗೋಡು.ಹಾಗೂ ತಿಮ್ಮನಗೌಡ ಪಟೇಲ್. ಭೂದಾನಿಗಳಾದ ವಿರುಪಾಕ್ಷಪ್ಪ ಮಾಲಿಪಾಟೀಲ್. ಶಿವನಗೌಡ ಪಾಟೀಲ್. ಮೌನದ್ದೀನ್ ಬೂದಿನಾಳ. ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಹಾಗೂ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಚಂದಮ್ಮ. ಸದಸ್ಯರಾದ ದಾದಾಪೀರ.ಶಾಂತಪ್ಪ ಸೋಮನಮರಡಿ. ಮೌನೇಶ್ ಬೊಮ್ಮನಹಳ್ಳಿ.

ಶ್ರೀಮತಿ ಪಿಡ್ಡಮ್ಮ ಹೂವಪ್ಪ.ಅಮರೇಶ್ ಬೆಂಚಮಟ್ಟಿ.ನಿಂಗಪ್ಪ ಹುಬ್ಬಳ್ಳಿ.ನಿಂಗಪ್ಪ ಬೆಂಚಮಟ್ಟಿ. ಮೋದೀನ್ ಸಾಬ್. ಮೌನಿ ಹೋಟೆಲ್. ಮೌಲಾ ಬೂದಿನಾಳ. ದೇವಪ್ಪ ಎಸ್ ಡಿಎಂಸಿ ಪ್ರಾಥಮಿಕ ಶಾಲೆ ಹಿರೇನಗನೂರು. ಗ್ರಾಮದ ಇನ್ನೂ ಅನೇಕ ಯುವ ಮಿತ್ರರು ಮತ್ತು ವೀರಾಪುರ್ ವಲಯ ಮಟ್ಟದ ಎಲ್ಲಾ ಶಾಲೆಯ ಮುಖ್ಯ ಗುರುಗಳು ಹಾಗೂ ಸಾ ಶಿಕ್ಷಕರನ್ನು ಒಳಗೊಂಡು ದೀಪಾ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಚಿನ್ನಪ್ಪ ಕೊಟ್ರಿಕಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಮುಂದೆ ಬರಬೇಕೆಂದು.

ಕರೆ ನೀಡಿದರು.ಅಕ್ಷರ ಅಭ್ಯಾಸದ ಜೊತೆಗೆ ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಶಿಕ್ಷಣ ಇಲಾಖೆಯ ನಡೆಯನ್ನು ಕೊಂಡಾಡಿದರು.

ಹಿರೇನಗನೂರು ಪ್ರೌಢಶಾಲೆಯಲ್ಲಿ ಜರುಗಿದ ವೀರಪುರದ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಅಕ್ಷರ ದಾಸೋಹ ಸಾಯಕ ನಿರ್ದೇಶಕರಾದ ಮಾರ್ಟಿನ್ ಅವರು ಮುಖ್ಯ ಹತ್ತಿಗಳಾಗಿ ಉದ್ಘಾಟನಾ ಮಾತುಗಳನ್ನಾಡುತ್ತಾ ಮಕ್ಕಳ ಪ್ರತಿಭೆಯನ್ನು ನಿಷ್ಪಕ್ಷಪಾತವಾಗಿ ಗುರುತಿಸಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮುಸ್ತಾಕ್ ಅಹಮದ್ ನೆರವೇರಿಸಿದರು. ರವೀಂದ್ರಸರ್ ಸ್ವಾಗತಿಸಿದರು. ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಯುವಕರು ಯುವ ನಾಯಕರು ಹಾಗೂ ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ