ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಮನವಿ

 

ಮಸ್ಕಿ : ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಬೇಕು ಹಾಗೂ ವಿಧವೆಯರು ಮತ್ತು ಹಿರಿಯ ನಾಗರೀಕರಿಗೆ ಸಿಗುತ್ತಿರುವ ಮಾಸಿಕ ವೇತನ ಹೆಚ್ಚಿಸಬೇಕು ಎಂದು ಮಸ್ಕಿ

ಸಾಧನ ತಾಲೂಕು ಮಹಿಳಾ ಒಕ್ಕೂಟ ಮಾನ್ಯ ಉಪ ತಹಶೀಲ್ದಾರ ಪ್ರಕಾಶ್ ಬುಳ್ಳಾ ಇವರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತು.

ಈ ವೇಳೆ,ಸಾಧನ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮರಿಯಮ್ಮ ಎಂ ರಾಮಲದಿನ್ನಿ ರವರು ಮಾತನಾಡಿ,ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ ಮತ್ತು ಕೊಲೆ ಹಾಗೂ ಕೆಲಸದ ಸ್ಥಳಗಳಲ್ಲಿ ಮತ್ತು ಮನೆಯ ಹೊರಗಡೆ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮತ್ತು ದುರ್ಬಳಕೆ, ಮಹಿಳೆಯರ ಕಳ್ಳ ಸಾಗಾಣಿಕೆಯಂತಹ ಕೃತ್ಯಗಳು ನಡೆದಿರುವ ಮತ್ತು ನಡೆಯುತ್ತಿರುವ ಅಪರಾಧಗಳು ಹೆಚ್ಚುತ್ತಲೇ ಇವೆ. 

ಮಹಿಳೆಯರ ಮೇಲಿನ ಕೌರ್ಯದ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡದಂತೆ ಕಾನೂನಿನಲ್ಲಿ ಅಗತ್ಯ ಸುಧಾರಣೆಗಳನ್ನು ತರಬೇಕು.

ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಕು, ಕಣ್ಣಾವಲು ಮತ್ತು ಭದ್ರತೆಯನ್ನು ಸುಧಾರಿಸಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮವನ್ನು ಸರಕಾರ ತೆಗೆದ ಕೊಳ್ಳಬೇಕು ಎಂದರು.

ಸರ್ಕಾರದಿಂದ ವಿಧವೆಯರು ಮತ್ತು ಹಿರಿಯ ನಾಗರೀಕರಿಗೆ ಸಿಗುತ್ತಿರುವ ಮಾಸಿಕ ವೇತನದ ಅಲ್ಪ ಮೊತ್ತದಿಂದ ಕುಟುಂಬದ ನಿರ್ವಹಣೆ ಅತಿ ಕಷ್ಟಕರವಾಗುತ್ತಿದೆ. 

ವಿಧವೆಯರಿಗೆ ನೀಡುತ್ತಿರುವ ಮಾಸಿಕ ವಿಧವಾ ವೇತನ ರೂ.800/- ಅನ್ನು ಪರಿಷ್ಕರಿಸಿ ಕನಿಷ್ಟ ರೂ.1600 ರಿಂದ ರೂ.2000/-ಗಳಿಗೆ ಹೆಚ್ಚಿಸಬೇಕು. ಹಿರಿಯ ನಾಗರೀಕರಿಗೆ ನೀಡುತ್ತಿರುವ ಮಾಸಿಕ ವೃದ್ಯಾಪ್ಯವೇತನ ರೂ.1200/- ಅನ್ನು ಪರಿಷ್ಕರಿಸಿ ಕನಿಷ್ಟ ರೂ.2500 ರಿಂದ ರೂ.3000/-ಗಳಿಗೆ ಹೆಚ್ಚಿಸಬೇಕು ಎಂದು ಒಕ್ಕೂಟದ ಕಾರ್ಯದರ್ಶಿ ಖಾದರ ಬೀ ಯವರು ಒತ್ತಾಯಿಸಿದರು.

ಈ ವೇಳೆ,ಒಕ್ಕೂಟದ. ಸಂಯೋಜಕರಾದ ಶಾಂತಪ್ಪ ಸೋಮನಮರಡಿ ,ಅರಳಪ್ಪ ಎಂ.ಡಿ ಮಾನ್ವಿ, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ