ಕೊಟ್ಟೂರು ರಾಮಪ್ಪ ಮೇಷ್ಟ್ರು ಶಿಕ್ಷಕರನ್ನು ಸ್ಮರಣೆ : ಕೆ ನೇಮಿರಾಜ ನಾಯ್ಕ್

ಕೊಟ್ಟೂರು: ಮಾನ್ಯ ಶಾಸಕರಾದ ಕೆ ನೇಮಿರಾಜ ನಾಯ್ಕ ರವರು ಕೊಟ್ಟೂರು ತಾಲೂಕು ಶಿಕ್ಷಕರ ಸಂಘದ ವತಿಯಿಂದ ಶ್ರೀ ಮರಳುಸಿದ್ದೇಶ್ವರ ಸಭಾಂಗಣದಲ್ಲಿ  ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜಯಂತಿಯನ್ನು ಶನಿವಾರ ಆಚರಣೆ ಮಾಡಲಾಯಿತು. 

ಈ ಕಾರ್ಯಕ್ರಮವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ ನೇಮಿರಾಜ್ ನಾಯ್ಕ್ ದೀಪ ಹಚ್ಚುವುದರ ಮೂಲಕ ಉದ್ಘಾಟನೆ ನೆರವೇರಿಸಿದರು.

ನಂತರ  ಕೆ ನೇಮಿರಾಜ ನಾಯ್ಕ್ ಶಾಸಕರು ಮಾತನಾಡಿ ಹೆಸರುವಾಸಿಯಾದ ಮರಿಯಮ್ಮನಹಳ್ಳಿ ಬಾಗದಲ್ಲಿ ಕೊಟ್ಟೂರು ರಾಮಪ್ಪ ಮೇಷ್ಟ್ರು ಸ್ಮರಣೆ ಶಿಕ್ಷಕರ ಕೊಡುಗೆ ಅಪಾರವಾದದ್ದು ಶಿಕ್ಷಕರನ್ನು ದೇವರ ಸಮಾನವಾಗಿ ನೋಡುವ ಸಂಸ್ಕೃತಿ ನಮ್ಮದು ಶಿಕ್ಷಕರ ಗೌರವ ಹೆಚ್ಚಿಸುವಂತ ಕೆಲಸವನ್ನು ನಾವೆಲ್ಲರೂ ಮಾಡಬೇಕು 

ಜಗತ್ತಿನಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದು. ಒಂದು ಮಗು ಸರ್ವತೋಮುಖ ಅಭಿವೃದ್ಧಿಗೆ ಕಾರಣ ಶಿಕ್ಷಕ ಪಾತ್ರ ದೊಡ್ಡದಾಗಿರುತ್ತದೆ. ಮಗುವಿನ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕನ ಕೈಯಲ್ಲಿ ಇರುತ್ತದೆ.

24 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರು 7ನೇ ಆಯೋಗವೇತನ ಅವರಿಗೂ ನೀಡುವಂತೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಹೇಳಿದರು.

24 ನೇ ಸಾಲಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 136 ನೇ ಜಯಂತಿಯ ಅಂಗವಾಗಿ ಶಾಸಕರು ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು 

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮರೇಶ್ ಜಿ ಕೆ, ತಾಲೂಕು ಪಂಚಾಯಿತಿ ಇ ಓ ಡಾ. ಆನಂದ್ ಕುಮಾರ್, ಜಿಲ್ಲಾ ಪಂ. ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್, ಪ. ಪಂ. ಅಧ್ಯಕ್ಷರಾದ ಶ್ರೀಮತಿ ಬಿ.ರೇಖಾ ರಮೇಶ್, ಪಟ್ಟಣ ಪಂ. ಉಪಾಧ್ಯಕ್ಷರಾದ ಜಿ. ಸಿದ್ದಯ್ಯ, ತಾಲೂಕು ಮಟ್ಟದ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ