"ಡಾಕ್ಟರ್ ಎಸ್ ರಾಧಾಕೃಷ್ಣನ್ ಭಾರತ ದೇಶಕ್ಕೆಅಪಾರ ಸೇವೆ : ಸಮಾಜಕ್ಕೆ ಅನನ್ಯ "

 

*ಗ್ರಂಥಾಲಯದಲ್ಲಿ ಶಿಕ್ಷಕರ ದಿನಾಚರಣೆ*

ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದಲ್ಲಿ ಡಾ.ಎಸ್ ರಾಧಾ ಕೃಷ್ಣನ್ ರ ಜನ್ಮದಿನಾಚರಣೆ ಅಂಗವಾಗಿ ಡಾ.ಎಸ್ ರಾಧಾ ಕೃಷ್ಣನ್ ರ ಭಾವ ಚಿತ್ರಕ್ಕೆ ಪೂಜೆ ಮಾಡಿ ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು

  ರಾಧಾಕೃಷ್ಣನ್ ಅವರು ಮೈಸೂರು ಮಹಾರಾಜ ಕಾಲೇಜಿಗೆ ಪ್ರಾಧ್ಯಾಪಕರಾಗಿ ನೇಮಕವಾಗುತ್ತಾರೆ. ಮೈಸೂರಿನ ಜನ ಬಹಳ ಸಂತಸದಿಂದ ಬರಮಾಡಿಕೊಳ್ಳುತ್ತಾರೆ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಬದುಕಿದ್ದರು ಎಂದು ಶಿವಶಾಲಿ ಹಾಲೇಶ್ ನಿವೃತ್ತ ಶಿಕ್ಷಕರು ಮಾತನಾಡಿದರು

 ಡಾಕ್ಟರ್ ಎಸ್ ರಾಧಾಕೃಷ್ಣನ್ ಭಾರತ ದೇಶಕ್ಕೆ ಸಲ್ಲಿಸಿದ ಅಪಾರ ಸೇವೆಗಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ *ಭಾರತ ರತ್ನ* ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿದೆ ಭಾರತ ಸರ್ಕಾರ ಎಂದು ಎಂದು *ಗೀತಾ ನಾಗರಾಜ್* ಧಿಯಾಸಫಿಕಲ್ ಸದಸ್ಯರು ಮಾತನಾಡಿದರು

 ಡಾ. ಎಸ್ ರಾಧಾಕೃಷ್ಣನ್ ಅವರು ಪ್ರಾಧ್ಯಾಪಕ ,ತತ್ವಜ್ಞಾನಿ ,ಶಿಕ್ಷಣ ತಜ್ಞ ,ಆಡಳಿತಗಾರ ಎಲ್ಲದಕ್ಕೂ ಮಿಗಿಲಾಗಿ ಶಿಕ್ಷಕರಾಗಿ, ರಾಷ್ಟ್ರಪತಿಯಾಗಿ ಭಾರತಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ .ರಾಧಾಕೃಷ್ಣನ್ ಅವರು 1888 ರ ಸೆಪ್ಟೆಂಬರ್ 5 ರಂದು ತಂದೆ ವೀರ ಸ್ವಾಮಿ ತಾಯಿ ಸೀತಮ್ಮ ಇವರ ಮಡಿಲಲ್ಲಿ ಜನಿಸಿ ಅಪಾರ ಕೀರ್ತಿ ಪಡೆದಿದ್ದಾರೆ ಎಂದು ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಮಾತನಾಡಿದರು

ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ,ಗ್ರಂಥಾಲಯ ಸದಸ್ಯರು ,ಮಕ್ಕಳು, ಮಹಿಳೆಯರು ಹಾಗೂ ಗ್ರಂಥಾಲಯ ಸಿಬ್ಬಂದಿಗಳಾದ ಶ್ರೀನಿವಾಸ್ ಪತ್ತಾರ್, ಮಮತಾ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ