ಮಹಿಬೂಬಿ ಕೆಎಎಸ್ ರವರ ವರ್ಗಾವಣೆ ಆದೇಶ ಹಿಂಪಡೆಯುವಂತೆ ಪ್ರಗತಿಪರ ಸಂಘಟನೆ ಮನವಿ
ಮಸ್ಕಿ : ಅವಧಿಗೂ ಮುನ್ನ ವರ್ಗಾವಣೆ ಮಾಡಲಾದ ರಾಯಚೂರು ಉಪ ವಿಭಾಗ ಅಧಿಕಾರಿ ಮಹಿಬೂಬಿ ಕೆಎಎಸ್ ರವರು ಅನ್ಯಾಯದ ವರ್ಗಾವಣೆಯನ್ನು ಹಿಂಪಡೆಯುವಂತೆ ಪ್ರಗತಿಪರ ಸಂಘಟನೆಯಿಂದ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ ವಿಧಾನಸೌಧ ಬೆಂಗಳೂರು ಇವರಿಗೆ ಡಾಕ್ಟರ್ ಮಲ್ಲಪ್ಪ.ಕೆ. ಯರಗೋಳ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು.
ಈ ವೇಳೆಯಲ್ಲಿ ಮಾರುತಿ ಜಿನ್ನಾಪುರ ರವರು ಮಾತನಾಡಿ, ರಾಯಚೂರು ಉಪ ವಿಭಾಗ ಅಧಿಕಾರಿ ಶ್ರೀಮತಿ ಮಹಿಬೂಬಿ ಕೆಎಎಸ್ ರವರು ಕಳೆದ ಒಂಬತ್ತು ತಿಂಗಳ ಹಿಂದೆ ರಾಯಚೂರುಗೆ ವರ್ಗಾವಣೆಯಾಗಿ ಬಂದಿದ್ದಾರೆ ಇವರನ್ನು ಹಠಾತ್ತನೆ ವರ್ಗಾವಣೆ ಮಾಡಿದ ತಮ್ಮ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಜಿಲ್ಲೆಯ ಅನೇಕ ಭೂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಕುಂದು ಕೊರತೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ ಹಾಗೂ ಸರಕಾರ ವಹಿಸಿದ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡುತ್ತಾ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಇಂತಹ ಅಧಿಕಾರಿಯನ್ನು ಜಿಲ್ಲೆಯಿಂದ ತತ್ ಕ್ಷಣ ವರ್ಗಾವಣೆ ಮಾಡುವುದು ಎಷ್ಟು ಸರಿ? ಸರಕಾರಕ್ಕೆ ವಿವೇಚನೆ ಬೇಡವೇ? ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಸರಕಾರ ಕೊಡುವ ಗೌರವ ಇದೇನಾ?
ಕೂಡಲೇ ಇವರ ವರ್ಗಾವಣೆ ಆದೇಶವನ್ನು ಹಿಂಪಡೆದು ಶ್ರೀಮತಿ ಮಹಿಬೂಬಿ ಅವರನ್ನು ರಾಯಚೂರಿನಲ್ಲಿಯೇ ಮುಂದುವರೆಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂತೋಷ ಹಿರೇದಿನ್ನಿ,ಮಲ್ಲಪ್ಪ ಎಸ್ ಗೋನಾಳ,ಅಮರೇಶ ಪಾಮನ ಕಲ್ಲೂರು,ಚಂದಸಾಬ, ಬಸವರಾಜ ಕೊಠಾರಿ, ಮಾಳಪ್ಪ ಹೂವಿನ ಭಾವಿ,ಕಿರಣ ಮುರಾರಿ, ಹುಲಗಪ್ಪ ಹಸ್ಮಕಲ್,ಸೇರಿದಂತೆ ವಿವಿಧ ಸಂಘಟನೆ ಗಳ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ