*ವಿದ್ಯಾರ್ಥಿಗಳು ಸೃಜನಾತ್ಮಕ,ನೈತಿಕ ಶಿಕ್ಷಣಕ್ಕೆ ಒತ್ತುಕೊಡಿ: ಮಲ್ಲಯ್ಯ ಅಂಬಾಡಿ*
*ಮಸ್ಕಿ* ತಾಲ್ಲೂಕಿನ ಮುದ್ದಾಪೂರ ಗ್ರಾಮದಲ್ಲಿರುವ ತುಂಗಭದ್ರಾ ಪದವಿ ಪೂರ್ವ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಸ್ಕಿ ಪುರಸಭೆ ಅದ್ಯಕ್ಷರಾದ ಮಲ್ಲಯ್ಯ ಅಂಬಾಡಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬರಿ ಅಂಕಗಳಿಕೆಗೆ ಮಾತ್ರ ಸೀಮಿತವಾದ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ.
ಆದರೆ ಪ್ರಸ್ತುತ ದಿನಮಾನಗಳಲ್ಲಿ ಸೃಜನಶೀಲ, ಸೃಜನಾತ್ಮಕ, ನೈತಿಕ,ಮೌಲ್ಯ ಶಿಕ್ಷಣ ಕುಂಟಿತಗೊಂಡಿದೆ ಹೀಗಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಬಹಳಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ ಅದಕ್ಕಾಗಿ ಶಿಕ್ಷಣ ಗುಣಮಟ್ಟ ಮತ್ತು ಆದರ್ಶ ಶಿಕ್ಷಣ ಕಾಪಾಡಿಕೊಳ್ಳಿ ಎಂದು ಮಲ್ಲಯ್ಯ ಅಂಬಾಡಿ ಅದ್ಯಕ್ಷರು ಪುರಸಭೆ ಮಸ್ಕಿ ಹೇಳಿದರು. ನಂತರ ಮಾತನಾಡಿದ ಹನುಮಂತಪ್ಪ ಮುದ್ದಾಪೂರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಶಿಕ್ಷಣವು ಜೀವನದ ಮುಖ್ಯ ಘಟ್ಟ,ಅದಕ್ಕಾಗಿ ಕಲಿಯುವ ಹಂತದಲ್ಲಿ ಸರಿಯಾಗಿ ಗುರು ಹಿರಿಯರಿಗೆ ವಿನಯರಾಗಿ ವಿನಮೃತೆಯಿಂದ ಶಿಕ್ಷಣವನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅತಿಥಿಗಳಾದ ಮೈಹಿಬೂಬುಸಾಬು ಮುದ್ದಾಪೂರ,ಭೀಮಣ್ಣ ನಾಯಕ,ಅರವಿಂದ ಮುಖ್ಯ ಗುರುಗಳು, ಶರಣಬಸವ ಶಿಕ್ಷಕರು, ಭರತ ಶೇಟ್,ರಾಮಣ್ಣ ನಾಯಕ ಪ್ರಾಚಾರ್ಯರು, ಕಾಲೇಜ್ ಉಪನ್ಯಾಸಕರು, ವಿದ್ಯಾರ್ಥಿಗಳು ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ