ಮುಡಾ ಹಗರಣ ತನಿಖೆಗೆ ಹೈ ಕೋರ್ಟ್ ಆದೇಶದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಪ್ರತಿಭಟನೆ
ಮಸ್ಕಿ : ಮುಡಾ ಹಗರಣ ತನಿಖೆಗೆ ಹೈ ಕೋರ್ಟ್ ಆದೇಶದ ಹಿನ್ನೆಲೆ ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಪಕ್ಷದ ವತಿಯಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಲಾಯಿತು.
ಮುಡಾ ಹಗರಣ ಹೈ ಕೋರ್ಟ್ ನಲ್ಲಿ ವಾದ ಮಂಡನೆ ಹಂತದಲ್ಲಿದ್ದ ಕೇಸ್ ಈಗ ತನಿಖೆಗೆ ಹೈ ಕೋರ್ಟ್ ಆದೇಶ ನೀಡಿದ್ದರಿಂದ ಬಸವೇಶ್ವರ ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ವತಿಯಿಂದ ಹಳೇ ಬಸ್ ನಿಲ್ದಾಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಾ ರಾಜೀನಾಮೆ ನೀಡಿ ಎಂಬ ಘೋಷಣೆ ಮಾತ್ರ ಸದ್ದು ಮಾಡಿತು.
ಇದೇ ಸಂದರ್ಭದಲ್ಲಿ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು,ಶರಣ ಬಸವ ಸೊಪ್ಪಿಮಠ ಮಂಡಲ ಅಧ್ಯಕ್ಷ,ಬಾಳೆಕಾಯಿ ಸೂಗಣ್ಣ, ಮಲ್ಲಯ್ಯ ಅಂಬಾಡಿ ಪುರಸಭೆ ಅಧ್ಯಕ್ಷರು, ರಮೇಶ್ ಉದ್ಭಾಳ ಪ್ರಧಾನ ಕಾರ್ಯದರ್ಶಿ,ವೀರೇಶ್ ಕಮತರ, ಭರತ್ ಶೇಟ್,ಬಸವರಾಜ್ ಬುಕ್ಕಣ್ಣ,ವೆಂಕಟೇಶ್ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ