ಹಿರೇನಗನೂರು ಪ್ರೌಢಶಾಲೆ ವೈಭವದ ಪ್ರತಿಭಾ ಕಾರಂಜಿ. ಹಾಗೂ ಕಲೋತ್ಸವ.
ಲಿಂಗಸಗೂರು:ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಸರಕಾರಿ ಪ್ರೌಢಶಾಲೆ ಯಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ವಿಜೃಂಭಣೆಯಿಂದ ವೈಭವಯುತವಾಗಿ ಜರುಗಿತು.
ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು ಕು. ಸಂಗೀತಾ ತಂ/ ಬಸವರಾಜ ಸುಶ್ರಾವ್ಯವಾಗಿ ಹಾಡಿದಳು.
ಶ್ರೀರವೀಂದ್ರಸ್ವಾಮಿ ಸಶಿ ಎಲ್ಲ ಗಣ್ಯರನ್ನು ಸ್ವಾಗತಿಸಿದರು.ನಾಡಗೀತೆಗೆ ಗೌರವ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ತಾಲೂಕಾ ಸಹಾಯಕ ನಿರ್ದೇಶಕರು ಅಕ್ಷರದಾಸೋಹ ಅಧಿಕಾರಿಗಳಾದ ಶ್ರೀ ಮಾರ್ಟಿನ್ ಅಮಲ್ ರಾಜ್ ,
ಶಿಕ್ಷಣ ಪ್ರೇಮಿಗಳು ಹಾಗೂ ಸಮಾಜಸೇವಕರಾದ ಮೌನುದ್ದೀನ್ ಬೂದಿನಾಳˌ ಊರಿನ ಗಣ್ಯರಾದ ಬಸವರಾಜ ಕುರುಗೋಡˌತಿಮ್ಮನಗೌಡ್ರುˌ ಭೂದಾನಿಗಳಾದ ವಿರೂಪಾಕ್ಷಪ್ಪಗೌಡ ಮಾಲಿಪಾಟೀಲˌ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕಿˌಶ್ರೀಮತಿ ವಿಜಯಲಕ್ಷ್ಮೀ ಮು.ಗು.ಇತರರು ಸೇರಿ ಉದ್ಘಾಟಿಸಿದರು.
ಪ್ರಾಸ್ತಾವಿಕ ನುಡಿಗಳಲ್ಲಿ ಮುಖ್ಯಗುರುಗಳಾದ ಶ್ರೀಮತಿ ವಿಜಯಲಕ್ಷ್ಮೀ ಹಿರೇಮಠ ರವರು ಮಾತನಾಡುತ್ತಾ ಮಕ್ಕಳ ಕಲಿಕೆಯೊಂದಿಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಮುಖ್ಯಅತಿಥಿಗಳಾಗಿ ಆಗಮಿಸಿದಂತ ಶ್ರೀ ಮಾರ್ಟಿನ್ ಅಮಲ್ ರಾಜ್ ತಾಲೂಕಾ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಲಿಂಗಸುಗೂರುರವರು ಮಾತನಾಡಿ ಕಾರ್ಯಕ್ರಮ ಅಚ್ಚುಕಟ್ಟಾಗಿದೆ ಪ್ರತಿಭೆ ಹೆಕ್ಕಿ ತೆಗಿಯುವ ಕೆಲಸ ನ್ಯಾಯಯುತವಾಗಿ ಆಗಲಿ ಎಂದರು.
ಊರಿನ ಗಣ್ಯರಾದ ಬಸವರಾಜಪ್ಪಗೌಡ ಕುರುಗೋಡು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮಧ್ಯೆ ಎಲ್ಲಾ ಗಣ್ಯರಿಗೂ ಸ್ಮರಣಿಕೆ ನೀಡುವುದರ ಮೂಲಕ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದ ಹಟ್ಟಿವಲಯದ ಎಲ್ಲಾ ಶಿಕ್ಷಕರಿಗೆ ಪೆನ್ನು ಮತ್ತು ಸ್ಮರಣಿಕೆ ನೀಡುವುದರ ಮೂಲಕ ಇದೇ ಮೊದಲ ಬಾರಿಗೆ ತೀರ್ಪುಗಾರರನ್ನು ಕೂಡ ವೇದಿಕೆಗೆ ಕರೆದ ಅದ್ಭುತ ಕಾರ್ಯ ನಡೆಯಿತು.ನಂತರ ಅಧ್ಯಕ್ಷೀಯ ನುಡಿಗಳಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕಿಯವರು ಕಾರ್ಯಕ್ರಮದ ಸಲುವಾಗಿ ತಯಾರಿ ಮಾಡಿಕೊಂಡ ಪರಿಯನ್ನು ವಿವರಿಸಿದರು ಇದೇ ವೇಳೆ ಸೆಲ್ಫಿಜೋನ್ ಗಮನ ಸೆಳೆಯಿತು.
ಸಿಹಿಯಾದ ಹುಗ್ಗಿ ರೊಟ್ಟಿ ಕಾಳು ಪಲ್ಯ ಅನ್ನ ಸಾಂಬಾರ್ ಊಟದ ರುಚಿಯ ಅಭಿಪ್ರಾಯ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿತ್ತು.
ಮೌನುದ್ದೀನ್ ಬೂದಿನಾಳ ಇವರ ಮುಂದಾಳತ್ವದ ಭವ್ಯವಾದ ವೇದಿಕೆ ಮದುವೆಯ ವೇದಿಕೆಯಂತೆ ಕಂಗೊಳಿಸುತ್ತಿತ್ತು.
ಊಟದ ನಂತರ ಸ್ಪರ್ಧೆಗಳು ಜರುಗಿದವು. ಪ್ರೌಢಶಾಲೆಯ ಜೊತೆಗೆ ಚುಕ್ಕನಟ್ಟಿ ಪ್ರಾಥಮಿಕ ಶಾಲೆಯೂ ಸ್ಥಳಾವಕಾಶ ನೀಡಿ ಕೈ ಜೋಡಿಸಿದ್ದು ಕ್ಲೇ ಮಾಡಲಿಂಗ್ ರಂಗೊಲಿ ಕವನವಾಚನ ಪ್ರಬಂಧ ಭಾಷಣ ಜಾನಪದ ಹಾಡು ನೃತ್ಯ ಗಝಲ್ ಕವ್ವಾಲಿ ಚಿತ್ರಕಲೆ ಚರ್ಚಾಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ವಿಜೇತರಾದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮುಸ್ತಾಖ್ ಅಹ್ಮದ್ ರವರು ಅಚ್ಚುಕಟ್ಟಾಗಿ ನಿರೂಪಿಸಿದರು.
ಶ್ರೀಮತಿ ಸುರೇಖಾ ಸಶಿ ರಾಘವೇಂದ್ರ ಸಶಿ ರವರು ವೇದಿಕೆ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಂಡರು. ಪವಿತ್ರಾ ಅ ಶಿ ಹನುಮಂತಿ ಅ ಶಿ ಮತ್ತು ಗೌರಮ್ಮ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಿದರು.ರವೀಂದ್ರಸ್ವಾಮಿ ಸಶಿ ವಂದಿಸಿದರು
ಊರಿನ ಗಣ್ಯರಾದ ಬಸವರಾಜಪ್ಪ ಕುರುಗೋಡು ಮೌನುದ್ದಿನ್ ಬೂದಿನಾಳ ತಿಮ್ಮನಗೌಡ್ರು ವಿರೂಪಾಕ್ಷಪ್ಪ ಮಾಲಿಪಾಟಿಲ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಚಂದಮ್ಮ ಹುಬ್ಬಳ್ಳಿ.ಸದಸ್ಯರಾದ ದಾದಾಪೀರ್.ಶಾಂತಪ್ಪ ಸೋಮನಮರಡಿ. ಗುರುನಾಥ.ಅಮರೇಶ ಬೆಂಚಮಟ್ಟಿ.ನಿಂಗಪ್ಪ ಹುಬ್ಬಳ್ಳಿ.ನಿಂಗಪ್ಪ ಬೆಂಚಮಟ್ಟಿ.ಅಮರೇಶ ಅಂಗಡಿ.ಮೋದಿ ಸಾಬ್. ಮೌನಿ ಹೋಟೆಲ್. ಮೌಲಾ ಬೂದಿನಾಳ.
ಪತ್ರಕರ್ತರಾದ ವಿಘ್ನೇಶ್ ಹಿರೇನಗನೂರು. ಅಮರೇಶ್ ಹಟ್ಟಿ ಮೌನುದ್ದಿನ್ ಹಿರೇಮನಿ. ಕನಕಪ್ಪ.ಶಿವರಾಜ.ಗುರಪ್ಪ.ವಿವಿಧ ಶಾಲೆಯ ಶಿಕ್ಷಕರು ಮುಖ್ಯಗುರುಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮುದ್ದುಮಕ್ಕಳು ಎಲ್ಲರೂ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ