ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹಗಲು ಇರುಳು ಶ್ರಮ : ಈರಮ್ಮ ಹಿರೇಮಠ
ಮಸ್ಕಿ : ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಸಮಸ್ಯೆ ಹಾಗೂ ಕಷ್ಟ ಗಳು ಇದ್ದರೂ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹಗಲು ಇರುಳು ಶ್ರಮ ವಹಿಸುತ್ತದೆ ಎಂದು ಈರಮ್ಮ ದಯಾನಂದ ಹಿರೇಮಠ ರವರು ಉಪನ್ಯಾಸ ನೀಡಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ಜಿಲ್ಲಾ ವಿವಿಧ ಖಾಸಗಿ ಸಂಸ್ಥೆಗಳ ಒಕ್ಕೂಟ (ರಿ) ಹಾಗೂ ಮಸ್ಕಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಸಂಘ (ರಿ) ವತಿಯಿಂದ 3 ನೇ ವರ್ಷದ ಶಿಕ್ಷಕರ ದಿನಾಚರಣೆ ಮತ್ತು ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ
ಖಾಸಗಿ ಶಾಲೆ ಸಂಸ್ಥೆಗಳ ಸೇವೆ ಅಪಾರವಾಗಿದೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಸಮಸ್ಯೆ ಹಾಗೂ ಕಷ್ಟ ಗಳು ಇದ್ದರೂ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಹಗಲು ಇರುಳು ಶ್ರಮ ವಹಿಸುತ್ತದೆ ಎಂದು ಶ್ರೀ ಮತಿ ಈರಮ್ಮ ದಯಾನಂದ ಹಿರೇಮಠ ರವರು ಉಪನ್ಯಾಸ ನೀಡಿದರು.
ನಂತರ ಮಾತನಾಡಿ ಶಿಕ್ಷಕರು ಎಂದರೆ ಶಿಲ್ಪ ಇದ್ದಾಗೆ ಖಾಸಗಿ ಶಾಲೆ ಶಿಕ್ಷಕರು ಮಕ್ಕಳ ಭವಿಷ್ಯವನ್ನು ಬದಲಾಯಿಸುವ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಹೇಳಿದರು.
ಸರಕಾರ ಮಾಡದ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತವೆ ಶಿಕ್ಷಣ ಬದುಕು ಗಟ್ಟಿ ಗೊಳಿಸುತ್ತದೆ.
ಬದುಕನ್ನು ವಿಕಾಸ ಗೋಳಿಸುವ ವಿಧಾನ ಎಂದರೆ ಅದು ಶಿಕ್ಷಣ, ಬದುಕುವ ನಿಜವಾದ ಶಿಕ್ಷಣ ಎಂದು ಮಹಾತ್ಮಸ್ವಾಮಿಗಳು ಸಾಲಿಮಠ ಕಲ್ಯಾಣ ಆಶ್ರಯ ಮುದ್ಗಲ್ ತಿಮ್ಮಾಪುರ ಶ್ರೀಗಳು ಹೇಳಿದರು.
ಈ ವೇಳೆ, ಕೆಲ ಆಯ್ದ ಶಿಕ್ಷಕರಿಗೆ "ಉತ್ತಮ ಶಿಕ್ಷಕ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ವೇಳೆಯಲ್ಲಿ ಗಚ್ಚಿನ ಮಠದ ಶ್ರೀ ಗಳುಸಿದ್ದಬಸವ ಮಹಾಸ್ವಾಮಿಗಳು ಬಳಗಾನೂರ, ಬಸವಪ್ರಭು ಮಹಾ ಸ್ವಾಮಿ ಇರಕಲ್ ಮಠ, ಶಾಸಕ ಹಂಪನಗೌಡ ಬಾದರ್ಲಿ,ನಾಗೇಶ ಜಂಗಮರಹಳ್ಳಿ,
ಶಾಸಕ ಬಸನಗೌಡ ತುರುವಿಹಾಳ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಬಸನಗೌಡ ಪೊಲೀಸ್ ಪಾಟೀಲ,ಹನಮಂತಪ್ಪ ಮುದ್ದಾಪುರ,ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ,ಮಲ್ಕನಗೌಡ ಹಾಲಾಪುರ , ನಿರುಪಾದೆಪ್ಪ ವಕೀಲರು,ಹೇಮಾವತಿ ಅಕ್ಕ,ಮಲ್ಲಿಕಾರ್ಜುನ ಹರವಿ,ಸಿದ್ದರಾಮಯ್ಯ ಗಡ್ಡಿಮಠ, ಶರಣೆ ಗೌಡ,ಸೇರಿದಂತೆ ವಿವಿಧ ಖಾಸಗಿ ಶಾಲೆಯ ಶಿಕ್ಷಕರು ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ