ತಾಲೂಕು ಮಟ್ಟದ ಪ್ರೌಢಶಾಲಾ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ.ಹಿರೇನಗನೂರು ತಂಡಕ್ಕೆ ಭರ್ಜರಿ ಗೆಲುವು.ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಲಿಂಗಸುಗೂರು: ತಾಲೂಕಾ ಮಟ್ಟದ ಪ್ರೌಢಶಾಲಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಪದವಿಪೂರ್ವ ಪ್ರೌಢಶಾಲಾ ವಿಭಾಗ ಲಿಂಗಸುಗೂರುನಲ್ಲಿ ನಡೆಸಲಾಯಿತು. ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಹಿರೇನಗನೂರು ಪ್ರೌಢಶಾಲೆಯ ವಿದ್ಯಾರ್ಥಿನಿಯರು. ಸರ್ಜಾಪೂರ ವಿದ್ಯಾರ್ಥಿನಿಯರ ಮೇಲೆ ವಿಜಯ ಸಾಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ಪ್ರೌಢಶಾಲಾ

ವಿದ್ಯಾರ್ಥಿನಿಯರಾದ ಕು.ಮಹೇಕ್ ಅಬ್ಬಾಸಲಿ, ಕು.ಗೌಸಿಯಾಬೇಗಂ ಸೈಯ್ಯದ್ ಹುಸೇನ್, ಕು.ಎಚ್ ಸಿ.ಕೀರ್ತಿ ಹನುಮಂತˌ ಕು.ಸಿಂಚನ ಚಿನ್ನಪ್ಪ ಕೊಟ್ರಿಕಿˌ ಕು.ಹಸೀನಾಬೇಗಂ ಕಾಸೀಂಸಾಬ್ˌ ಕು.ಕಾವೇರಿ ಕುಪ್ಪಣ್ಣ.

ಈ ವಿದ್ಯಾರ್ಥಿನಿಯರು ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಹಿರೇನಗನೂರು ಪ್ರೌಢಶಾಲೆಯ ಕೀರ್ತಿಯನ್ನು ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ. 

ಈ ಸಂದರ್ಭದಲ್ಲಿ ಮಾನ್ಯ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಚನ್ನಬಸವರಾಜ ಮೇಟಿ ಇವರು.ದೈಹಿಕ ಶಿಕ್ಷಕ ರಾದ ಮುಸ್ತಾಖ್ ಅಹ್ಮದ್ ರವರಿಗೆ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯಗುರುಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಮತ್ತು ಗ್ರಾಮಸ್ಥರು. ದೈಹಿಕ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿನಿಯರಿಗೂ ಅಭಿನಂದನೆಗಳನ್ನು ತಿಳಿಸಿದರು.

"ಹಿರೇನಗನೂರು

ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ತಾಲೂಕ ಮಟ್ಟದ ಪ್ರೌಢಶಾಲಾ ಬಾಲ್ ಬ್ಯಾಡ್ಮಿಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ.ಎಲ್ಲಾ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು.

ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಲೆಂದು ಶುಭ ಹಾರೈಸಿದ---ಶ್ರೀ ಮೌನದ್ದೀನ್ ಬೂದಿಹಾಳ.ಶರಣು ವಿಶ್ವವಚನ ಪೌಂಡೇಶನ್ ಮೈಸೂರು.ರಾಯಚೂರು ತಾಲೂಕ ಗೌರವಾಧ್ಯಕ್ಷರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ