ಮಣ್ಣು ಪರೀಕ್ಷೆ ಆರೋಗ್ಯ ಕಾರ್ಡ್ ವಿತರಣೆ
ಮಸ್ಕಿ : ತಾಲೂಕಿನ ಗುಡದೂರು ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತ ಅಭಿಯಾನದ ಭಾಗವಾಗಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅನ್ನಪೂರ್ಣ ಮಾತನಾಡಿ, ಕೃಷಿ ಉತ್ಪನ್ನದಲ್ಲಿ ಮಣ್ಣು ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ರೈತರು ಮಣ್ಣಿನ ಪರೀಕ್ಷೆ ಕೈಗೊಂಡು, ಮಣ್ಣಿಗೆ ಅವಶ್ಯ ಇರುವ ಗೊಬ್ಬರವನ್ನಷ್ಟೇ ಪೂರೈಸಿದಾಗ ಮಣ್ಣಿನ ಆರೋಗ್ಯ ಸ್ಥಿರವಾಗಿರುತ್ತದೆ. ಅನವಶ್ಯಕ ವೆಚ್ಚವೂ ತಗ್ಗುತ್ತದೆ. ಈ ಹಿನ್ನಲೆಯಲ್ಲಿ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಗುಡದೂರು ಹೋಬಳಿಯ ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ, ಮಣ್ಣಿನ ಪರೀಕ್ಷೆ ಕೈಗೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ ಮಾತನಾಡಿ, ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮ ಯಶಸ್ಸಿಗೆ ಪ್ರತಿಯೊಬ್ಬ ರೈತರು ಕೈಜೋಡಿಸಬೇಕು. ಸ್ವ ಆಸಕ್ತಿಯಿಂದ ಮುಂದೆ ಬಂದು ಮಣ್ಣಿನ ಪರೀಕ್ಷೆ ಮಾಡಿಸಿ, ಕೃಷಿ ಉತ್ಪನ್ನ ಹೆಚ್ಚಳದತ್ತ ಗಮನ ಹರಿಸಿ, ಇಲಾಖೆಯ ಉದ್ದೇಶವನ್ನು ಸಕಾರಗೊಳಿಸಬೇಕು ಎಂದರು.
ಈ ವೇಳೆ ಕೃಷಿ ತಾಂತ್ರಿಕ ವ್ಯವಸ್ಥಾಪಕರಾದ ಲೋಕೇಶ್ವರಿ, ಗ್ರಾಪಂ ಸಿಬ್ಬಂದಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ