ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಲತಾ ಪ್ರಕಾಶ್ ಮಸ್ಕಿ
ಮಸ್ಕಿ : ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆರಂಭ ಮಾಡಿರುವ ನಿರಂತರವಾದ ಸೇವೆ ಯಾವುದೇ ಒಂದು ವಾರವನ್ನೂ ಬಿಡದೆ 168ನೇ ವಾರವನ್ನು ಪೂರೈಸಿದ್ದು ಈ ವಾರದ ಸೇವಕಾರವನ್ನು ಅಭಿನಂದನ ಸ್ಪೂರ್ತಿಧಾಮದ ಆವರಣದಲ್ಲಿ ಸಸಿಗಳನ್ನು ಹಚ್ಚುವ ಮೂಲಕ ಸೇವ ಕಾರ್ಯವನ್ನು ನೆರವೇರಿಸಲಾಯಿತು
ಈ ಸೇವ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಲತಾ ಪ್ರಕಾಶ್ ಮಸ್ಕಿ ಪ್ರತಿ ರವಿವಾರವು ಒಂದಿಲ್ಲ ಒಂದು ವಿಶೇಷವಾದ ಸೇವೆಗಳ ಮೂಲಕ ನಮ್ಮ ಭಾಗದಲ್ಲಿ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇಂತಹ ಸೇವಾ ಸಂಸ್ಥೆಗೆ ನಾವೆಲ್ಲರೂ ಸಹಕಾರವನ್ನು ನೀಡಬೇಕು ಎಂದರು ವಿಶೇಷವಾಗಿ ನಮ್ಮ ಮಸ್ಕಿಯು ಬಯಲು ವಾತಾವರಣವನ್ನು ಹೊಂದಿದ್ದು ಈ ಭಾಗದಲ್ಲಿ ಪರಿಸರ ಸಂರಕ್ಷಣೆ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಗೀತಾ ಶಿವರಾಜ್, ನಿವೇದಿತಾ ಇತ್ಲಿ, ವಿದ್ಯಾವತಿ ವನಕಿ, ನಿಷಾದ ಅಪ್ರೂಜ್, ಚಂದ್ರಕಲಾ ದೇಶಮುಖ್, ಶಾರದಾ ಸಜ್ಜನ್, ಶೃತಿ ಹಂಪರಗುಂದಿ ಇತರರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ