ಸಿಜೆ ಮತ್ತು ಜೆಎಂಎಫ್ ಸಿ, ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು : ಎನ್ ಟಿ ಶ್ರೀನಿವಾಸ್ ಶಾಸಕರಿಗೆ ಮನವಿ
ಕೊಟ್ಟೂರು : ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿ ಪದಾಧಿಕಾರಿಗಳು ಕೊಟ್ಟೂರು ಪಟ್ಟಣದಲ್ಲಿ ಸಿಜೆ ಮತ್ತು ಜೆಎಂಎಫ್ ಸಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು ಸರ್ಕಾರದ ಕಾನೂನು ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಗೆ ಬುಧವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಎಂ.ಗುರುಸಿದ್ದನ ಗೌಡ ಮಾತನಾಡಿ, ಕೊಟ್ಟೂರು ತಾಲೂಕು ಹಿಂದುಳಿದ ಮತ್ತು 60 ಕ್ಕಿಂತ ಹೆಚ್ಚು ಹಳ್ಳಿಗಳ ಒಳಗೊಂಡ ತಾಲೂಕಾಗಿದೆ.
ಕೊಟ್ಟೂರು ತಾಲೂಕು ರಚನೆಯಾಗಿ ಈಗಾಗಲೇ 7 ವರ್ಷಗಳಾಗಿದ್ದು, ಕೊಟ್ಟೂರು ತಾಲೂಕಿನಲ್ಲಿ ಈಗಾಗಲೇ ಸುಮಾರು 2,500 ಪ್ರಕರಣಗಳು ಕೂಡ್ಲಿಗಿ ನ್ಯಾಯಾಲಯದಲ್ಲಿವೆ. ಅಲ್ಲದೆ ಅಂದಾಜು 80 ಕ್ಕೂ ಹೆಚ್ಚು ವಕೀಲರು ಕೊಟ್ಟೂರಿನಲ್ಲಿ ಇದ್ದು, ನಿತ್ಯವು ಕೂಡ್ಲಿಗಿ ನ್ಯಾಯಾಲಯಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆ ಇದೆ. ಅದರ ಜತೆ ಕಕ್ಷಿದಾರು ವೃತಾ ಅಲೆದಾಡುವ ಸ್ಥಿತಿ ಇದೆ. ಈ ಬಗ್ಗೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದೇವೆ. ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ
ನ್ಯಾಯಮೂರ್ತಿಗಳು ಉಚ್ಚ ನ್ಯಾಯಾಲಯ ಬೆಂಗಳೂರು ಇವರಿಗೂ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿ ಒಪ್ಪಿಗೆಯ ಭರವಸೆ ನೀಡಿದ್ದರು.
ಈಗಾಗಲೇ ಕೂಡ್ಲಿಗಿ ನ್ಯಾಯಾಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಸದರಿ ಪ್ರಕರಣಗಳನ್ನು ಇತ್ಯರ್ಥವಾಗದೇ ಬಾಕಿ ಉಳಿಯುತ್ತಿವೆ. ಕೊಟ್ಟೂರು ತಾಲೂಕಿನ ಕಕ್ಷಿದಾರರಿಗೆ ವೇಗವಾಗಿ ವ್ಯಾಜ್ಯಗಳು ಇತ್ಯರ್ಥವಾಗುತ್ತಿಲ್ಲ. ನ್ಯಾಯಾಧೀಶರುಗಳಿಗೆ ಶೀಘ್ರವಾಗಿ ಇತ್ಯರ್ಥ ಮಾಡಲು ಕಾಲವಕಾಶ ಬೇಕಾಗುತ್ತದೆ. ಆದ್ದರಿಂದ ವಕೀಲರುಗಳ ಹಾಗೂ ಕಕ್ಷಿದಾರರು ನಿತ್ಯವು ಅಲೆದಾಟ ತಪ್ಪಿಸಲು ಕೊಟ್ಟೂರು ಪಟ್ಟಣದಲ್ಲಿ ಶೀಘ್ರದಲ್ಲೇ ನ್ಯಾಯಾಲಯ ಸ್ಥಾಪಿಸಲು ತಾವು ಸಂಭಂದಿಸಿದ ಕಾನೂನು ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಈ ಬಗ್ಗೆ ಈಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ
ಜ್ಯೋತಿ ಮೂಲಿಮನಿ ಹಾಗೂ ಆಡಳಿತಾತ್ಮಕ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಬೆಂಗಳೂರು ಅವರಿಗೂ ಮನವಿ ಸಲ್ಲಿಸಿದ್ದು ಒಪ್ಪಿಗೆಯ ಭರವಸೆ ನೀಡಿದ್ದಾರೆ ಎಂದು ಶಾಸಕ ಅವರು ತಿಳಿಸಿದರು. ಎನ್.ಟಿ.ಶ್ರೀನಿವಾಸ್ ಮನವಿ ಸ್ವೀಕಾರ ಮಾಡಿ ಮಾತನಾಡಿ, ಈ ಬೇಡಿಗೆ ಉಪಯುಕ್ತವಾಗಿದ್ದು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವರ ಗಮನಕ್ಕೆ ತಂದು ಪರಿಸ್ಥಿತಿ ವಿವರಿಸಿ ನ್ಯಾಯಾಲಯ ಸ್ಥಾಪನೆಗೆ ಸಹಕಾರ ಕೋರುವೆ ಎಂದು ತಿಳಿಸಿದರು.
ಕೊಟ್ಟೂರು ತಾಲೂಕು ವಕೀಲರ ನ್ಯಾಯಾಲಯ ಹೋರಾಟ ಸಮಿತಿ ತಾಲೂಕು ಉಪಾಧ್ಯಕ್ಷ ಪಿ.ಪ್ರಭುದೇವ, ಕಾರ್ಯದರ್ಶಿ ಶಿವಾನಂದ ಬಾವಿಕಟ್ಟಿ, ವಕೀಲರಾದ ರಮೇಶ್, ನಾಗರಾಜ, ಕರಿಬಸವರಾಜ, ಸಿದ್ದನ ಗೌಡ್ರು ಸೇರಿದಂತೆ ಅನೇಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ