ಪುರಸಭೆಗೆ ತಲೆನೋವು ಆದ ಬಿಡಾಡಿ ದನಗಳು

ಮಸ್ಕಿ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿಡಾಡಿ ದನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಾಹನ ಸವಾರರು ರಸ್ತೆ ಮೇಲೆ ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಡಾಡಿ ದನಗಳನ್ನು ನಿಯಂತ್ರಿಸಲು ಪುರಸಭೆ ಕ್ರಮ `ಕೈಗೊಳ್ಳದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನನಿಬಿಡ ಪ್ರದೇಶವಾದ ಹಳೆಯ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಕನಕವೃತ್ತದವರೆಗಿನ ಹೆದ್ದಾರಿ ಮೇಲೆ 30ಕ್ಕೂ ಹೆಚ್ಚು ದನಗಳು ಸೇರುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಿಡಾಡಿ ದನಗಳನ್ನು ಅವುಗಳನ್ನು ಮಾಲೀಕರಿಗೆ ಒಪ್ಪಿಸಿ ಅಥವಾ ಗೊ ಶಾಲೆ ಗೆ ಸೇರಿಸಿ ಎಂದು ಸ್ಥಳೀಯ ಗೊ ರಕ್ಷಕರು ಪುರಸಭೆ ಅಧಿಕಾರಿ ವರ್ಗದವರಿಗೆ ಒತ್ತಾಯಿಸಿದ್ದಾರೆ.

ರಸ್ತೆ ಮೇಲೆ ಬಿಡಾಡಿ ದನಗಳು ಮಲಗುತ್ತಿದ್ದರಿಂದ ರಾತ್ರಿ ವೇಳೆ ವೇಗವಾಗಿ ಬರುವ ವಾಹನಗಳಿಗೆ ಹಾಯ್ದು ಅನೇಕ ಹಸುಗಳು ಮೃತಪಟ್ಟವೆ.ಅವುಗಳ ಜೀವ ಉಳಿಯಬೇಕದರೆ ಪುರಸಭೆ ಅಥವಾ ಪೊಲೀಸ್ ಇಲಾಖೆ ಅಧಿಕಾರಿಗಳು ಅವುಗಳನ್ನು ಗೋ ಶಾಲೆ ಗೆ ಸೇರಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶುಕ್ರವಾರ ತಡ ರಾತ್ರಿ ಪುರಸಭೆ ಕಾರ್ಯಚರಣೆ ನಡೆಸಿ ಕನಿಷ್ಟ 20 ಹಸುಗಳನ್ನು ಗೋ ಶಾಲೆ ಗೆ ಸ್ಥಳಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಎದು ಏನೇ ಇರಲಿ ಪುರಸಭೆಯ ಜೊತೆಗೆ ಹಸುಗಳ ಮಾಲಿಕರು ಕೊಡ ತಮ್ಮ ಜವಾಬ್ದಾರಿ ಯಿಂದ ಹಸುಗಳನ್ನು ಮನೆಯಲ್ಲಿ ಕಟ್ಟಿ ಹಾಕುವ ಕೆಲಸ ಮಾಡಬೇಕು ಎಂದು ವಾಹನ ಸವಾರರ ಮನವಿ.

 *ಬಾಕ್ಸ್* ಹೇಳಿಕೆ

ರಸ್ತೆ ಮೇಲೆ ಮಲಗಿರುವ ಹಸುಗಳ ಮೇಲೆ ವಾಹನಗಳು ಹರಿದು ಮೃತಪಡುತ್ತಿದ್ದು ಸಾವು ಸಂಭವಿಸುವ ಮುನ್ನ ಪೊಲೀಸ್ ಇಲಾಖೆ ಹಾಗೂ ಪುರಸಭೆ ಅವುಗಳನ್ನು ನಿಯಂತ್ರಿಸುವ ಮೂಲಕ ಪ್ರಾಣಿಗಳ ಜೀವ ಉಳಿಸಿ.ರಾಕೇಶ್ ಪಾಟೀಲ ಗೊ ರಕ್ಷಕರು ಮಸ್ಕಿ,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ