ತಾಲೂಕಿನಾದ್ಯಂತ ಶ್ರದ್ಧಾ, ಭಕ್ತಿಯಿಂದ ಗಣೇಶ ಪ್ರತಿಷ್ಠಾಪನೆ

 

ಮಸ್ಕಿ: ವಿಘ್ನನಿವಾರಕ ಗಣೇಶ ಮೂರ್ತಿಗಳನ್ನು ಶನಿವಾರ ಬೆಳಿಗ್ಗೆ ತಾಲೂಕಿನ ವಿವಿಧೆಡೆ ಶ್ರದ್ಧಾ, ಭಕ್ತಿಯಿಂದ ಪ್ರತಿಷ್ಠಾಪನೆ ಮಾಡಲಾಯಿತು.

ಗಚ್ಚಿನಮಠದಲ್ಲಿ ಹಿಂದೂ ಸಾಮರಸ್ಯ ವೇದಿಕೆಯಿಂದ ಪರಿಸರ ಸ್ನೇಹಿ ಮಣ್ಣಿನಲ್ಲಿ ಮಾಡಿದ ಗಣೇಶನ ಪ್ರತಿಷ್ಠಾಪನೆ ಕಾರ್ಯಕ್ರಮ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು.

ಹಳೇ ಬಸ್ ನಿಲ್ದಾಣ ಹತ್ತಿರ ವರಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ನಡೆದ ಗಣೇಶ ಪ್ರತಿಷ್ಠಾಪನೆಯಲ್ಲಿ

ದರ್ಶನಕ್ಕೆ ಬಂದ ಭಕ್ತರಿಗೆ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಯೊಬ್ಬರಿಗೂ ಗಿಡ ಕೊಡಲಾಯಿತು ಕಾರ್ಯಕ್ರಮ ದಲ್ಲಿ

ಸ್ಥಳೀಯ ನಿವಾಸಿಗಳು ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಸಂತೆ ಬಜಾರ್, ತೇರಿನ ಮನೆ ಮುಂದೆ, ಎಲಿಗಾರ ಓಣಿಗಳಲ್ಲಿ ಗಣೇಶನ ಪ್ರತಿಷ್ಠಾಪನೆಯು ಅದ್ದೂರಿಯಾಗಿ ನಡೆಯಿತು.












ವಿವಿಧೆಡೆ, ಮೆದಿಕಿನಾಳ ಗ್ರಾಮ, ಸೋಮನಾಥ ನಗರ, ವಾಲ್ಮೀಕಿ ನಗರ, ಗಾಂದಿನಗರ, ವಾಲ್ಮೀಕಿ ಭವವ, ಮೋಚಿ ಓಣಿ, ಅಂಬೇಡ್ಕ‌ರ್ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಗಣೇಶ ಪ್ರತಿಷ್ಠಾಪನೆ ವೈಭವದಿಂದ ಜರುಗಿತು.

ಶಾಸಕ ಆರ್.ಬಸನಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ,ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ ಸೇರಿದಂತೆ ಅನೇಕ ಮುಖಂಡರು ವಿವಿಧ ಸಾರ್ವಜನಿಕ ಗಣೇಶನ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಶನಿವಾರ ದಿಂದ ಐದು ದಿನಗಳವರೆಗೆ ಸರದಿ ಮೇಲೆ ಗಣೇಶನ ವಿಸರ್ಜನೆಯನ್ನು ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆಸಲಾಗುತ್ತದೆ.

'ಕಾಲುವೆ ಬಳಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ'.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ