ಆರ್ಥಿಕ ಸದೃಢತೆಗೆ ಸ್ವ ಸಹಾಯ ಗುಂಪುಗಳು ಅತ್ಯಗತ್ಯ ಮಸ್ಕಿ ತಾ.ಪಂ ಇಒ ಅಮರೇಶ್‌ ಸಲಹೆ

ಮಸ್ಕಿ : ಮಹಿಳೆಯರ ಆರ್ಥಿಕ ಸದೃಢತೆಗೆ ಸ್ವ ಸಹಾಯ ಗುಂಪುಗಳು ಪೂರಕವಾಗಿದ್ದು, ಸಕ್ರಿಯವಾಗಿ ತೊಡಗಬೇಕು ಎಂದು ಮಸ್ಕಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್‌ ಅವರು ಸಲಹೆ ನೀಡಿದರು.

ತಾಲೂಕಿನ ಕನ್ನಾಳ ಗ್ರಾ.ಪಂಯಲ್ಲಿ ಶುಕ್ರವಾರ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನದಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಆಶ್ರಯದಲ್ಲಿ ಸ್ಥಳೀಯ ಶ್ರೀ ಆಂಜನೇಯ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ್ದ ಸ್ವತ್ತು ನಿಧಿಯ ಚೆಕ್‌ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಸ್ವ ಸಹಾಯ ಗುಂಪುಗಳಿಗೆ ಸರ್ಕಾರ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಆಸಕ್ತ ಮಹಿಳೆಯರ ವಿಶೇಷ ಶ್ರಮದಿಂದ ಸರ್ಕಾರದಿಂದ ಸಾಲ ಪಡೆದು ಅನೇಕ ಮಹಿಳೆಯರು ಸ್ವ ಉದ್ಯೋಗ ಆರಂಭಿಸುವುದರ ಜೊತೆಗೆ 5-6 ಮಹಿಳೆಯರಿಗೆ ಕೆಲಸ ಒದಗಿಸಿದ್ದಾರೆ. ಬಲ್ಬ್‌ ತಯಾರಿಕೆ, ರೊಟ್ಟಿ ಮತ್ತು ಉಪ್ಪಿನ ಕಾಯಿ ತಯಾರಿಕೆ, ಅಗರಬತ್ತಿ, ಊದು ಬತ್ತಿ, ಕಾಯಿ ಪಲ್ಯ ಮಾರಾಟ ಹೀಗೆ ದಿನ ನಿತ್ಯ ಆದಾಯ ತಂದು ಕೊಡುವ ಉದ್ಯೋಗ ಕೈಗೊಳ್ಳಬಹುದಾಗಿದೆ. ಆಸಕ್ತ ಮಹಿಳೆಯರು ಮುಂದೆ ಬಂದರೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕುಟುಂಬ ನಿರ್ವಹಣೆ ಜೊತೆಗೆ ಹಣಕಾಸು ನಿರ್ವಹಣೆಯಲ್ಲಿ ತೊಡಗಿರುವ ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅವರ ಚಟುವಟಿಕೆಗಳ ಮೇಲೆ ಸದಾ ನಿಗಾ ವಹಿಸಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕನ್ನಾಳ ಗ್ರಾಪಂಗೆ ಭೇಟಿ ನೀಡಿ ನರೇಗಾ ಯೋಜನೆಯ ಕಡತಗಳನ್ನು ಪರಿಶೀಲಿಸಿದರು. ಗ್ರಾಪಂ ಸಿಬ್ಬಂದಿ ಮತ್ತು ನೀರು ಗಂಟಿಗಳ ಜೊತೆ ಸಭೆ ನಡೆಸಿ, ಎಲ್ಲಾ ಹಳ್ಳಿಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲಾ ಹಳ್ಳಿಗಳಲ್ಲಿ ಫಾಗಿಂಗ್‌ ಮಾಡಬೇಕು ಎಂದು ತಿಳಿಸಿದರು.

ತದ ನಂತರ ನಿರ್ಮಾಣ ಹಂತದಲ್ಲಿರುವ ಗ್ರಾಮ ಪಂಚಾಯತಿ ಕಟ್ಟಡ, ಸರ್ಕಾರಿ ಶಾಲೆಯಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿ ಪರಿಶೀಲಿಸಿದರು. ತದ ನಂತರ ಗ್ರಾಪಂಯ ಗ್ರಂಥಾಲಯ ಪರಿಶೀಲಿಸಿ, ಸದರಿ ಗ್ರಂಥಾಲಯವನ್ನು ಮಾದರಿ ಗ್ರಂಥಾಲಯವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷರಾದ ಸರಸ್ವತಿ, ಗ್ರಾಪಂ ಸದಸ್ಯರಾದ ಸಂಗಣ್ಣ ಕಲ್ಲೂರು, ಗ್ರಾಪಂ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸುನಂದಾ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ, ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮದ ಸಂಯೋಜಕರಾದ ಅಶೋಕ್‌ ಮಡ್ಡಿಕರ್‌, ತಾಂತ್ರಿಕ ಸಹಾಯಕ ಅಭಿಯಂತರರಾದ ಪಂಪಣ್ಣ, ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕರಾದ ಮೌನೇಶ್‌, ವಲಯ ವ್ಯವಸ್ಥಾಪಕರಾದ ಪ್ರಕಾಶ್‌, ಎಂಬಿಕೆ ಅಶ್ವಿನಿ, ಎಲ್‌ಸಿಆರ್‌ಪಿ ಲಲಿತಾ, ಕೃಷಿಸಖಿ ಕಂಟೆಮ್ಮ, ಪಶು ಸಖಿ ಸುಮಂಗಲಾ ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ