ಆನ್ವರಿ ವಲಯದ ಪೋಷಣ್ ಮಾಸಚರಣೆ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ.

 

ಹಟ್ಟಿ ಚಿನ್ನದ ಗಣಿ :ಪಟ್ಟಣದ ಸಮೀಪದ ಆನ್ವರಿ ಗ್ರಾಮದಲ್ಲಿ.24.09.2024 ರಂದು. ಆನ್ವರಿ ವಲಯದಲ್ಲಿ ಒಟ್ಟು 20 ಅಂಗನವಾಡಿ ಕೇಂದ್ರಗಳಿದ್ದು.

ಇಂದು ಆನ್ವರಿ ಗ್ರಾಮದ 6ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಚರಣೆ ಕಾರ್ಯಕ್ರಮನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. ವೈದ್ಯಾಧಿಕಾರಿಗಳು.

ಹಾಗೂ ಸಿಬ್ಬಂದಿಗಳು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ಚಾವಾರಕಿಯರು.ವಲಯ ಮೇಲ್ಚಾರಕಿ. ಸ್ತ್ರೀ ಶಕ್ತಿ ಗುಂಪಿನ ಪ್ರತಿನಿಧಿ ಸದಸ್ಯರು ಸೇರಿ.ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಮೇಲ್ಚರಕಿ ಗುರು ಬಸಮ್ಮ ಇವರು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ರಕ್ತ ಹೀನತೆ ಬಗ್ಗೆ ಮಾತನಾಡಿ. ಉತ್ತಮವಾದ ಆಹಾರ ಸೇವನೆ ಮಾಡಬೇಕು. ಹಾಗೂ ಏಕದಳ ಮತ್ತು ದ್ವಿದಳ ಕಾಳುಗಳನ್ನು ಸಸಿ ಬಂದ ನಂತರ ತಿನ್ನಬೇಕು.ಹಾಗೂ ಎಲ್ಲಾ ತರಹದ ತರಕಾರಿ ಹಾಗೂ ಎಲ್ಲಾ ತರದ ಹಣ್ಣುಗಳನ್ನು ಸೇವನೆ ಮಾಡಬೇಕು. ವಿಟಮಿನ್ ಎ ಬಿ ಸಿ ಡಿ ಮಿನರಲ್ಸ್ ಕಬ್ಬಿಣಾಂಶ ಹೆಚ್ಚಾಗಿ ದೊರೆಯುತ್ತದೆ. ಆರೋಗ್ಯವಂತ ಮಗು ದೇಶದ ಸಂಪತ್ತು ಹಾಗೂ ತಾಯಿ ಮತ್ತು ಮಗುವು ಉತ್ತಮವಾಗಿರಬೇಕು. ಅದೇ ರೀತಿ ಗರ್ಭಿಣಿಯರು ಹಾಗೂ ಬಾಣಂತಿಯರು ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆಯು ದಿನನಿತ್ಯ ಅಂಗನವಾಡಿ ಕೇಂದ್ರಕ್ಕೆ ಬಂದು ಊಟ ಮಾಡಬೇಕು.ಎಂದು ತಿಳಿಸಿದರು. 

ವೈದ್ಯಾಧಿಕಾರಿಗಳಾದ ಕುಮಾರಿ ಡಾಕ್ಟರ್ ಸುರೇಖಾ ಇವರು ಗರ್ಭಿಣಿ ಮತ್ತು ಬಾಣಂತಿಯ ಸ್ತ್ರೀಯರಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಾಲಕಾಲಕ್ಕೆ ಲಸಿಕೆ ಹಾಕಿಸಿಕೊಳ್ಳಬೇಕು. ಎಚ್ ಬಿ ತಪಸಣಿ.ಬಿಪಿ ಮತ್ತು ತೂಕ ಮಾಡಿಸಿಕೊಂಡು. ತಾಯಿ ಕಾರ್ಡ್ ಜೊತೆಗೆ ಮಾತೃ ವಂದನ ಅರ್ಜಿ ಹಾಕಲು ಕೊಡಬೇಕು.ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಿ ಎಂದು ಮಾತನಾಡಿದರು.

ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರ ಸಮ್ಮುಖದಲ್ಲಿ ಒಂದನೆಯ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. 

ವಲಯದ ಮೇಲ್ಚರಕಿ ಶ್ರೀಮತಿ ಈರಮ್ಮ ಮಾತನಾಡಿ.ನಮ್ಮ ಇಲಾಖೆಯಿಂದ ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸುವರ ಜೊತೆಗೆ ಮಕ್ಕಳಿಗೆ ತೂಕ ಮತ್ತು ಎತ್ತರ ಹಾಗೂ ವಯಸ್ಸಿಗೆ ತಕ್ಕಂತೆ ತೂಕ.ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು. ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವೆಂಕೋಬ. ವೈದ್ಯಧಿಕಾರಿಗಳಾದ ಡಾಕ್ಟರ್ ಸುರೇಖಾ. ಸಿಬ್ಬಂದಿಗಳಾದ ಮಂಜುನಾಥ. ಪ್ರತಾಪ್.ರೇಣುಕಾ. 

ಯಲ್ಲಮ್ಮ.ಹಿರಿಯ ಮೇಲ್ಚರಕಿ ಗುರು ಬಸಮ್ಮ. ವಲಯದ ಮೇಲ್ಚರಕಿ ಶ್ರೀಮತಿ ಈರಮ್ಮ ಎಚ್.ಸ್ತ್ರೀಶಕ್ತಿ ಗುಂಪಿನ ಪ್ರತಿನಿಧಿಗಳು. ತಾಯಂದಿರು. ಗರ್ಭಿಣಿಯಾರು.ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ