ಒಳಮೀಸಲಾತಿ ಹೋರಾಟ ಯಶಸ್ವಿ
ಮಸ್ಕಿ : ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಮಸ್ಕಿ ತಾಲ್ಲೂಕ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ರಂದು ಬೃಹತ್ ರೋಖೋ ಹಾಗೂ ಬಹಿರಂಗ ಸಭೆ ಅದ್ದೂರಿ ಯಾಗಿ ಜರುಗಿತು.
ಗಾಂಧೀ ನಗರದ ಅಂಬೇಡ್ಕರ್ ಮತ್ತು ಗಾಂಧಿಜೀ ಅವರ ಪ್ರತಿಮೆಗೆ ಮಾಲಾ ಅರ್ಪಣೆ ಮಾಡಿ ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ಅವರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು.
ನಂತರ ಹಾಡುಗಳು ಹಾಡುತ್ತಾ ಹೋರಾಟದ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದ ಹೋರಾಟ ಗಾರರು ಅಶೋಕ ಸರ್ಕಲ್ ನಿಂದ,ಖಲೀಲಿ ವೃತ್ತ, ದೈವದ ಕಟ್ಟಿ,ಕನಕ ವೃತ್ತ ಮೂಲಕ ಭ್ರಮರಾಂಬ ದೇವಸ್ಥಾನಕ್ಕೆ ಬಂದು ತಲುಪಿತು.
ನಂತರ ನಡೆದ ಬಹಿರಂಗ ಸಭೆಯ ಸ್ವಾರ್ಥವಿಲ್ಲದ ಸಿ.ಎಸ್.ಪಾರ್ಥಸಾರಥಿ ಅವರ ವೇದಿಕೆ ಸಮಾವೇಶದಲ್ಲಿ ಡಾ.ಭಾಸ್ಕರ್ ಪ್ರಸಾದ್ ಅವರು ಮಾತನಾಡಿ ಒಳ ಮೀಸಲಾತಿ ಜಾರಿಯಾಗಲು ತಡೆದಿದ್ದೆ ಹೊಲೆಯ ಮಾದಿಗ ಸಮಾಜದ ರಾಜಕಾರಣಿಗಳು
ನಮ್ಮ ಬೆನ್ನಿಗೆ ಚೂರಿ ಹಾಕಿ ಚುಚ್ಚುತಿರುವುದೇ ನಮ್ಮ ಅಣ್ಣ ತಮ್ಮಂದಿರು ನಾವು ಸರ್ಕಾರಕ್ಕೆ ಕೇಳುತ್ತಿದ್ದೇವೆ ಸಿದ್ದರಾಮಯ್ಯನವರಿಗೆ ಅಲ್ಲ ನಮಗೆ ಕೊಡಬೇಕು ಆಗಿರುವುದನ್ನು ಕೊಡಿ ವಚನ ಭ್ರಷ್ಟರಾಗಬೇಡಿ ಸುಪ್ರೀಂ ಕೋರ್ಟ್ ನ ಜಡ್ಜ್ಮೆಂಟ್ ಓದಲು ನಿಮಗೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರೇ ಅಕ್ಟೋಬರ್ ಎರಡರ ಒಳಗೆ ಒಳ ಮೀಸಲಾತಿ ಜಾರಿಗೆ ಮಾಡದಿದ್ದರೆ ರಾಜ್ಯದ ಯಾವುದೇ ಮೂಲೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಬಂದರೆ ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಹೋರಾಟಕ್ಕೆ, ಒಳ ಮೀಸಲಾತಿಯ ಐಕ್ಯ ಹೋರಾಟ ಸಮಿತಿ ,ಜಿಲ್ಲಾ ,ತಾಲೂಕಿನಾದ್ಯಂತ ಒಳ ಮೀಸಲಾತಿಗೆ ಒಳಪಟ್ಟವು ಸಮಯದ ಪ್ರಮುಖ ಮುಖಂಡರು ದಲಿತ ಸಾಹಿತ್ಯ ಗಳು, ದಲಿತ ಚಿಂತಕರು, ಹೋರಾಟಗಾರರು, ಹಾಗೂ ಸಾವಿರಾರು ಜನರು ಪಾಲ್ಗೊಳ್ಳುವ ಮೂಲಕ ಒಳ ಮೀಸಲಾತಿ ಹೋರಾಟದ ಯಶಸ್ಸಿಗೆ ಮಸ್ಕಿ ಸಾಕ್ಷಿಯಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ