ದೇಶೀಯ ಕ್ರೀಡೆ ಉಳಿಸಿ ಬೆಳೆಸಿ : ವೀರೇಶ ಸೌದ್ರಿ

ಮಸ್ಕಿ : ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮಸ್ಕಿ ಮೈದಾನದಲ್ಲಿ ಆಯೋಜಿಸಲಾಗಿದ್ದ 

ಮಸ್ಕಿ ತಾಲ್ಲೂಕು ಖಾಸಗಿ ಕಾಲೇಜು ಗಳ ಪ್ರಾಚಾರ್ಯರ ಸಂಘ (ರಿ) ವೀರ ರಾಣಿ ಕಿತ್ತೂರು ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮಸ್ಕಿ ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ಮಸ್ಕಿ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟಗಳ ಉದ್ಘಾಟನೆ ಮಾಡಿದ ವೀರೇಶ್ ಸೌದ್ರಿ ಪತ್ರಕರ್ತರು ಮಸ್ಕಿ ಅವರು ನಂತರ ಮಾತನಾಡಿನಮ್ಮ ದೇಶದಲ್ಲಿ ವಿದೇಶ ಕ್ರೀಡೆಯಾದ ಕ್ರಿಕೆಟ್ ಗೆ ಸಿಕ್ಕಿರುವ ಮಾನ್ಯತೆ ದೇಶಿಯ ಕ್ರೀಡೆಗೆ ಸಿಗುದಿರುವುದು ಬೇಸರ ಸಂಗತಿ. ಗ್ರಾಮೀಣ ಪ್ರತಿಭೆಗಳನ್ನು ಹೊರತರುವಂತಹ ಇಂತಹ ಕ್ರೀಡಾಕೂಟದಲ್ಲಿ ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಈ ಸಂದರ್ಭದಲ್ಲಿ,ಪುರಸಭೆ ಮುಖ್ಯ ಅಧಿಕಾರಿಗಳಾದ ನರಸರಡ್ಡಿ,ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಪುರಸಭೆ ಸದಸ್ಯ ಭರತ ಕುಮಾರ,ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಂಘದ ತಾಲ್ಲೂಕು ಅಧ್ಯಕ್ಷರಾದ ನಾಗೇಶ್ ಜಂಗಮರಹಳ್ಳಿ, ಪಂಪಾಪತಿ ಗುತ್ತಿಗೆದಾರ,ಸರಕಾರಿ ಬಾಲಕರ ಪಿಯು ಕಾಲೇಜ್ ಪ್ರಾಂಶುಪಾಲರಾದ ಮಾನಪ್ಪ, 

ಶಿವಪುತ್ರಪ್ಪ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಲಿಂಗಸಗೂರು, ಸರಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾದ ಬಸಪ್ಪ ತನಿಖೆದಾರ, ಸರಕಾರಿ

ಪಿಯು ಕಾಲೇಜ್ ಪ್ರಾಂಶುಪಾಲರಾದ ರಂಗಪ್ಪ, ಚನ್ನಬಸವರಾಜ ಮೇಟಿ, ಅಮರೇಶ್ ನಾಯಕ ಹಿರೇ ಕಡಬೂರು,ರುದ್ರಯ್ಯ ಸ್ವಾಮಿ ಬಳಗಾನೂರ, ಸೇರಿದಂತೆ ಮಸ್ಕಿ ತಾಲ್ಲೂಕು ದೈಹಿಕ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ