ರಾಷ್ಟ್ರ ನಿರ್ಮಾಣದಲ್ಲಿ ‌ಶಿಕ್ಷಕರ ಪಾತ್ರ ಮುಖ್ಯ : ಕಳಕಪ್ಪ ಹಾದಿಮನಿ

 

ಮಸ್ಕಿ: ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ದೇಶದ ಅಭ್ಯುದಯಕ್ಕೆ ಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬುದ್ದಿನ್ನಿ ಸರಕಾರಿ ಪ್ರೌಡಶಾಲೆಯ ಮುಖ್ಯ ಗುರುಗಳಾದ ಕಳಕಪ್ಪ ಹಾದಿಮನಿ ಹೇಳಿದರು.                                                                                       ಸ್ಥಳೀಯ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಸ್ಕಾರಯುತ ಶಿಕ್ಷಣ ಪ್ರಮುಖವಾದದ್ದು ವಿದ್ಯಾರ್ಥಿಗಳು ಎಲ್ಲಾ ರೀತಿಯ ಕಲೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೆಂದು ಹಾರೈಸಿದರು.                                                                                                                                ನಂತರ ಬಳಗಾನೂರಿನ ಅರುಣೋದಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಂಪಾಪತಿ ಗುತ್ತೆದಾರ ಮಾತನಾಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಉತ್ತಮವಾದಾಗ ಮಾತ್ರ ಯಶಸ್ಸು ಸಾಧ್ಯ. ಪ್ರೀತಿ ವಿಶ್ವಾಸಗಳೊಂದಿಗೆ ಮಾಡುವ ಪಾಠಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯುತ್ತವೆ. ಹಾಗೂ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡುವ ಮೂಲಕ ಗುರಿ ತಲುಪುವದರೊಂದಿಗೆ ಪಾಲಕರು,ಉಪನ್ಯಾಸಕರ ಮತ್ತು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮಣ ಕರ್ಲಿ ಅವರು ತಪ್ಪು ತಿದ್ದಿ ಜೀವನಪೂರ್ತಿ ವಿದ್ಯಾರ್ಥಿಗಳ ಏಳಿಗೆಗಾಗಿ ಬದುಕುವವರು ಶಿಕ್ಷಕರು. ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ನೈತಿಕತೆ ಉಳಿಸಿಕೊಂಡು ಅದರ ಘನತೆ ಹೆಚ್ಚಿಸುವುದು ಕರ್ತವ್ಯವಾಗಬೇಕು, ಅಧ್ಯಯನಶೀಲರಾಗಬೇಕಾದದ್ದು ಇಂದಿನದಿನಮಾನಗಳಲ್ಲಿ ಅಗತ್ಯ ಎಂದು ಹೇಳಿದರು. ‌‌‌‌ 

ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಹುಸೇನಬಾಷಾ, ಶರಣಬಸವ ಗೋನಾಳ, ತಬುಸುಮ್ ವಿದ್ಯಾರ್ಥಿಗಳಾದ ಹನುಮಂತಿ,ಬಸಲಿಂಗಮ್ಮ,ಮಾನಮ್ಮ ,ತಾಯಮ್ಮ ಮತ್ತು ಅಂಬಿಕಾ ಅನಿಸಿಕೆ ವ್ಯಕ್ತಪಡಿಸಿದರು, ಕಾಲೇಜಿನ ಕಾರ್ಯದರ್ಶಿ ಪಿ.ರಾಮು ಉಪನ್ಯಾಸಕಿಯರಾದ‌ ಬನಶ್ರೀ ಮತ್ತು ಪವಿತ್ರ ವೇದಿಕೆಯ ಮೇಲಿದ್ದರು. ದ್ಯಾರ್ಥಿನಿ ದುರುಗಮ್ಮ ನಿರೂಪಿಸಿದರೆ, ಭಾಗೀರಥಿ ಸ್ವಾಗತಿಸಿದರು, ಬಸವರಾಜ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ