"ಕುಟುಂಬದ ವಂಶವೃಕ್ಷಗಳ ಪಟ್ಟಿಯನ್ನು ಪಟಪಟಾಂತ ಹೇಳುವ ಹೆಳವರು"

ಕೊಟ್ಟೂರು: ಇವರನ್ನು ನೋಡಿದ ತಕ್ಷಣವೆ ಇವರು ಹೆಳವರು ಎಂದು ಗುರುತಿಸ ಬಹುದಾದಷ್ಟು ಚಿರಪರಿಚಿತ ಲಕ್ಷಣ ಹೊಂದಿದ ವ್ಯಕ್ತಿಗಳೇ ಹೆಳವರು.ಬಗಲಿಗೆ ದೊಡ್ಡದಾದ ಕೆಂಬಣ್ಣದ ಶಾಲು, ಜೋಳಿಗೆ’ ತಲೆಗೆ ರುಂಬಾಲು ಬಿಳಿಯ ಧೋತರ, ಉದ್ದದ ನಿಲುವಂಗಿ, ಬಗಲಿನಲ್ಲಿ ಹೊತ್ತಿಗೆ ಹಿಡಿದ, ವಿಶಿಷ್ಟ ಲಕ್ಷಣ ಹೊಂದಿದವರು ಹೆಳವರು. ಇವರದು ಉದ್ದೋಗವೆಂದರೆ ಉದ್ಯೋಗವಲ್ಲ, ಸೇವೆ ಅಂದರೆ ಸೇವೆಯೂ ಅಲ್ಲ, ಇದು ಧರ್ಮವೂ ಹೌದು ಕರ್ಮವು ಹೌದು ಅನ್ನುವ ಅನಿವಾರ್ಯ ಕಾಯಕವಾಗಿದೆ. ಇವರಿಂದ ನಮಗೆ ಗೊತ್ತಿಲ್ಲದ ಎಷ್ಟೋ ಐತಿಹಾಸಿಕ ಕೌಟುಂಬಿಕ ಸತ್ಯಗಳು ಬಯಲಾಗಬಹುದು.

ನಮಗೆ ನಮ್ಮ ಕುಟುಂಬದ ಎಷ್ಟು ತಲೆಮಾರುಗಳ ಬಗ್ಗೆ ಗೊತ್ತು.ಅಜ್ಜ, ಮುತ್ತಜ್ಜ, ಮುಂದೆ ಕೇಳಿದರೆ ನಮಗೆ ಗೊತ್ತಿರುವದಿಲ್ಲ. ಆದರೆ ಈ ಹೆಳವರಲ್ಲಿ ನಮ್ಮ ಮನೆತನದ 10-11 ತಲೆಮಾರಿನ ವಂಶಾವಳಿಯ ಮಾಹಿತಿ, ಹೊತ್ತಿಗೆಯಲ್ಲಿ ದೊರೆಯುತ್ತದೆ.ಈ ಹೊತ್ತಿಗೆ ಹಿಡಿದು ಊರೂರು ಅಲೆಯುತ್ತಾ “ಒಂದ ಆಕಳಾ ಹೊಡಿಯ ನನ್ನವ್ವ, ನಿನ ಒಂದ ಸೀರಿ ಕೊಡಾ ತಾಯವ್ವ, ನಾಕು ಸೇರು ಜ್ವಾಳ ಹಾಕ ನಮ್ಮವ್ವ” ಎಂದು ಕೇಳುತ್ತಾ ಊರೂರು ಅಲೆಯುತ್ತಾ ಜೀವನ ನಡೆಸುವ

ಕಾಣಿಕೆ ಪಡೆಯುವಿ ಹಾಡು :“ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಲಿ, ಮನೆಯ ಸಿರಿಸಂಪತ್ತ ಬೆಳೆಯಲಿ, ಯವ್ವಾ, ನೀನು ಕೊಡುವ ಬಗಸಿ ಜೋಳ ಬ್ಯಾಡ. ಕಟ್ಟಿಮ್ಯಾಗಿನ ಜೋಳದ ಚೀಲ ಬಿಚ್ಚಿ ಜೋಳಿಗೆ ತುಂಬಾ ಕೊಡು. ಹಕ್ಕ್ಕಾಗಿನ ಆಕಳ ಮತ್ತು ಕರು ಕೊಡು, ಎಂದು ಹಾಡುತ್ತಾ, ಕಾಡುತ್ತಾ ‘ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿಸಿ ಕಾಣಿಕೆ ಪಡೆಯುವವರೆ ಹೆಳವರು.

ಆಸ್ತಿಯಂತೆ ಕುಟುಂಬಗಳ ಹಂಚಿಕೆ ಮತ್ತು ವಿವರ: 

ತಲೆತಲಾಂತರದಿಂದ ಬಂದಿರುವ ಹೆಳವರ ಕಾಯಕ ಮಹತ್ವದ್ದು. ಹೇಗೆ ನೀವು ನಿಮ್ಮ ಕುಟುಂಬಗಳನ್ನು ಗುರುತ್ತೀರಿ ಎಂದು ವಿಚಾರಿಸಲಾಗಿ ‘ಆಸ್ತಿಗಳ ಹಾಗೆ ನಾವು ನಮ್ಮ ವಂಶಜರಲ್ಲಿ ಕುಟುಂಬಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾರೆ.

ನಮ್ಮ ಹಿರಿಯರು ಕಂಚಿನ ಪತ್ರದಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ‘ವಿವಿಧ ಊರುಗಳಲ್ಲಿನ ವಿವಿಧ ಕುಟುಂಬಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಗೊಂದಲವಾಗುವುದಿಲ್ಲ. ಅಲ್ಲದೆ, ಹಂಚಿಕೆಯಾದವರು, ಅವರವರ ಕುಟುಂಬದ ಮಾಹಿತಿ ಹಾಗೂ ದಾಖಲೆ ಮಾಡಿಕೊಳ್ಳುತ್ತಾರೆ.ಒಂದು ವೇಳೆ ಹಂಚಿಕೆಯಾದ ಒಂದು ಕುಟುಂಬ ಬೇರೆ ಊರಲ್ಲಿ ನೆಲೆಸಿದ್ದರೆ ಅಲ್ಲಿಗೆ ಹೋಗಿ ದಾಖಲೀಕರಣ ಹಾಗೂ ಕಾಣಿಕೆ ಸ್ವೀಕರಿಸಲಾಗುತ್ತದೆ.ಎಂದು ತಿಳಿಸುತ್ತಾರೆ.

ಹೆಳವರು, ಬದುಕು ಸಾಗಿಸಲು ಮಾತ್ರವಲ್ಲದೆ, ದಾಖಲೆಗಳ ಸಂರಕ್ಷಣೆ ಮಾಡುವುದಕ್ಕಾಗಿ ಇವರ ಕಾಯಕ ಮಹತ್ವದ್ದು, ಅಲೆಮಾರಿಗಳಾಗಿರುವ ಹೆಳವರು ಕೆಲವೇ ಕ್ಷಣಗಳಲ್ಲಿ ನೂರಾರು ವರ್ಷಗಳ ಹಿಂದಿನ ನಮ್ಮ ವಂಶಜರ ಬಗ್ಗೆ ತಿಳಿಸಿ ಕೊಡುತ್ತಾರೆ. ಹೆಳವರು ಕುಟುಂಬದ ವಂಶವೃಕ್ಷಕ್ಕಾಗಿ ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.

ಹೆಳವರು ನಿರಂತರವಾಗಿ ಮಾತನಾಡುವ, ಹಾಡುವ ಶೈಲಿ ವಿಶಿಷ್ಟವಾದದ್ದು, ಯಾವುದೇ ಹೆಚ್ಚಿನ ಶಿಕ್ಷಣವಿಲ್ಲದ ಇವರು, ನಿರಂತರವಾಗಿ ಮಾತನಾಡುವದನ್ನು ಕಂಡಾಗ ಎಂತಹ ವಿದ್ಯಾವಂತನೂ ಮ0ತ್ರ ಮಗ್ದನಾಗುತ್ತಾನೆ. ನಮ್ಮ ಪೂರ್ವಜರ ಮಾಹಿತಿ ಪಡೆಯಬೇಕೆಂದರೆ ಇಂದಿನ ಆಧುನಿಕ ಕಾಲದಲ್ಲಿ ಎಲ್ಲಿಯೂ ಸಾಧ್ಯವಿಲ್ಲ. ಆದರೆ ಅದರ ಬಗ್ಗೆ ತಿಳಿಯಬೇಕಾದರೆ ಈ ಹೆಳವರಲ್ಲದೆ ಬೇರೆ ಎಲ್ಲಿಯೂ ಸಾಧ್ಯವಿಲ್ಲ ಅಲ್ಲವೆ?

ಕೊಟ್ -1

ಕಾಲಕಾಲಕ್ಕೆ ಆಗುವ ವಂಶಾಭಿವೃದ್ಧಿ ಗಳನ್ನು ದಾಖಲಿಸುತ್ತಾರೆ.ಅಲ್ಲದೆ ಆ ಕುಟುಂಬದಲ್ಲಿ ಯಾರಾದರೂ ನಿಧನರಾದರೆ, ಅಂಥವರ ಹೆಸರನ್ನು ಕಂಚಿನ ಪತ್ರದಲ್ಲಿ ನಮೂದಿಸುತ್ತಾರೆ. ಮನೆಗೆ ಬಂದ ಸೊಸೆಯಂದಿರ ಮಾಹಿತಿ. ಮಕ್ಕಳು ಜನಿಸಿದ ಮಾಹಿತಿಗಳನ್ನು ಕಲೆಹಾಕುತ್ತಾರೆ. ಅಲ್ಲದೆ, ಹಿಂದಿನ ವಂಶವೃಕ್ಷ ಓದಿ, ಕುಟುಂಬವು ನೀಡುವ ದಾನ ಸ್ವೀಕಾರ ಮಾಡುತ್ತಾರೆ.ಎಂದು ಮಲ್ಲಪ್ಪ ಕೊಟ್ಟೂರು ಹೇಳಿದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ