ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ : ಗಚ್ಚಿನ ಶ್ರೀಗಳು
ಮಸ್ಕಿ : ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ. ಛಾಯಾಚಿತ್ರ ಇತಿಹಾಸ ನೆನಪಿಸುವ ಮಹತ್ತರ ಕಲೆಯಾಗಿದೆ ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಮಹಾಸ್ವಾಮಿಗಳು ರವರ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದ ಆವರಣದಲ್ಲಿ ರವಿವಾರ ಮಸ್ಕಿ ತಾಲ್ಲೂಕು ಫೋಟೋಗ್ರಾಫರ್ ವಿಡಿಯೋಗ್ರಾಫರ್ಸ ಸಂಘದ ವತಿಯಿಂದ ೧೮೫ ನೇ ವಿಶ್ವ ಛಾಯಾಗ್ರಹಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಗಳು ಮಾತನಾಡಿದರು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಮಾತನಾಡಿ,ಫೋಟೋ ಗ್ರಾಫರ್ ವಿಡಿಯೋ ಗ್ರಾಫರ್ಸ ಸಂಘಟಿತರಾಗುವ ಮೂಲಕ ಈ ಕ್ಷೇತ್ರದಲ್ಲಿ ಹೊಸತನಕ್ಕಾಗಿ ಹುಡುಕಾಟ ನಡೆಸುತ್ತಿರುವ ಛಾಯಾಗ್ರಾಹಕರ ಒಗ್ಗಟ್ಟು ಶ್ಲಾಘನೀಯವಾಗಿದೆ.ಸಂಘದ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ, ಸಂಘದ ಸದಸ್ಯರು ಮಾಜಿ ಶಾಸಕರಿಗೆ ಛಾಯಾಚಿತ್ರ ಭವನ ನಿಮಾರ್ಣ ಕ್ಕೆ ಮನವಿ ಸಲ್ಲಿಸಿದರು.
ಹಿರಿಯ ಛಾಯಾಗ್ರಾಹಕರಾದ ಹುಸೇನಬಾಷಾ ಪಾಮನಕಲ್ಲೂರು,ಸತೀಶ್ ಹಿರೇಮಠ, ಚಾಂದಸಾಬ್ ಹಾಲಾಪುರ,ಇವರಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ,ಸಂಘದ ಅಧ್ಯಕ್ಷ ಅಮರೇಶ ನಾಯ್ಕ ಮಸ್ಕಿ ರಾಯಚೂರು ಸಿಟಿ ಫೋಟೋಗ್ರಾಫರ್ ಸಂಘದ ಅಧ್ಯಕ್ಷ ಅಕ್ಬರ್, ರವಿ ಗಡ್ಡದ್ ಮಾನವಿ,ಕರಿಯಪ್ಪ ಹೂಸೂರು ಸಿರಿವಾರ,ವಿರೇಶ್ ಮಸ್ಕಿ ದೇವದುರ್ಗ,ದೊಡ್ಡಪ್ಪ ಸಗರದ್ ಹಾಗೂ ಸಂಘದ ಪದಾಧಿಕಾರಿಗಳು ಮಹಿಳೆಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ