ಬಿಜೆಪಿ ನಾಯಕರ ನೀಚ ರಾಜಕಾರಣ
ಬಳ್ಳಾರಿ: ರಾಹುಲ್ ಗಾಂಧಿ ಹೇಳಿಕೆಯನ್ನು ತಿರುಚಿ ಅದರ ಲಾಭ ಪಡೆದುಕೊಳ್ಳಲು ದಶಕಗಳ ಕಾಲ ಶ್ರಮಿಸಿದ ಬಿಜೆಪಿಗರು ಇದೀಗ ಮತ್ತದೇ ಕುತಂತ್ರ ಬಳಸಲು ಸಿದ್ಧರಾಗಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀಸಲಾತಿ ತೆಗೆಯಬೇಕಾದರೆ ಎಲ್ಲಾ ರಂಗದಲ್ಲಿ ದಲಿತ, ಬುಡಕಟ್ಟು, ಅಲ್ಪಸಂಖ್ಯಾತ, ದಲಿತ ಜನಾಂಗದವರು ಕಾಣಿಸಿಕೊಳ್ಳಬೇಕು. ಅಂಬಾನಿ, ಅದಾನಿಯಂತೆ ಶ್ರೀಮಂತರ ಪಟ್ಟಿಯಲ್ಲಿ ಈ ಜನಾಂಗ ಕಾಣಿಸಿಕೊಳ್ಳಬೇಕು. ಆಗ ಮೀಸಲಾತಿ ಕೊನೆಗೊಳಿಸುವ ಕುರಿತು ಕಾಂಗ್ರೆಸ್ ಮಾತನಾಡಬಲ್ಲದು ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಿರುಚಿ, ರಾಜಕೀಯ ಲಾಭ ಮಾಡಿಕೊಳ್ಳುವ ನೀಚ ಕೆಲಸಕ್ಕೆ ಬಿಜೆಪಿ ನಾಯಕರು ಕೈ ಹಾಕಿದ್ದಾರೆ ಎಂದಿದ್ದಾರೆ.
ಅಮೇರಿಕಾದಲ್ಲಿ ರಾಹುಲ್ ಗಾಂಧಿ ಮಾಡಿದ ವಿಶ್ಲೇಷಣೆಯನ್ನು ತಪ್ಪಾಗಿ ಅರಿತಿರುವ ಬಿಜೆಪಿ ನಾಯಕರು ರಾಹುಲ್ ಗಾಂಧಿ ದೇಶಕ್ಕೆ ಅಪಮಾನ ಮಾಡಿದ್ದಾರೆಂದು ಬೊಬ್ಬೆ ಇಡುತ್ತಿದ್ದಾರೆ. ವಾಸ್ತವದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು. ಇವರಿಗೆ ಅರಿವಿಗೆ ಇದ್ದಂತೆ ಕಾಣಲ್ಲ ಎಂದು ಕುಟುಕಿದ್ದಾರೆ.
ದೊಡ್ಡ ದೊಡ್ಡ ವ್ಯಾಪಾರಿಗಳ ಪಟ್ಟಿ ತೆಗೆದುಕೊಳ್ಳಿ ಒಬ್ಬೇ ಒಬ್ಬ ಒಬಿಸಿ, ಎಸ್‌ಟಿ, ಎಸ್‌ಸಿ ನಾಯಕರು ಸಿಗಲ್ಲ. ಈ ಜನಾಂಗದವರು ಖಂಡಿತಾ ಬೆಳೆಯಲು ಸಾಧ್ಯವಿಲ್ಲ. ದೇಶವನ್ನು ನಡೆಸುವ 70 ಪ್ರಮುಖ ಕಾರ್ಯದರ್ಶಿಗಳು, ಇದರಲ್ಲಿ ಒಬ್ಬರೇ ಒಬ್ಬರು ಇಲ್ಲ. ಶೇ.73ರಷ್ಟು ಇರುವ ಈ ದಲಿತ, ಬುಡಕಟ್ಟು, ಇತರೆ ಹಿಂದುಳಿದವರು, ಅಲ್ಪಸಂಖ್ಯಾತರು ಒಂದೇ ಒಂದು ಸ್ಥಾನ ಪಡೆದುಕೊಂಡಿಲ್ಲ. ಬುಡಕಟ್ಟು 10 ಪೈಸೆ, ದಲಿತರು, ಒಬಿಸಿಗಳು ತಲಾ 10 ರೂ. ಮಾತ್ರ ಪಡೆದುಕೊಳ್ಳುತ್ತಾರೆ. ಅವರು ಎಲ್ಲೂ ಸಹ ಆಡಳಿತ ಭಾಗ ಅಗಿಲ್ಲ. ಶೇ.90ರಷ್ಟು ಭಾರತೀಯರು ಎಲ್ಲೂ ಸಹ ಆಡಳಿತದ ಭಾಗ ಆಗಿಲ್ಲ. ದೊಡ್ಡ ದೊಡ್ಡ ವ್ಯಾಪಾರಿಗಳ ಪಟ್ಟಿಯಲ್ಲಿ ಒಬ್ಬರೋ, ಇಬ್ಬರೋ ಈ ಜನಾಂಗದವರು ಇದ್ದಾರೆ ಎಂಬುದಾಗಿ ರಾಹುಲ್ ಗಾಂಧಿ ವಿಶ್ಲೇಷಿಸಿದ್ದಾರೆ.
ಇಂತಹ ಸ್ಥಿತಿಯಲ್ಲಿ ಮೀಸಲಾತಿಯನ್ನು ರದ್ದುಮಾಡುವುದು ಸಾಧ್ಯವಿಲ್ಲ. ಒಂದು ವೇಳೆ ಜನ ಸಂಖ್ಯೆ ಆಧಾರದಲ್ಲಿ ಆರ್ಥಿಕ, ಆಡಳಿತಾತ್ಮಕ ಪಾಲುದಾರಿಕೆ ಸಿಕ್ಕಾಗ ಮಾತ್ರ ಮೀಸಲಾತಿ ರದ್ದುಮಾಡುವ ಕುರಿತು ಚಿಂತಿಸಬಹುದು. ಅಲ್ಲಿಯ ತನಕ ಮೀಸಲಾತಿ ರದ್ದುಮಾಡುವುದು ಅಸಾಧ್ಯ ಎಂದಿದ್ದಾರೆ.
ಅಷ್ಟೇ ಅಲ್ಲ ಈ ಜನಾಂಗ ಉದ್ಧಾರ ಆಗಲು ಕೇವಲ ಮೀಸಲಾತಿ ಸಾಲದು ಇದರ ಜೊತೆಗೆ ದೊಡ್ಡ ದೊಡ್ಡ ರಂಗಗಳಲ್ಲಿ ಆಡಳಿತದಲ್ಲಿ ಈ ಜನಾಂಗ ಬರಬೇಕು. ಎಲ್ಲಾ ಕಡೆ ಮೇಲ್ಜಾತಿಗರಿಗೆ ಸಿಕ್ಕ ಹಾಗೆ ಇವರಿಗೂ ಅವಕಾಶ ಸಿಗಬೇಕು ಎಂಬ ಮಾತನ್ನು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ಮೀಸಲಾತಿ ಕೊನೆಗೊಳಿಸುವ ಕುರಿತು ಯೋಚಿಸಬೇಕಾದರೆ ಈ ಅಸಮಾನತೆ ಶಾಶ್ವತವಾಗಿ ತೊಲಗಬೇಕು ಎಂಬ ರಾಹುಲ್ ಗಾಂಧಿ ಅವರು ಒಟ್ಟು ಮಾತಿನ ಸಾರವನ್ನು ಅರಿಯದ ಬಿಜೆಪಿಗರು ಇಲ್ಲವೇ ಅರಿತರೂ ಕೆಲವೇ ತುಣುಕುಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸಮಾಡುತ್ತಿದ್ದಾರೆ.
ಕಾಂಗ್ರೆಸ್ ಎಂದಿಗೂ ಮೀಸಲಾತಿ ವಿರೋಧಿ ಅಲ್ಲ. ಬದಲಿಗೆ ಮೇಲ್ಜಾತಿಗರಂತೆ ಒಬಿಸಿ, ಬುಡಕಟ್ಟು, ದಲಿತ, ಅಲ್ಪಸಂಖ್ಯಾತರು ಸಹ ಎಲ್ಲಾ ರಂಗದಲ್ಲಿ ಕಾಣಿಸುವಂತೆ ಆಗಬೇಕು. ಆಗ ಮಾತ್ರ ಮೀಸಲಾತಿ ತೆಗೆಯುವ ಕುರಿತು ಮಾತನಾಡಬೇಕೆಂದು ಹೇಳಿದ್ದಾರೆ ಎಂಬುನ್ನು ಬಿಜೆಪಿ ನಾಯಕರು ಅರಿಯಬೇಕು ಎಂದು ಅವರು ತಿಳಿಸಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ