ಬೆಂಗಳೂರಿನಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದಿಂದ ಸಂಸ್ಕೃತ ಭಾಷೆ ಕಲಿಕೆಗೆ “ಸಂಸ್ಕೃತ ಪ್ರಚಾರ ಪಥ” ಸಂಚಲನ ಕಾರ್ಯಕ್ರಮಕ್ಕೆ ಚಾಲನೆ

 

ಬೆಂಗಳೂರು; ಜನರಿಂದ ದೂರವಾಗುತ್ತಿರುವ ಸಂಸ್ಕೃತ ಭಾಷೆಗೆ ಮತ್ತೆ ಘನತೆ, ಗೌರವ ತಂದುಕೊಡಲು ಬೆಂಗಳೂರು ನಗರದಲ್ಲಿ “ಸಂಸ್ಕೃತ ಪ್ರಚಾರ ಪಥ” ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ. 

ಸಂಸ್ಕೃತ ದೇವನಾಗರಿ ಭಾಷೆ. ಸನಾತನ ಕಾಲದ ದೈವ ಬಾಷೆ. ಎಲ್ಲಾ ಭಾರತೀಯ ಭಾಷೆಗಳಿಗೂ ಸಂಸ್ಕೃತವೇ ಮೂಲ. ಜರ್ಮನ್ ನಂತಹ ವಿದೇಶಿ ಭಾಷೆಗಳು ಸಹ ಸಂಸ್ಕೃತವನ್ನು ಆಧರಿಸಿವೆ. ಈ ಹಿನ್ನೆಲೆಯಲ್ಲಿ ಸಂಸ್ಕೃತದ ವೈಭವವನ್ನು ಮರಳಿ ತರಲು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಜಯಗರದ ಶ್ರೀ ವಾಸವಿ ವೇದ ಪಾಠಶಾಲೆ ಪ್ರಾಚಾರ್ಯರಾದ ನರೇಂದ್ರ ಮತ್ತು ಸಂಸ್ಥೆಯ ಅಧ್ಯಕ್ಷ ಡಾ.ವಿಷ್ಣು ಭರತ್ ಆಲಂಪಳ್ಳಿ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ “ಸಂಸ್ಕೃತ ಪ್ರಚಾರ ಪಥ” ಸಂಚರಿಸಲಿದೆ. 

ಈ ಕುರಿತು ಜಯನಗರದಲ್ಲಿ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು, ಮಕ್ಕಳಿಗೆ ಭಾಷೆಯ ಬಗ್ಗೆ ಆಸಕ್ತಿ, ಸ್ಮರಣೆ ಶಕ್ತಿ, ಗ್ರಹಣ ಶಕ್ತಿ, ಜೀವನದಲ್ಲಿ ಸಾಧಿಸುವ ಗುಣಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ್ ಸಂಸ್ಕೃತದ ಮಹತ್ವ ಕುರಿತಾದ ಉಪನ್ಯಾಸ ನೀಡಿದರು. ಈ ಸಂಸ್ಥೆಯು ಕಳೆದ 45 ವರ್ಷಗಳಿಂದ ವೇದ,ಉಪನಿಷತ್,ಸಂಸ್ಕೃತ ಕುರಿತಾದ ಕಾರ್ಯಕ್ರಮಗಳನ್ನೂ ನೆಡೆಸುತ್ತಾ ಬಂದಿದೆ. 
ಸಂಸ್ಥೆಯು ದಕ್ಷಿಣ ಭಾರತದಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಸತಿ, ವೈದ್ಯಕೀಯ ಸೌಲಭ್ಯ, ಪಠ್ಯ ಪುಸ್ತಕ, ವಸ್ತ್ರ ಮುಂತಾದ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ,. ಅಹಲ್ಯಾ, ಕಾರ್ಯದರ್ಶಿ ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ