1859 ನೆ ಮದ್ಯವರ್ಜನ ಶಿಬಿರ ಕಾರ್ಯಕ್ರಮ

 

ಮಸ್ಕಿ : ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಗೂ ಅಖಿಲ ಕರ್ನಾಟಕಜಿಲ್ಲಾ ಜನಜಾಗೃತಿ ವೇದಿಕೆ ರಾಯಚೂರು ಸಹ ಯೋಗದಲ್ಲಿ ನಡೆಯುತ್ತಿರುವ 1859 ನೆ ಮದ್ಯವರ್ಜನ ಶಿಬಿರ ಕಾರ್ಯಕ್ರಮ ವನ್ನು ಮಾಜಿ ಶಾಸಕರು ಪ್ರತಾಪ ಗೌಡ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯವರ್ಜನ ಶಿಬಿರ ಸಮಿತಿಯ ವ್ಯವಸ್ಥಾಪಕರಾದ ಹೆಚ್.ಬಿ ಮುರಾರಿ ವಹಿಸಿಕೊ0ಡಿದ್ದರು ಕಾರ್ಯಕ್ರಮ ದ ಮುಖ್ಯ ಅತಿಥಿಗಳು ಡಾ ಬಿ.ಹೆಚ್ ಡಿವಟರ ಡಾ ಮಾನ್ಯ ಜಿಲ್ಲಾ ನಿರ್ದೇಶಕ ರಾದ ಮೋಹನ ನಾಯ್ಕ ಅವರು ಹಾಗೂ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಗಳು ನಾಗೇಶ್ ಸರ್, ಅಂದಾನಪ್ಪ ಗುಂಡಳ್ಳಿ, 

ಕೆ.ಅಪ್ಪಾಜಿಗೌಡ, ಶ್ರೀಮತಿ ಗೀತಾ ಶಿವರಾಜ್, ಎಮ್ ಅಂಬರೀಶ್, ವೀರೇಶ್ ಸೌದ್ರಿ, ಜಿ ಶಾಲಿನಿ ಇವರ ಉಪಸ್ಥಿತಿಯಲ್ಲಿ. ಈ ಕಾರ್ಯಕ್ರಮ ಸತತವಾಗಿ ಎಂಟು ದಿನಗಳ ಕಾಲ ನಡೆಯಲಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾಜಿ ಶಾಸಕರು ಕುಡಿತ ಚಟದಿಂದ ವಯಕ್ತಿಕ ಜೀವನ ಅಷ್ಟೇ ಅಲ್ಲದೆ ಕುಟುಂಬವು ಕೂಡ ಬೀದಿಗೆ ಬರುತ್ತದೆ ಕುಡಿತದಂತಹ ಚಟಗಳಿಂದ ದೂರವಿರಿ ಎಂದು ಎಲ್ಲ ಶಿಬಿರಾರ್ಥಿಗಳಿಗೆ ತಿಳಿಸಿದರು. ಇಂಥ ಮದ್ಯ ವರ್ಜನ ಶಿಬಿರ ರಾಜ್ಯದಲ್ಲಿ 1 ಲಕ್ಷ 36 ಸಾವಿರ ಜನ ಇದರ ಪ್ರಯೋಜನವನ್ನು ಪಡೆದುಕೊಂಡು ಹೊಸ ಬದುಕನ್ನು ಕಟ್ಟಿಕೊಂಡಿದ್ದು ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದಾರೆ ಎಂದು ಮಾತನಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ